For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?

  |

  ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಬರ್ಟ್ ಸಿನಿಮಾ ಕೂಡ ಒಂದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಲೆ ಇದೆ.

  ಏಪ್ರಿಲ್ 9, ಮೇ 1 ಹೀಗೆ ರಾಬರ್ಟ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತನೆ ಬಂದಿದೆ. ಸದ್ಯ ರಾಬರ್ಟ್ ಬಿಡುಗಡೆಗೆ ಮತ್ತೊಂದು ಹೊಸ ರಿಲೀಸ್ ಡೇಟ್ ಕೇಳಿ ಬರುತ್ತಿದೆ. ವಿಶೇಷ ದಿನದಂದು ರಾಬರ್ಟ್ ಅದ್ದೂರಿಯಾಗಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ..

  ಕಾರ್ಮಿಕರ ದಿನಾಚರಣೆಗೆ ದರ್ಶನ್ ವಿಶ್: ಕ್ಯಾಮೆರಾ ಹಿಂದಿನ ಹೀರೋಗಳಿಗೆ 'ರಾಬರ್ಟ್'ತಂಡ ಗೌರವಕಾರ್ಮಿಕರ ದಿನಾಚರಣೆಗೆ ದರ್ಶನ್ ವಿಶ್: ಕ್ಯಾಮೆರಾ ಹಿಂದಿನ ಹೀರೋಗಳಿಗೆ 'ರಾಬರ್ಟ್'ತಂಡ ಗೌರವ

  ಆಗಸ್ಟ್ 15ಕ್ಕೆ ರಾಬರ್ಟ್ ರಿಲೀಸ್?

  ಆಗಸ್ಟ್ 15ಕ್ಕೆ ರಾಬರ್ಟ್ ರಿಲೀಸ್?

  ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನ ರಾಬರ್ಟ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೂ ಬಹಿರಂಗಪಡಿಸಿಲ್ಲ. ರಾಬರ್ಟ್ ದರ್ಶನಕ್ಕೆ ಕಾದು ಕುಳಿತಿರುವ ಅಭಿಮಾನಗಳಿಗೆ ನಿರಾಸೆಯಾಗುತ್ತಲೆ ಇದೆ. ಹಾಗಾಗಿ ಆಗಸ್ಟ್ 15ಕ್ಕೆ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ.

  ಆಗಸ್ಟ್ 15ಕ್ಕೆ ಲಾಕ್ ಡೌನ್ ಮುಗಿದಿರುತ್ತೆ

  ಆಗಸ್ಟ್ 15ಕ್ಕೆ ಲಾಕ್ ಡೌನ್ ಮುಗಿದಿರುತ್ತೆ

  ಆಗಸ್ಟ್ 15ರಷ್ಟೊತ್ತಿಗೆ ಲಾಕ್ ಡೌನ್ ಮುಗಿದಿರುತ್ತೆ. ಅಲ್ಲದೆ ಪರಿಸ್ಥಿತಿ ಸಹ ಸಹಜಸ್ಥಿತಿಯತ್ತ ಬಂದಿರುತ್ತೆ. ಆ ಸಮಯದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಮಾಡಬಹುದು ಎನ್ನುವುದು ಚಿತ್ರತಂಡದ ಲೆಕ್ಕಾಚಾರ ಇದ್ದರು ಇರಬಹುದು. ಆಗಸ್ಟ್ 15 ಶನಿವಾರ ಬರುವ ಕಾರಣ ಮುಂಚಿತವಾಗಿ ಅಂದರೆ ಆಗ್ಟ್ 14ಕ್ಕೆ ರಿಲೀಸ್ ಆಗುವ ಸಾಧ್ಯತೆಯೂ ಇದೆ.

  ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ

  ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ

  ರಾಬರ್ಟ್ ಚಿತ್ರದ ಟ್ರೈಲರ್ ಮತ್ತು ಟೀಸರ್ ಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಮೇಕಿಂಗ್ ವಿಡಿಯೋ ಗಿಫ್ಟ್ ಆಗಿ ನೀಡಿದೆ. ಕಾರ್ಮಿಕರ ದಿನಾಚರಣೆ ದಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಕ್ಯಾಮರಾ ಹಿಂದೆ ಕೆಲಸ ಮಾಡುವ ಕಾರ್ಮಿಕರಿಗೆ ಅರ್ಪಣೆ ಮಾಡಿದೆ.

  ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ ರಾಬರ್ಟ್

  ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ ರಾಬರ್ಟ್

  ರಾಬರ್ಟ್ ಚಿತ್ರದಿಂದ ಈಗಾಗಲೆ ಮೂರು ಹಾಡುಗಳು ರಿಲಸ್ ಆಗಿವೆ. ಜೊತೆಗೆ ರಾಮನವಮಿ ಪ್ರಯುಕ್ತ ಚಿತ್ರದ ಜೈ ಶ್ರೀರಾಮ್ ಹಾಡಿನ ಹೊಸ ಅವತರಣಿಕೆಯನ್ನು ಬಿಡುಗಡೆ ಮಾಡಲಾಗಿದೆ. ಟೈಟಲ್ ಟ್ರ್ಯಾಕ್, ಬ್ರದರ್ ಸಾಂಗ್ ಮತ್ತು ಜೈ ಶ್ರೀರಾಮ್ ಹಾಡುಗಳು ಅಭಿಮಾನಿಗಳ ಮನಗೆದ್ದಿವೆ. ಇನ್ನೇನಿದ್ರು ಟ್ರೈಲರ್ ಮತ್ತು ಸಿನಿಮಾ ನೋಡು ಸಂಭ್ರಮಿಸುವುದೊಂದೆ ಬಾಕಿ ಇದೆ.

  English summary
  Challenging star Darshan starrer most expected Roberrt film may release on August 15th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X