Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕುರುಕ್ಷೇತ್ರ' ಮಾಡಿದ್ದಕ್ಕೆ ದರ್ಶನ್ ಗೆ ಸಿಕ್ಕ ಸ್ಪೆಷಲ್ ಉಡುಗೊರೆ

ಸಾಮಾನ್ಯವಾಗಿ ಒಬ್ಬ ಹೀರೋ ಒಂದು ಸಿನಿಮಾ ಮಾಡಿದಾಗ, ಆ ಚಿತ್ರದ ನಿರ್ಮಾಪಕ ಹೆಚ್ಚು ಸಂಭಾವನೆ ನೀಡಿ ಸುಮ್ಮನಾಗ್ತಾರೆ. ಅದನ್ನ ಮೀರಿದ ಕೆಲವು ನಿರ್ಮಾಪಕರು ಬಂದ ಲಾಭದಲ್ಲಿ ಏನಾದರೂ ಉಡುಗೊರೆಯನ್ನ ನೀಡಿರುವುದನ್ನ ಗಮನಿಸಿದ್ದೀವಿ. ಈಗ ಅಂತಹದ್ದೇ ಘಟನೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ನಡೆದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಖುಷಿಯಲ್ಲಿರುವ ನಿರ್ಮಾಪಕ ಮುನಿರತ್ನ ದುರ್ಯೋಧನ ಪಾತ್ರ ನಿರ್ವಹಿಸಿರುವ ದರ್ಶನ್ ಗೆ ಅತ್ಯಮೂಲ್ಯವಾದ ಉಡುಗೊರೆ ನೀಡಿದ್ದಾರಂತೆ.
'ಕುರುಕ್ಷೇತ್ರ' ಚಿತ್ರದ 5 ಲೇಟೆಸ್ಟ್ ಸುದ್ದಿಗಳು
ಈ ಮೂಲಕ ದಾಸನ 50ನೇ ಚಿತ್ರವನ್ನ ಮತ್ತಷ್ಟು ಸ್ಮರಿಸುವಂತೆ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಅಷ್ಟಕ್ಕೂ, ಕುರುಕ್ಷೇತ್ರ ಸೆಟ್ ನಲ್ಲಿ ದುರ್ಯೋಧನ ದರ್ಶನ್ ಗೆ ಸಿಕ್ಕ ಗಿಫ್ಟ್ ಏನು? ಅದು ಯಾಕೆ ಚಕ್ರವರ್ತಿಗೆ ಅಷ್ಟೊಂದು ವಿಶೇಷ ಎಂದು ತಿಳಿಯಲು ಮುಂದೆ ಓದಿ......

ನಿರ್ಮಾಪಕನ ಹೃದಯ ಗೆದ್ದ ದುರ್ಯೋಧನ
ದರ್ಶನ್ ದುರ್ಯೋಧನನ ಪಾತ್ರ ಮಾಡದಿದ್ರೆ, ಕುರುಕ್ಷೇತ್ರ ಸಿನಿಮಾ ಆಗುತ್ತಿರಲಿಲ್ಲ ಎಂದು ಹೇಳುತ್ತಿದ್ದ ನಿರ್ಮಾಪಕ ಮುನಿರತ್ನ ಈಗ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ ಖುಷಿಯಲ್ಲಿದ್ದಾರೆ. ಈ ಸಂತೋಷವನ್ನ ನಟ ದರ್ಶನ್ ಜೊತೆ ಹಂಚಿಕೊಂಡಿದ್ದು, ದಾಸನ ಅಭಿನಯಕ್ಕೆ ಮೆಚ್ಚಿ ವಿಶೇಷವಾದ ಉಡುಗೊರೆ ನೀಡಿದ್ದಾರೆ.
ದರ್ಶನ್ ಜೊತೆಗೆ ನಟಿಸಿದ್ಮೇಲೆ ಅರ್ಜುನ್ ಸರ್ಜಾ ಮನಸ್ಸಲ್ಲಿ ಮೂಡಿದ ಭಾವನೆ ಏನು.?

ದರ್ಶನ್ ಗೆ ಉಡುಗೊರೆ ನೀಡಿದ ಮುನಿರತ್ನ
ಮಹತ್ವದ 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ಪಾತ್ರ ನಿರ್ವಹಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಿರ್ಮಾಪಕ ಮುನಿರತ್ನ ವಿಶೇಷವಾದ ಗೌರವ ನೀಡಿದ್ದಾರೆ. 50ನೇ ಚಿತ್ರದಲ್ಲಿ ದುರ್ಯೋಧನ ಪಾತ್ರ ಮಾಡಿದ ಕಾರಣ, ಕುರುಕ್ಷೇತ್ರ ಸೆಟ್ ನಲ್ಲಿ ಇಷ್ಟವಾಗಿದ್ದನ್ನ ಮನೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಗದೆ, ಕಿರೀಟಿ ಬೇಕು ಎಂದ ದಾಸ
ಮುನಿರತ್ನ ಅವರ ಮಾತಿಗೆ ಮನ್ನಣೆ ನೀಡಿದ ದಾಸ, ಕುರುಕ್ಷೇತ್ರ ಚಿತ್ರದ ಸೆಟ್ ನಿಂದ ದುಯೋರ್ಧನನಾಗಿ ತಾವು ಬಳಸಿದ ಗದೆ ಮತ್ತು ಕಿರೀಟವನ್ನ ತೆಗೆದುಕೊಂಡ ಹೋಗಲು ನಿರ್ಧರಿಸಿದ್ದಾರಂತೆ. ಇದರ ಜೊತೆ ದುರ್ಯೋಧನ ಪಾತ್ರಕ್ಕಾಗಿಯೇ ವಿನ್ಯಾಸ ಮಾಡಲಾಗಿದ್ದು, ವಸ್ತ್ರವನ್ನ ಕೂಡ ದರ್ಶನ್ ತೆಗೆದುಕೊಳ್ಳಲಿದ್ದಾರೆ.
ಚಿತ್ರಗಳು: 'ಕುರುಕ್ಷೇತ್ರ'ದಲ್ಲಿ 'ಗಜ' ದರ್ಶನ್ ದರ್ಬಾರ್

ಸೋಲು-ಗೆಲವು ಮುಖ್ಯವಲ್ಲ
ಒಬ್ಬ ನಟನಿಗೆ 25ನೇ ಸಿನಿಮಾ, 50ನೇ ಚಿತ್ರ, 75 ಹಾಗೂ 100ನೇ ಚಿತ್ರಗಳು ವಿಶೇಷವಾಗಿರುತ್ತೆ. ಈ ಚಿತ್ರಗಳಲ್ಲಿ ಸೋಲು ಮತ್ತು ಗೆಲುವು ಮುಖ್ಯವಲ್ಲ. ಈಗ ನಾನು 50ನೇ ಸಿನಿಮಾದಲ್ಲಿ ದುರ್ಯೋಧನ ಪಾತ್ರ ಮಾಡಿರುವುದೇ ನನ್ನ ಜೀವನದ ಮೈಲಿಗಲ್ಲು.

ಮುನಿರತ್ನ ಕೆಸಲಕ್ಕೆ ಶ್ಲಾಘನೆ
ಇಂತಹ ಸಿನಿಮಾಗಳನ್ನ ಮಾಡಲು ನಿರ್ಮಾಪಕರಿಗೆ ಧೈರ್ಯವಿರಬೇಕು. ಇಂತಹ ಧೈರ್ಯ ಮುನಿರತ್ನ ಅವರಿಗೆ ಇದ್ದ ಕಾರಣವೇ ಈ ಸಿನಿಮಾ ಆಗಿದೆ. ಈ ಚಿತ್ರದ ಹಿಂದೆ ರಾಜಕೀಯ ಲಾಭ ಇದೆ ಎಂಬ ಮಾತಿದೆ. ಆದ್ರೆ, ಅದು ಸುಳ್ಳು. ಕುರುಕ್ಷೇತ್ರ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಂದು ಮಹತ್ವದ ಸಿನಿಮಾ ಆಗಲಿದೆ ಎಂದು ದರ್ಶನ್ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರ ಬಿಡುಗಡೆಗೂ ಮುಂಚೆಯೇ ಕಟೌಟ್ ಹಾಕಿಸಿಕೊಂಡ 'ಡಿ ಬಾಸ್'

'ಕುರುಕ್ಷೇತ್ರ' ಕಂಪ್ಲೀಟ್
ಸತತ ಮೂರು ತಿಂಗಳಿನಿಂದ ಹೈದ್ರಾಬಾದ್ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದ 'ಕುರುಕ್ಷೇತ್ರ' ಅಂತಿಮವಾಗಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿರುವ ಚಿತ್ರತಂಡ ಮಾರ್ಚ್ ಅಂತ್ಯಕ್ಕೆ ತೆರೆಮೇಲೆ ಬರುವ ತಯಾರಿಯಲ್ಲಿದೆ. ದರ್ಶನ್ ಜೊತೆ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಮೇಘನಾ ರಾಜ್, ಸ್ನೇಹಾ, ರವಿಶಂಕರ್, ಅಂಬರೀಷ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.