twitter
    For Quick Alerts
    ALLOW NOTIFICATIONS  
    For Daily Alerts

    'ಡಿಯರ್ ಕಾಮ್ರೇಡ್' ಮೊದಲ ದಿನದ ಕಲೆಕ್ಷನ್ ರಿಪೋರ್ಟ್

    |

    ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಮತ್ತು ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ 'ಡಿಯರ್ ಕಾಮ್ರೇಡ್' ಸಿನಿಮಾ ಶುಕ್ರವಾರ ವರ್ಲ್ಡ್ ವೈಡ್ ನಾಲ್ಕು ಭಾಷೆಯಲ್ಲಿ ತೆರೆಕಂಡಿದೆ. ಮೂಲ ತೆಲುಗು ಸಿನಿಮಾ ಆಗಿದ್ದು, ಕನ್ನಡ, ತೆಲುಗು, ಮಲಯಾಳಂ ಭಾಷೆಯಲ್ಲಿ ಮೂಡಿ ಬಂದಿದೆ.

    ಸದ್ಯ ವಿಜಯ್ ದೇವರಕೊಂಡ ಚಿತ್ರಗಳಿಗೆ ಬಾಕ್ಸ್ ಆಫೀಸ್ ನಲ್ಲಿ ಬೇಡಿಕೆ ಹೆಚ್ಚಿದ್ದು, ಮೊದಲ ದಿನ ಡಿಯರ್ ಕಾಮ್ರೇಡ್ ದಾಖಲೆ ಮೊತ್ತ ಗಳಿಸಬಹುದು ಎಂಬ ನಿರೀಕ್ಷೆ, ಲೆಕ್ಕಾಚಾರ ಹಾಕಲಾಗಿತ್ತು. ಆ ನಿರೀಕ್ಷೆಯಂತೆ ದೇವರಕೊಂಡ ಸಿನಿಮಾ ಭರ್ಜರಿ ಸದ್ದು ಮಾಡಿದೆ.

    Dear Comrade Review : ಬಾಬಿ - ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿ Dear Comrade Review : ಬಾಬಿ - ಲಿಲ್ಲಿಯ ಎಮೋಷನಲ್ ಲವ್ ಸ್ಟೋರಿ

    ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಯುಎಸ್ ಸೇರಿದಂತೆ ಜಗತ್ತಿನಾದ್ಯಂತ ಒಳ್ಳೆಯ ಗಳಿಕೆ ಕಂಡಿದೆ ಡಿಯರ್ ಕಾಮ್ರೇಡ್. ಭರತ್ ಕಮ್ಮು ನಿರ್ದೇಶನ ಈ ಚಿತ್ರ ಮೊದಲ ದಿನ ಎಷ್ಟು ಗಳಿಸಿದೆ? ದೇವರಕೊಂಡ ಅವರ ಈ ಹಿಂದಿನ ಚಿತ್ರದ ದಾಖಲೆ ಹಿಂದಿಕ್ಕಿದ್ಯಾ? ಮುಂದೆ ಓದಿ....

    ಆಂಧ್ರ-ತೆಲಂಗಾಣದಲ್ಲಿ ಕಾಮ್ರೇಡ್ ಕಲರವ

    ಆಂಧ್ರ-ತೆಲಂಗಾಣದಲ್ಲಿ ಕಾಮ್ರೇಡ್ ಕಲರವ

    ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಡಿಯರ್ ಕಾಮ್ರೇಡ್ ಸಮಾಧಾನಕಾರ ಮೊತ್ತ ಗಳಿಸಿದೆ. ಮೊದಲ ದಿನ ಒಟ್ಟಾರೆ 10.2 ಕೋಟಿ ಗಳಿಸಿದ್ದು, ನೆಟ್ ಕಲೆಕ್ಷನ್ 7.48 ಕೋಟಿಯಂತೆ. ಈ ಹಿಂದೆ ತೆರೆಕಂಡಿದ್ದ ನೋಟಾ ಸಿನಿಮಾ ಒಟ್ಟಾರೆ 12.1 ಕೋಟಿ ಹಾಗೂ ನೆಟ್ ಗಳಿಕೆ 6.8 ಕೋಟಿ ಎಂದು ವರದಿಯಾಗಿತ್ತು. ಅದಕ್ಕೆ ಹೋಲಿಸಿಕೊಂಡರೆ ಡಿಯರ್ ಕಾಮ್ರೇಡ್ ಯಶಸ್ಸು ಕಂಡಿದೆ.

    ಈ ಕಾರಣಕ್ಕಾಗಿ ರಶ್ಮಿಕಾ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದರಂತೆ ತಂದೆ-ತಾಯಿಈ ಕಾರಣಕ್ಕಾಗಿ ರಶ್ಮಿಕಾ ಚಿತ್ರರಂಗಕ್ಕೆ ಬರುವುದು ಬೇಡ ಎಂದಿದ್ದರಂತೆ ತಂದೆ-ತಾಯಿ

    ಯುಸ್ ನಲ್ಲಿ ದೇವರಕೊಂಡ ಕಮಾಲ್

    ಯುಸ್ ನಲ್ಲಿ ದೇವರಕೊಂಡ ಕಮಾಲ್

    ಆಂಧ್ರಪ್ರದೇಶ ಮತ್ತು ತೆಲಂಗಾಣ ಬಿಟ್ಟರೇ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಹೆಚ್ಚು ಗಳಿಕೆ ತಂದು ಕೊಟ್ಟಿದ್ದು ಯುಎಸ್ ರಾಷ್ಟ್ರದಲ್ಲಿ. ಯುಎಸ್ ನಲ್ಲಿ ದೇವರಕೊಂಡ ಸಿನಿಮಾ 3.2 ಕೋಟಿ ಗಳಿಸಿದೆ. ಈ ಹಿಂದೆ ನೋಟಾ ಸಿನಿಮಾ 1.85 ಕೋಟಿ ಆದಾಯ ಮಾಡಿತ್ತು.

    ನಟಿ ರಶ್ಮಿಕಾ ಮಂದಣ್ಣ ಮದುವೆಯಾಗುವ ಹುಡುಗ ಹೀಗಿರಬೇಕಂತೆ.! ನಟಿ ರಶ್ಮಿಕಾ ಮಂದಣ್ಣ ಮದುವೆಯಾಗುವ ಹುಡುಗ ಹೀಗಿರಬೇಕಂತೆ.!

    ಕರ್ನಾಟಕ ಗಳಿಕೆ ಎಷ್ಟು?

    ಕರ್ನಾಟಕ ಗಳಿಕೆ ಎಷ್ಟು?

    ಕನ್ನಡದಲ್ಲೂ ಡಿಯರ್ ಕಾಮ್ರೇಡ್ ಸಿನಿಮಾ ತೆರೆಕಂಡಿತ್ತು. ಆದರೆ, ಕನ್ನಡಕ್ಕಿಂತ ಮೂಲ ಭಾಷೆ ತೆಲುಗಿನಲ್ಲಿ ಸಿನಿಮಾ ನೋಡಲು ಜನರು ಆಸಕ್ತಿ ತೋರಿದ್ದಾರೆ. ವರದಿಗಳ ಪ್ರಕಾರ ಕರ್ನಾಟಕದಲ್ಲಿ ಮೊದಲ ದಿನ ಡಿಯರ್ ಕಾಮ್ರೇಡ್ ಸಿನಿಮಾ ಒಟ್ಟಾರೆ ಗಳಿಸಿದ್ದು 1.3 ಕೋಟಿ (ನಟೆ ಗಳಿಕೆ 72 ಲಕ್ಷ) ಎನ್ನಲಾಗಿದೆ.

    ದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಮನೆಯವರೇ ನಿರಾಕರಿಸಿದ್ದರು: ರಶ್ಮಿಕಾದೇವರಕೊಂಡ ಜೊತೆ ಸಿನಿಮಾ ಮಾಡ್ಬೇಡ ಎಂದು ಮನೆಯವರೇ ನಿರಾಕರಿಸಿದ್ದರು: ರಶ್ಮಿಕಾ

    ಒಟ್ಟಾರೆ ವರ್ಲ್ಡ್ ವೈಡ್ ಗಳಿಕೆ?

    ಒಟ್ಟಾರೆ ವರ್ಲ್ಡ್ ವೈಡ್ ಗಳಿಕೆ?

    ಇದನ್ನ ಬಿಟ್ಟು ಉಳಿದ ಭಾಷೆಗಳಲ್ಲಿ ಡಿಯರ್ ಕಾಮ್ರೇಡ್ ಸಿನಿಮಾ 3.2 ಕೋಟಿ ಎಂದು ಅಂದಾಜಿಸಲಾಗಿದೆ. ಇಂಟರ್ ನ್ಯಾಷನಲ್ ಬಿಸಿನೆಸ್ ಟೈಮ್ಸ್ ವರದಿ ಮಾಡಿರುವ ಪ್ರಕಾರ ಡಿಯರ್ ಕಾಮ್ರೇಡ್ ಸಿನಿಮಾದ ವರ್ಲ್ಡ್ ವೈಡ್ ಗಳಿಕೆ 17.9 ಕೋಟಿ ಎನ್ನಲಾಗಿದೆ. ಇನ್ನು ಪ್ರಿ-ರಿಲೀಸ್ ನಲ್ಲೇ ಹೆಚ್ಚು ಗಳಿಕೆ ಕಂಡಿದ್ದು 34 ಕೋಟಿ ವರೆಗೂ ಬಿಸಿನೆಸ್ ಮಾಡಿದೆಯಂತೆ.

    English summary
    Vijay devarakonda and rashmika mandanna starrer dear comrade first day collect 17.9 crores in world wide.
    Saturday, July 27, 2019, 11:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X