For Quick Alerts
  ALLOW NOTIFICATIONS  
  For Daily Alerts

  'ಪ್ರಥಮ್' ಬಿಗ್ ಬಾಸ್ ಎಂಟ್ರಿಗೆ ರಾಜಕಾರಣಿಗಳೆ ಕಾರಣವೇ ?

  By Bk
  |

  ಕಾವೇರಿ ವಿವಾದ, ರಾಜಕೀಯ ಗಲಾಟೆ, ಸಿನಿಮಾಗಳ ಆರ್ಭಟ ಈ ಎಲ್ಲದರ ಮಧ್ಯೆ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಏಕೈಕ ವ್ಯಕ್ತಿ ಅಂದ್ರೆ ಬಿಗ್ ಬಾಸ್ ಪ್ರಥಮ್. ಬಿಗ್ ಬಾಸ್ ಗೆ ಹೋದ ಮೊದಲ ದಿನದಿಂದಲೂ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡು ರೈಸಿಂಗ್ ಸ್ಟಾರ್ ಆಗಿದ್ದಾನೆ. ತನ್ನ ಅತಿರೇಕದ ವರ್ತನೆಯಿಂದ, ಮನೆಯ ಎಲ್ಲ ಸದಸ್ಯರಿಂದಲೂ ಛೀಮಾರಿ ಹಾಕಿಸಿಕೊಂಡು, ತನ್ನನ್ನ ತಾನೆ ಒಳ್ಳೆ ಹುಡುಗ ಅಂತ ಬಿಂಬಿಸಿಕೊಂಡಿದ್ದಾನೆ.

  ಇಷ್ಟೆಲ್ಲ ಹುಚ್ಚಾಟವನ್ನ ಮಾಡುತ್ತಿರುವ ಈ ಪ್ರಥಮ್ ಯಾರು ? ಯಾವ ಕ್ಷೇತ್ರದ ಸೆಲೆಬ್ರಿಟಿ ? ಅಸಲಿಗೆ ಬಿಗ್ ಬಾಸ್ ಮನೆಗೆ ಈ 'ಒಳ್ಳೆ ಹುಡುಗ' ಹೋಗಿದ್ದು ಹೇಗೆ ಎಂಬ ಚರ್ಚೆಗಳು ಸದ್ಯ, ಸಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ನಿಮ್ಗೆ ಗೊತ್ತೊ ಗೊತ್ತಿಲ್ಲವೊ ಈ ಪ್ರಥಮ್ ಎಂಬ ಯುವ ನಿರ್ದೇಶಕ ಬಿಗ್ ಬಾಸ್ ಮನೆಗೆ ಹೋಗೊಕೆ ಕಾರಣ ನಮ್ಮ ರಾಜಕಾರಣಿಗಳು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

  ಹೌದು, ನಮ್ಮ ರಾಜಕಾರಣಿಗಳ ಆರ್ಶೀವಾದವಿಲ್ಲದೆ ಹೋಗಿದ್ದರೆ ಬಹುಶಃ ಬಿಗ್ ಬಾಸ್ ಕನ್ನಡ ನಾಲ್ಕನೆ ಆವೃತ್ತಿಗೆ ಈ ಒಳ್ಳೆ ಹುಡುಗ ಹೋಗುತ್ತಿರಲಿಲ್ಲ ಅನ್ಸುತ್ತೆ. ಹಾಗಾದ್ರೆ, ಈ ಪ್ರಥಮ್ ಗೂ ರಾಜಕಾರಣಿಗಳಿಗೂ ಏನು ಸಂಬಂಧ. ಇಷ್ಟೊಂದು ಒಳ್ಳೆ ಹುಡುಗನನ್ನ ಬಿಗ್ ಬಾಸ್ ಕರೆದುಕೊಂಡಿದ್ದು ಯಾಕೆ ? ಬಿಗ್ ಬಾಸ್ ಮನೆ ಪ್ರವೇಶಿಸಲು ತೆರೆ ಹಿಂದೆ ಪ್ರಥಮ್ ಏನೆಲ್ಲಾ ಪ್ಲಾನ್ ಮಾಡಿದ್ದ ಅನ್ನೊ ಇಂಟ್ರಸ್ಟಿಂಗ್ ಸ್ಟೋರಿ ಮುಂದೆ ಇದೆ ನೋಡಿ.

  ಪ್ರಥಮ್ ಯಾರು.?

  ಪ್ರಥಮ್ ಯಾರು.?

  ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಥಮ್, 'ದೇವ್ರಾವ್ನೆ ಬುಡು ಗುರು' ಚಿತ್ರದ ನಿರ್ದೇಶಕ. ಆದರೆ ಆ ಸಿನಿಮಾ ಏನಾಯ್ತು, ಯಾವ ಹಂತದಲ್ಲಿದೆ ಎನ್ನುವುದು ಮಾತ್ರ ಗೊತ್ತಿಲ್ಲ. ಸೀಸನ್ 2 ಬಿಗ್ ಬಾಸ್ ವಿಜೇತ ಅಕುಲ್ ಬಾಲಾಜಿ ಈ ಚಿತ್ರದ ನಾಯಕ. ಮತ್ತೊಂದು ವಿಷಯ ಏನಪ್ಪಾ ಅಂದ್ರೆ, ಈ ಸಿನಿಮಾ ಬಿಡುಗಡೆ ಮುಂಚನೆ 'ಯಾರಿವನು ಒಳ್ಳೆ ಹುಡುಗ' ಅಂತ ಹೊಸ ಪ್ರಾಜೆಕ್ಟ್ ಬೇರೆ ಶುರು ಮಾಡಿಕೊಂಡಿದ್ದನಂತೆ.[ಬಿಗ್ ಬಾಸ್ 4: ಪ್ರಥಮ್ ಆವಾಜ್, ಮೈಕ್ ಬಿಟ್ಟು ಮನೆ ಬಿಡ್ತೀನಿ ಎಂದ ಕೀರ್ತಿ]

  ಮೈಸೂರಿನ ಪ್ರತಿಭೆ

  ಮೈಸೂರಿನ ಪ್ರತಿಭೆ

  ಪ್ರಥಮ್ ಮೂಲತಃ ಮೈಸೂರಿನ ಹುಡುಗ. ವಿದ್ಯಾಭ್ಯಾಸವನ್ನೆಲ್ಲಾ ಮೈಸೂರಿನಲ್ಲೇ ಮುಗಿಸಿದ ಈ ಒಳ್ಳೆ ಹುಡುಗ ಕಾಲೇಜಿನಲ್ಲಿ ಓದುತ್ತಿರುವಾಗನಿಂದಲೂ ಚಿತ್ರರಂಗದ ಮೇಲೆ ತುಂಬಾ ಆಸಕ್ತಿ ಹೊಂದಿದ್ದ. ಹಾಗಾಗಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದ.

  ಬಿಗ್ ಬಾಸ್ ಟಾರ್ಗೆಟ್

  ಬಿಗ್ ಬಾಸ್ ಟಾರ್ಗೆಟ್

  ಪ್ರಥಮ್ ಒಬ್ಬ ಸೆಲೆಬ್ರಿಟಿ ಎನ್ನುವುದಕ್ಕೆ ಈ ಚಿತ್ರಗಳೆ ಸಾಕ್ಷಿ. ಇಷ್ಟಿದ್ದರೆ ಬಿಗ್ ಬಾಸ್ ಮನೆಗೆ ಬರುವುದಕ್ಕೆ ಸಾಧ್ಯನ ಅಂತ ಅಂದುಕೊಳ್ಳಬೇಡಿ. ಈ ಬಿಗ್ ಬಾಸ್ ಮನೆ ಪ್ರವೇಶ ಮಾಡಲೇಬೇಕು ಅಂತ ಪ್ರಥಮ್ ದೊಡ್ಡ ಸವಾಲು ಸ್ವೀಕರಿಸಿ ಅದರಲ್ಲಿ ಪಾಸ್ ಆಗಿ ಒಳಗೆ ಹೋಗಿದ್ದಾನೆ.

  ಸವಾಲು ಕೊಟ್ಟಿದ್ದು ಯಾರು.?

  ಸವಾಲು ಕೊಟ್ಟಿದ್ದು ಯಾರು.?

  ಪ್ರಥಮ್, ಬಿಗ್ ಬಾಸ್ ಗೆ ಎಂಟ್ರಿ ಕೊಡಬೇಕು ಅಂತ ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರನ್ನ ಭೇಟಿ ಮಾಡಿದ್ದಾನೆ. ಅದಕ್ಕೆ ಗುಂಡ್ಕಲ್ ಅವರು ಏನೂ ಪರಿಚಯವಿಲ್ಲದ ವ್ಯಕ್ತಿಯನ್ನ ಹೇಗೆ ಕಳುಹಿಸುವುದು ಅಂತ ಕೇಳಿದಾಗ, ಪ್ರಥಮ್ ನೀವು ಏನು ಹೇಳಿದ್ರು ಮಾಡುತ್ತೆನೆ. ನನಗೆ ಬಿಗ್ ಬಾಸ್ ಮನೆಗೆ ಕಳುಹಿಸಿ ಅಂತ ಕೇಳಿದ್ದಾನೆ. ಆಗಲೇ ಗುಂಡ್ಕಲ್ ಅವರು ಪ್ರಥಮ್ ಗೆ ಈ ಸವಾಲು ಕೊಟ್ಟಿದ್ದಂತೆ.[ಎಕ್ಸ್ ಕ್ಲೂಸಿವ್: 'ಬಿಗ್ ಬಾಸ್ ಕನ್ನಡ-4' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಸಂದರ್ಶನ]

  ಏನಿದು ಸವಾಲ್.?

  ಏನಿದು ಸವಾಲ್.?

  ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ರಾಜಕಾರಣಿಗಳನ್ನ ಮಾತನಾಡಿಸಿಕೊಂಡು ಬಾ ಅಂತ ಪ್ರಥಮ್ ಗೆ ಪರಮೇಶ್ವರ ಗುಂಡ್ಕಲ್ ಟಾಸ್ಕ್ ಕೊಟ್ಟಿದ್ದಾರೆ. ಇದೊಂದು ಸಾಕಾಗಿತ್ತು ಅನ್ಸುತ್ತೆ ಪ್ರಥಮ್ ಗೆ. ಅಮೇಲೆ ನೋಡಿ ಕರ್ನಾಟಕವನ್ನ ಆಳುತ್ತಿರುವ ಖ್ಯಾತ ರಾಜಕಾರಣಿಗಳನ್ನ ತನ್ನ ಕ್ಯಾಮೆರಾ ಮುಂದೆ ಕೂರಿಸಿ ಮಾತನಾಡಿಸಿಕೊಂಡು ಬಂದಿದ್ದು.

  ಬಿಗ್ ಬಾಸ್ ಗೆ ಎಂಟ್ರಿಗೆ ಗ್ರೀನ್ ಸಿಗ್ನಲ್

  ಬಿಗ್ ಬಾಸ್ ಗೆ ಎಂಟ್ರಿಗೆ ಗ್ರೀನ್ ಸಿಗ್ನಲ್

  ರಾಜ್ಯದ ದೊಡ್ಡ ದೊಡ್ಡ ರಾಜಕಾರಣಿಗಳನ್ನ ಮಾತನಾಡಿಸಿಕೊಂಡು ಬಂದಿದ್ದ ಪ್ರಥಮ್ ನ ನೋಡಿ, ಪರಮೇಶ್ವರ ಗುಂಡ್ಕಲ್ ಅವರಿಗೆ ಆಶ್ಚರ್ಯವಾಯಿತ್ತಂತೆ. ಆಗಲೇ ನಿರ್ಧರಸಿಬಿಟ್ಟರಂತೆ ಈ ಹುಡುಗ ಬಿಗ್ ಬಾಸ್ ಸೀಸನ್-೪ಗೆ ಬೇಕು ಅಂತ.

  ಪ್ರಥಮ್ ಯಾರು ಅಂತ ರಾಜಕಾರಣಿಗಳಿಗೆ ಗೊತ್ತಾ.?

  ಪ್ರಥಮ್ ಯಾರು ಅಂತ ರಾಜಕಾರಣಿಗಳಿಗೆ ಗೊತ್ತಾ.?

  ಮಾಜಿ ಪ್ರಧಾನಿ ದೇವೇಗೌಡ, ವಿಧಾನ ಪರಿಷತ್ತು ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಸೇರಿದಂತೆ ಹಲವು ರಾಜಕಾರಣಿಗಳು, ಪ್ರಥಮ್ ನಮ್ಮ ಹುಡುಗ, ನಮ್ಮ ಮೊಮ್ಮಗ ಇದ್ದಂತೆ, ನಮ್ಮ ಮಗ ಇದ್ದಂತೆ ಅಂತ ವಿಡಿಯೊ ಬೈಟ್ ಕೊಟ್ಟಿದ್ದಾರೆ. ನಿಜಕ್ಕೂ ಪ್ರಥಮ್ ಈ ರಾಜಕಾರಿಣಿಗಳಿಗೆ ಪರಿಚಯ ಇದ್ದಾನ. ಇದ್ದರೂ ಸಂಬಂಧಿಕನಾ ಎಂಬ ಪ್ರಶ್ನೆಗಳು ಈಗ ಮೂಡುತ್ತಿದೆ.

  ಅಂತು ಇಂತೂ ಬಿಗ್ ಮನೆ ಪ್ರವೇಶ

  ಅಂತು ಇಂತೂ ಬಿಗ್ ಮನೆ ಪ್ರವೇಶ

  ಇಷ್ಟೆಲ್ಲ ಸರ್ಕಸ್ ಮಾಡಿ ಪ್ರಥಮ್ ಈ ಬಾರಿಯ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಟಿಕೆಟ್ ಪಡೆದುಕೊಂಡು, ಈಗ ಸ್ಟಾರ್ ಆಗಿದ್ದಾನೆ. ಕೆಲವರು ಪ್ರಥಮ್ ನಡವಳಿಕೆಯನ್ನ ನೋಡಿ ಇವನು ಇರುವುದೇ ಹಾಗೆ ಅಂತಿದ್ದರೆ, ಮತ್ತೆ ಕೆಲವರು ನಾಟಕ ಮಾಡುತ್ತಿದ್ದಾನೆ ಅಂತಿದ್ದಾರೆ. ಅದೇನೆ ಇರಲಿ, ಬಿಗ್ ಬಾಸ್ ವೀಕ್ಷಕರಿಗೆ ಮಾತ್ರ ಪ್ರಥಮ್ ಫೆವರೆಟ್ ಆಗಿದ್ದಾನೆ. ಇದಕ್ಕೆಲ್ಲ ಪರೋಕ್ಷವಾಗಿ ಕಾರಣ ಮಾತ್ರ ಈ ರಾಜಕಾರಣಿಗಳ ಕೃಪಾಕಟಾಕ್ಷ ಎನ್ನುತ್ತಿದ್ದಾರೆ ಕೆಲವು ಮಹಾನ್ ಪ್ರೇಕ್ಷಕರು.

  English summary
  'Dewrawne Bidu Gur' fame Kannada Director Pratham Face The Big Challenge For Participant to as a 'Bigg boss kannada session 4' Contestant. Meet Kannada Director Pratham: The mysterious person of Bigg Boss Kannada 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X