»   » ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ದಿನಾಂಕ ಪಕ್ಕಾ.!

ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆ ದಿನಾಂಕ ಪಕ್ಕಾ.!

Posted By:
Subscribe to Filmibeat Kannada

ಬಾಲಿವುಡ್ ಲವ್ ಬರ್ಡ್ಸ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಅವರ ಮದುವೆ ಕುರಿತು ದಿನಕ್ಕೊಂದು ಸುದ್ದಿ ಹೊರಬೀಳುತ್ತಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಮದುವೆಗಾಗಿ ಶಾಪಿಂಗ್ ಮಾಡಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ ಸುದ್ದಿಯಾಗಿದ್ದರು.

ಅದರ ಬೆನ್ನಲ್ಲೆ ಈಗ ದೀಪಿಕಾ ಪಡುಕೋಣೆಯ ಮದುವೆ ದಿನಾಂಕ ಹೊರಬಿದ್ದಿದೆ. ಈ ಹಿಂದೆ ಜನವರಿ ತಿಂಗಳಲ್ಲೇ ನಿರ್ಧಾರವಾದಂತೆ ಈ ವರ್ಷದಲ್ಲಿ ಇವರಿಬ್ಬರ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು. ಅದರಂತೆ ಈ ವರ್ಷಾಂತ್ಯಕ್ಕೆ ಡಿಪ್ಪಿ-ರಣ್ವೀರ್ ಕಲ್ಯಾಣ ಜರುಗಲಿದೆ.

Deepika Padukone Ranveer Singhs wedding date confirmed

ಸದ್ಯ, ಬಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಸೆಪ್ಟಂಬರ್ ಅಥವಾ ಡಿಸೆಂಬರ್ ನಲ್ಲಿ ದೀಪಿಕಾ ಮತ್ತು ರಣ್ವೀರ್ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

ಇವರಿಬ್ಬರ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ದಕ್ಷಿಣ ಭಾರತದ ಸಂಪ್ರದಾಯದಂತೆ ವಿವಾಹ ಮತ್ತು ಆರತಕ್ಷತೆಯನ್ನ ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾದೆ. ದೀಪಿಕಾ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ವಿಶೇಷ ಪಾರ್ಟಿ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Deepika Padukone Ranveer Singh is all set to tie the knot at the end of this year. Ranveer and Deepika’s respective parents sat down and discussed the wedding details right after the release of their film, Padmaavat in January.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X