For Quick Alerts
  ALLOW NOTIFICATIONS  
  For Daily Alerts

  ಬಾಲಕೃಷ್ಣ, ಅಲ್ಲು ಅರ್ಜುನ್ ಮಲ್ಟಿ ಸ್ಟಾರ್ ಸಿನಿಮಾ ಬರಲಿದೆಯೇ?

  |

  ಸಿನಿಮಾ ರಂಗದಲ್ಲಿ ಸ್ಟಾರ್‌ ನಟರುಗಳು ಒಟ್ಟಿಗೆ ಸಿನಿಮಾ ಮಾಡುವುದು ಅಪರೂಪ. ಹಾಗಾಗಿ ಹೆಚ್ಚೆಚ್ಚು ಮಲ್ಟಿ ಸ್ಟಾರ್‌ ಸಿನಿಮಾಗಳು ಬರುವುದಿಲ್ಲ. ಹಾಗೇನಾದರು ಸಿನಿಮಾ ಬರ್ತಿದೆ ಅಂದರೆ ಅದು ಸಿಕ್ಕಾಪಟ್ಟೆ ದಾಖಲೆ ಆಗುತ್ತದೆ. ಈಗ ಆರ್‌ಆರ್‌ಆರ್‌ ಚಿತ್ರದಲ್ಲಿ ನಟ ರಾಮ್ ಚರಣ್ ಮತ್ತು ಜೂನಿಯರ್‌ ಎನ್‌ಟಿಆರ್ ಒಂದಾಗಿದ್ದಾರೆ. ಅಂತೆಯೇ ಈ ಚಿತ್ರದಲ್ಲಿ ಈಗ ಮತ್ತೊಂದು ಟಾಲಿವುಡ್‌ ಸೂಪರ್‌ ಸ್ಟಾರ್‌ ಜೋಡಿ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದೆ.

  RRR ಬಳಿಕ BBB ಚಿತ್ರ ಬರಲಿದೆ ಎನ್ನುವ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಾ ಇದೆ. ಹೌದು ಮತ್ತೊಬ್ಬ ಸ್ಟಾರ್ ನಿರ್ದೇಶಕನ ಡೈರೆಕ್ಷನ್‌ನಲ್ಲಿ ಇಬ್ಬರು ಟಾಲಿವುಡ್ ಸ್ಟಾರ್‌ಗಳು ಅಭಿನಸುತ್ತಾರೆ ಎನ್ನಲಾಗಿದೆ. ಬಿಬಿಬಿ ಎಂದರೆ ನಿರ್ದೇಶಕ ಬೊಯಪಾಟಿ ಶ್ರೀನು, ಬನ್ನಿ ಮತ್ತು ಬಾಲಯ್ಯ ಎಂದರ್ಥ.

  ಸದ್ಯ ಬಾಲಯ್ಯ ಮುತ್ತು ಬನ್ನಿ ಅಂದರೆ ಅಲ್ಲು ಅರ್ಜುನ್ ಇಬ್ಬರು ನಟರು ಕೂಡ ತಮ್ಮ ಸಿನಿಮಾಗಳ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಈ ಜೋಡಿ ತೆರೆಯ ಮೇಲೆ ಒಂದಾಗಿ ಸಿನಿಮಾ ಮಾಡುತ್ತಾರೆ ಅಂದರೆ ಅದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಸಂತಸವೇ ಸರಿ. ಈ ವಿಚಾರ ಹೊರ ಬಂದಿದ್ದು ಹೇಗೆ ಎನ್ನುವುದನ್ನು ಮುಂದೆ ಓದಿ...

  ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಬರ್ತಾರಾ?

  ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಬರ್ತಾರಾ?

  ಅಷ್ಟಕ್ಕೂ ಈ ಸುದ್ದಿ ಹರಿದಾಡಲು ಕಾರಣ ನಿರ್ದೇಶಕ ಬೊಯಪಾಟಿ ಶ್ರೀನು. ಯಾಕೆಂದರೆ ಈ ಬೊಯಪಾಟಿ ಶ್ರೀನು ಮುಂದಿನ ಚಿತ್ರವನ್ನು ಬಾಲಯ್ಯ ಅವರಿಗೆ ಮಾಡಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ಇತ್ತ ಅಲ್ಲು ಅರ್ಜುನ್‌ಗೂ ಕೂಡ ಶ್ರೀನು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಚಿತ್ರದ ಮಾತು ಕಥೆ ಮುಗಿದು, ಅದು ಕೂಡ ಫೈನಲ್ ಆಗಿದೆಯಂತೆ. ಇಬ್ಬರು ನಟರ ಚಿತ್ರಕ್ಕೆ ಒಬ್ಬ ನಿರ್ದೇಶಕನ ಹೆಸರು ಕೇಳಿ ಬರುತ್ತಾ ಇರುವ ಕಾರಣಕ್ಕೆ, ಇದು ಒಂದೆ ಚಿತ್ರ ಇರಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ.

  ಅಲ್ಲು ಅರ್ಜುನ್ ಕುಟುಂಬಕ್ಕೆ ಬಾಲಯ್ಯ ಹೆಚ್ಚು ಆಪ್ತ!

  ಅಲ್ಲು ಅರ್ಜುನ್ ಕುಟುಂಬಕ್ಕೆ ಬಾಲಯ್ಯ ಹೆಚ್ಚು ಆಪ್ತ!

  ಇನ್ನು ನಟ ಬಾಲಯ್ಯ ಅಲ್ಲು ಅರ್ಜುನ್ ಕುಟುಂಬದ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆಗೆ ಹೆಚ್ಚು ಹತ್ತಿರ ಆಗಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ಒಟಿಟಿ 'ಆಹಾ'ದಲ್ಲಿ ಕಾರ್ಯಕ್ರಮ ನಿರೂಪಕರಾಗಿ ದಾಖಲೆ ಕೂಡ ಮಾಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರ ನಡುವೆ ಉತ್ತಮ ಬಾಂಧವ್ಯ ಇದ್ದೇ ಇದೆ. ಪುಷ್ಪ ಚಿತ್ರ ಕಾರ್ಯಕ್ರಮಗಳಲ್ಲಿ ಬಾಲಕೃಷ್ಣ ಭಾಗಿ ಆದರೆ, ಅಖಂಡ ಚಿತ್ರದ ಕಾರ್ಯಕ್ರಮಗಳಲ್ಲಿ ನಟ ಅಲ್ಲು ಅರ್ಜುನ್ ಭಾಗಿ ಆಗಿ ಬಾಲಯ್ಯ ಅವರಿಗೆ ಸಾಥ್ ನೀಡಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಿರುವ ಪುಷ್ಪ, ಅಖಂಡ!

  ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಿರುವ ಪುಷ್ಪ, ಅಖಂಡ!

  ಲಾಕ್‌ ಡೌನ್ ಕೊರೊನಾ ಹಾವಳಿ ಕಡಿಮೆ ಆದ ಬಳಿಕ ರಿಲೀಸ್‌ ಆದ ಅಖಂಡ ಚಿತ್ರ ಧೂಳೆಬ್ಬಿಸಿತು. ಚಿತ್ರ ಮಂದಿರಕ್ಕೆ ಮಾಸ್‌ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿ ಆಗಿತ್ತು. ಅಖಂಡ ಚಿತ್ರಕ್ಕೆ ಆರಂಭದಲ್ಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಬಿಗ್‌ ಓಪನಿಂಗ್‌ ಪಡೆದ ಅಖಂಡ ಬಾಕ್ಸಾಫೀಸ್ ಕೋಟಿ, ಕೋಟಿ ಗಳಿಕೆ ಮಾಡಿದೆ. ಅಖಂಡ ಚಿತ್ರದ ಬಳಿಕ ರಿಲೀಸ್‌ ಆದ 'ಪುಷ್ಪ' ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಉತ್ತಮ ದಾಖಲೆ ಬರೆದಿದೆ. ರಿಲೀಸ್‌ ಆಗಿ ನಾಲ್ಕನೇ ವಾರಕ್ಕೆ 350 ಕೋಟಿ ರೂ. ಗೂ ಅಧಿಕ ಮೊತ್ತ ಕಲೆ ಹಾಕಿದೆ.

  ಇಬ್ಬರಿಗೂ ಸಕ್ಸಸ್ ಕೊಟ್ಟ ನಿರ್ದೇಶಕ ಶ್ರೀನು!

  ಇಬ್ಬರಿಗೂ ಸಕ್ಸಸ್ ಕೊಟ್ಟ ನಿರ್ದೇಶಕ ಶ್ರೀನು!

  ಇನ್ನು ಈ ಸುದ್ದಿ ಹೊರ ಬರುತ್ತಲೇ, ಅಭಿಮಾನಿಗಳು ಇವರ ಕಾಂಬಿನೇಷನ್ ಚಿತ್ರದ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಇಬ್ಬರು ಒಂದಾದರೆ ಸಕ್ಸಸ್‌ ಪಕ್ಕಾ ಎನ್ನುತ್ತಿದ್ದಾರೆ. ಈ ಹಿಂದೆ ಬೊಯಪಾಟಿ ಶ್ರೀನು ಅಲ್ಲು ಅರ್ಜುನ್‌ಗಾಗಿ 'ಸರೈನೊಡು', ಬಾಲಯ್ಯನಿಗಾಗಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಅಖಂಡ ಕೂಡ ಒಂದು, ಮುಂದೆ NBK ಚಿತ್ರವನ್ನೂ ಕೂಡ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ.

  English summary
  Did Akhand Fame Nandamuri Balakrishna And Pushpa Fame Allu Arjun Act In A Multi Star Movie, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X