»   » 'ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?

'ಬಾಹುಬಲಿ' ವಿತರಣಾ ಹಕ್ಕು ; ಎಚ್.ಡಿ.ಕೆ ಹೊಸ ಡೀಲ್.?

By: ಹರಾ
Subscribe to Filmibeat Kannada

ರಾಜಕಾರಣಕ್ಕೆ ಕಾಲಿಡುವ ಮುನ್ನ ಎಚ್.ಡಿ.ಕುಮಾರಸ್ವಾಮಿ ಕನ್ನಡ ಚಿತ್ರಗಳ ವಿತರಣೆ ಮತ್ತು ನಿರ್ಮಾಣ ಮಾಡುತ್ತಿದ್ದ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಆದ್ರೆ, ರಾಜ್ಯ ರಾಜಕೀಯದಲ್ಲೇ ಸಕ್ರಿಯರಾದ್ಮೇಲೆ ಎಚ್.ಡಿ.ಕೆ ಸಿನಿಮಾರಂಗದ ಕಡೆ ಮುಖ ಮಾಡಿದ್ದು ಕಡಿಮೆ.

ಇದೀಗ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವುದರಿಂದ ವರ್ಷಗಳ ನಂತ್ರ ಎಚ್.ಡಿ.ಕೆ ಕೂಡ ಗಾಂಧಿನಗರಕ್ಕೆ ಮರಳಿದ್ದಾರೆ. ಮಗನ ಸಿನಿಮಾಗೆ ತಮ್ಮ 'ಚೆನ್ನಾಂಬಿಕ ಫಿಲ್ಮ್ಸ್' ಬ್ಯಾನರ್ ನಡಿ ತಾವೇ ನಿರ್ಮಾಣ ಮಾಡುತ್ತಿದ್ದಾರೆ.

ಇದರ ನಡುವೆ ಚಿತ್ರ ವಿತರಣೆಯಲ್ಲೂ ಎಚ್.ಡಿ.ಕೆ ಕೈಹಾಕಿದ್ದಾರೆ ಅಂತ ಗಾಂಧಿನಗರದಲ್ಲಿ ಗುಲ್ಲೆದ್ದಿದೆ. 'ಬಾಹುಬಲಿ' ಚಿತ್ರದ ವಿತರಣಾ ಹಕ್ಕುಗಳ ಮೇಲೆ ಕಣ್ಣಿಟ್ಟಿರುವ ಎಚ್.ಡಿ.ಕುಮಾರಸ್ವಾಮಿ, ನಿರ್ದೇಶಕ ರಾಜಮೌಳಿ ಜೊತೆ ಹೊಸ ಡೀಲ್ ಗೆ ಕೈಹಾಕಿದ್ದಾರಂತೆ. ಮುಂದೆ ಓದಿ.....

ಎಚ್.ಡಿ.ಕೆ ಪಾಲಾಯ್ತಾ 'ಬಾಹುಬಲಿ' ವಿತರಣಾ ಹಕ್ಕು?

ಸ್ಯಾಂಡಲ್ ವುಡ್ ಅಂಗಳದಲ್ಲಿ ಸ್ಫೋಟಗೊಂಡಿರುವ ಸುದ್ದಿ ಪ್ರಕಾರ, ಟಾಲಿವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ 'ಬಾಹುಬಲಿ' ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳನ್ನ ಎಚ್.ಡಿ.ಕೆ ಪಡೆದಿದ್ದಾರಂತೆ. ಹಾಗಂತ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಸುದ್ದಿ ಆಗುತ್ತಿದೆ.[ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ]

150 ಕೋಟಿ ರೂಪಾಯಿ ಕೊಟ್ರಾ ಎಚ್.ಡಿ.ಕೆ?

ಬ್ರೇಕಿಂಗ್ ನ್ಯೂಸ್ ಅಂದ್ರೆ, 'ಬಾಹುಬಲಿ' ಚಿತ್ರದ ವಿತರಣಾ ಹಕ್ಕುಗಳನ್ನ ಬರೋಬ್ಬರಿ 150 ಕೋಟಿ ರೂಪಾಯಿ ಕೊಟ್ಟು ಎಚ್.ಡಿ.ಕೆ ಪಡೆದಿರುವುದು. ಇಷ್ಟು ದುಬಾರಿ ಮೊತ್ತವನ್ನ ಕುಮಾರಸ್ವಾಮಿ ಕೊಡುವುದರ ಹಿಂದೆ ಒಂದು ಡೀಲಿಂಗ್ ಕೂಡ ನಡೆದಿದೆಯಂತೆ. [ತ್ರಿಭಾಷಾ ಚಿತ್ರ 'ಜಾಗ್ವಾರ್'ನಲ್ಲಿ ಎಚ್ಡಿಕೆ ಪುತ್ರ ನಿಖಿಲ್!]

ಅಂಥ ಡೀಲ್ ಏನು?

ತಮ್ಮ ಮಗ ನಿಖಿಲ್ ಗೌಡಗೆ ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ಒಂದು ಸಿನಿಮಾ ಮಾಡಿಕೊಡಬೇಕಂತೆ. ಅದಕ್ಕಂತ 'ಬಾಹುಬಲಿ' ಚಿತ್ರದ ಕರ್ನಾಟಕ ವಿತರಣೆಗೆ ಇಷ್ಟು ದೊಡ್ಡ ಮೊತ್ತ ಕೊಟ್ಟಿದ್ದಾರೆ ಅಂತ ಗಾಸಿಪ್ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.[ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?]

ನಿಜ ಏನು? ಯಾವುದು ಸುಳ್ಳು?

ಇದರಲ್ಲಿ ಸತ್ಯ ಎಷ್ಟು ಅನ್ನೋದು ಖುದ್ದು ಎಚ್.ಡಿ.ಕೆಗೆ ಮಾತ್ರ ಗೊತ್ತು. ಆದ್ರೆ, ರಾಜಮೌಳಿ ಶಿಷ್ಯ ಮಹದೇವ್ ಮಾತ್ರ ನಿಖಿಲ್ ಗೌಡ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಖಚಿತ. [ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!]

ಪುರಿ ಜಗನ್ನಾಥ್, ರಾಜಮೌಳಿ ಆಕ್ಷನ್ ಕಟ್ ಹೇಳಬೇಕಿತ್ತು?

ನಿಖಿಲ್ ಗೌಡ ಗ್ರ್ಯಾಂಡ್ ಎಂಟ್ರಿ ನೀಡಬೇಕು ಅಂತ ಟಾಲಿವುಡ್ ನಿರ್ದೇಶಕರಾಗಿರುವ ರಾಜಮೌಳಿ, ಪುರಿ ಜಗನ್ನಾಥ್ ಮತ್ತು ರಾಮ್ ಗೋಪಾಲ್ ವರ್ಮಾ ಜೊತೆ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು. ಪುರಿ ಜಗನ್ನಾಥ್ ಒಪ್ಪಿಕೊಂಡಿದ್ದರು. ಆದ್ರೀಗ ಅನಿವಾರ್ಯ ಕಾರಣಗಳಿಂದಾಗಿ ರಾಜಮೌಳಿ ಶಿಷ್ಯ ಮಹದೇವ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

ಆಕ್ಷನ್ ಚಿತ್ರ 'ಜಾಗ್ವಾರ್'

ನಿಖಿಲ್ ಗೌಡ ಬಣ್ಣ ಹಚ್ಚುತ್ತಿರುವ ಚಿತ್ರಕ್ಕೆ 'ಜಾಗ್ವಾರ್' ಅಂತ ಹೆಸರಿಡಲಾಗಿದೆ ಅನ್ನುವ ಸುದ್ದಿ ಕೂಡ ಇದೆ. ನಿಖಿಲ್ ಗೌಡ ಜೊತೆ 'ಜಾಗ್ವಾರ್' ಚಿತ್ರದಲ್ಲಿ ಯಾರ್ಯಾರು ಇರಲಿದ್ದಾರೆ ಅನ್ನೋದು ನಾಳೆ (ಜೂನ್ 10) ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೊರಬೀಳಲಿದೆ.

English summary
H.D.Kumaraswamy's son Nikhil Gowda is all set to enter Sandalwood. Meanwhile, According to the Grapevine, H.D.Kumaraswamy has purchased 'Baahubali' distribution rights of Karnataka for Rs.150 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada