For Quick Alerts
  ALLOW NOTIFICATIONS  
  For Daily Alerts

  ಐಂದ್ರಿತಾ ರೇ ಜೊತೆ ದಿಗಂತ್ ಎಂಗೇಜ್ ಮೆಂಟ್?

  By ರವಿಕಿಶೋರ್
  |
  ಇತ್ತೀಚೆಗಷ್ಟೇ ಬಾಲಿವುಡ್ ಚಿತ್ರರಂಗಕ್ಕೆ ಜಿಗಿದ (1920 ಲಂಡನ್) 'ಬರ್ಫಿ' ಬಾಯ್ ದಿಗಂತ್ ಗೆ ಕಂಕಣ ಕೂಡಿಬಂದಿದೆ. ಈಗವರ ವಯಸ್ಸು ಇನ್ನೂ 29ರ ಹರಯ, ಮದುವೆಗೆ ಹೇಳಿಮಾಡಿಸಿದ ಸಮಯ. ಗಾಂಧಿನಗರದಲ್ಲಿ ದಿಗಂತ್ ಮದುವೆ ಬಗ್ಗೆ ಒಂದು ಸುದ್ದಿ ಹಬ್ಬಿದೆ. ಅದೇನೆಂದರೆ 2013ರ ಮಾರ್ಚ್ ನಲ್ಲೇ ದಿಗಂತ್ ಎಂಗೇಜ್ ಮೆಂಟ್ ಎಂಬುದು.

  ದಿಗಂತ್ ಅವರನ್ನು ವರಿಸಲಿರುವ ಚೆಲುವೆ ಯಾರು? ಎಂಬುದು ಸದ್ಯಕ್ಕೆ ಗೊತ್ತಿಲ್ಲದಿದ್ದರೂ. ಹರಿದಾಡುತ್ತಿರುವ ಸುದ್ದಿ ಪ್ರಕಾರ, ತಾರೆ ಐಂದ್ರಿತಾ ರೇ ಅವರು ದಿಗಂತ್ ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಅತ್ತ ದಿಗಂತ್ ಹಾಗೂ ಇತ್ತ ಐಂದ್ರಿತಾ ರೇ ಕುಟುಂಬಿಕರು ಇವರಿಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬುದು ಇನ್ನೊಂದು ಸುದ್ದಿ.

  ಆದರೆ ದಿಗಂತ್ ಹಾಗೂ ಐಂದ್ರಿತಾ ಇಬ್ಬರೂ ತಮ್ಮ ಮದುವೆ ಸುದ್ದಿಗೆ ಗೋಲಿ ಹೊಡೆದಿದ್ದಾರೆ. ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂಬ ಸುದ್ದಿ ಕೇವಲ ಪುಕಾರಷ್ಟೇ ಎಂದಿದ್ದಾರೆ. ಸದ್ಯಕ್ಕೆ ಇಬ್ಬರೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಲ್ಲಿ ಬಿಜಿಯಾಗಿದ್ದಾರೆ. ನಾವಿಬ್ಬರೂ ಮದುವೆಯಾಗುತ್ತಿದ್ದೇವೆ ಎಂಬುದು ಮಾಧ್ಯಮಗಳ ಸೃಷ್ಟಿಯಷ್ಟೇ ಎಂದಿದ್ದಾರೆ.

  'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಬಳಿಕ 'ಬರ್ಫಿ' ಚಿತ್ರದಲ್ಲಿ ದಿಗಂತ್ ತೊಡಗಿಕೊಂಡಿದ್ದಾರೆ. ಟೋನಿ, ರಜನಿಕಾಂತ, ಬಚ್ಚನ್, ಕಡ್ಡಿಪುಡಿ, ಜಿದ್ದಿ ಹಾಗೂ ಭಜರಂಗಿ ಚಿತ್ರಗಳಲ್ಲಿ ಐಂದ್ರಿತಾ ರೇ ಬಿಜಿಯಾಗಿದ್ದಾರೆ. ಇನ್ನು ನಿಶ್ಚಿತಾರ್ಥ, ಮದುವೆಗೆ ಟೈಮೆಲ್ಲಿ?

  English summary
  A new rumor came out recently. Kannada actor Diganth and Aindritha Ray are going to be engaged in March. But both are rubbished the news saying that it is media's wild imagination which is giving rise to such rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X