'ಐರಾವತ' ಅರ್ಜುನ್ ಗೆ ಅಮಲು ನೆತ್ತಿಗೇರ್ತಾ?
ಸ್ಯಾಂಡಲ್ ವುಡ್ ನಲ್ಲಿ ಸತತ ಎರಡು ಸಿನಿಮಾ ಹಿಟ್ ಕೊಟ್ಟ ನಿರ್ದೇಶಕ ಎ.ಪಿ ಅರ್ಜುನ್. ಮಂಡ್ಯದ ಹೈದ ಅರ್ಜುನ್ ಈಗ 'ರಾಟೆ' ಸಿನಿಮಾ ಮುಗಿಸಿದ್ದಾರೆ. 'ರಾಟೆ' ರಿಲೀಸಾಗೋ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಚಿತ್ರದ ಶೂಟಿಂಗ್ ಶುರುಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಿರ್ದೇಶನ ಮಾಡ್ತಿರೋ ಅರ್ಜುನ್ ಇತ್ತೀಚೆಗೆ ಅಮಲೇರಿದ ಐರಾವತದಂತೆ ಆಡ್ತಿದ್ದಾರಂತೆ. ಸೆಟ್ ನಲ್ಲಿ ಯಾರಾದ್ರೂ ಶೂಟಿಂಗ್ ವಿಷಯದಲ್ಲಿ ತೊಂದರೆ ಕೊಟ್ರೆ ಅವರ ಮೇಲೆ ಎರ್ರಾಬಿರ್ರಿ ಎಗರಾಡ್ತಾರಂತೆ. [ಅದ್ದೂರಿ ಚಿತ್ರ ವಿಮರ್ಶೆ]

ಅಂಬಾರಿ, ಅದ್ದೂರಿ ಗೆದ್ದ ಮಾತ್ರಕ್ಕೆ ಇದೆಲ್ಲಾ ಬೇಕಾ ಅಂತಿದೆ ಗಾಂಧಿನಗರ. ಹತ್ತಾರು ಹಿಟ್ ಕೊಟ್ಟ ನಿರ್ದೇಶಕರನ್ನೇ ಗಾಂಧಿನಗರ ಎಡಗೈಯ್ಯಲ್ಲಿ ನಿವಾಳಿಸಿ ಬಿಸಾಕಿದೆ. ಇದೆಲ್ಲಾ ಬೇಕಾ.. ಅಂತಿದ್ದಾರಂತೆ ಚಿತ್ರಚಿಂತಕರು. ಚಿಕ್ಕ ವಯಸ್ಸಿನ ನಿರ್ದೆಶಕರಾದರೂ ಚಿತ್ರರಂಗದ ಹಾಗೂ ನಿರ್ದೆಶನದ ಸರಿಗಮ ತಿಳಿದಿರುವ ಅರ್ಜುನ್ ಅವರಿಗೆ ಸ್ವಲ್ಪ ತಾಳ್ಮೆ ಅವಶ್ಯಕತೆ ಅಂತಿದೆ ಗಾಂಧಿನಗರ.
More from Filmibeat
English summary
The Sandalwood grapevine is that, succesful director AP Arjun, who gave Ambari and Adduri two hit movies in Kannada, is having swollen head. Recently he rought-up with Auto drivers.


Click it and Unblock the Notifications











