Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಲ್ಲು ಅರ್ಜುನ್ 100 ಕೋಟಿ ಸಂಭಾವನೆ ಚಿತ್ರಕ್ಕೆ ನಿರ್ದೇಶಕ ಫಿಕ್ಸ್!
ಟಾಲಿವುಡ್ ಸ್ಟಾರ್ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು. ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್ ಚಿರಂಜೀವಿ ಸಾಲಲ್ಲಿ ನಟ ಅಲ್ಲು ಅರ್ಜುನ್ ಕೂಡ ಇದ್ದಾರೆ. ಆದರೆ ಈ ಅಲ್ಲು ಅರ್ಜುನ್ ಇವರೆಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೆಚ್ಚು ಸಂಭಾವನೆ ಪೆಡೆಯುವ ಮೂಲಕ ಅಲ್ಲು ಅರ್ಜುನ್ ನಂಬರ್ 1 ನಟ ಎನಿಸಿಕೊಂಡಿದ್ದಾರೆ.
Recommended Video
ನಟ ಅಲ್ಲು ಅರ್ಜುನ್ ಸದ್ಯ ಟಾಪ್‌ನಲ್ಲಿ ಇದ್ದಾರೆ. ಪುಷ್ಪ ಸಿನಿಮಾದ ನಂತರ ಅಲ್ಲು ಅರ್ಜುನ್ ಅವರಿಗೆ ಇರುವ ಬೇಡಿಕೆ ಹೆಚ್ಚಾಗಿದೆ. ಅವರ ಸಿನಿಮಾಗಳ ಮಾರ್ಕೆಟ್ ಕೂಡ ದೊಡ್ಡದಾಗಿದೆ. ಆದರೆ ಅಲ್ಲು ಅರ್ಜುನ್ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಅದಕ್ಕೆಲ್ಲಾ ಈಗ ತೆರೆ ಬಿದ್ದಿದೆ.
ಪುಷ್ಪ ಸಿನಿಮಾ ರಿಲೀಸ್ ಬಳಿಕ ಅಲ್ಲು ಅರ್ಜುನ್ ಅವರ ಸಂಭಾವನೆ ಬಗ್ಗೆ ಚರ್ಚೆ ಒಂದು ಕಡೆ. ಆದರೆ, ಅಲ್ಲು ಅರ್ಜುನ್ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ, ಪುಷ್ಪ ಭಾಗ ಎರಡರ ನಂತರ ಅಲ್ಲು ಅರ್ಜುನ್‌ಗೆ ನಿರ್ದೇಶನ ಮಾಡುವ ಆ ಅದೃಷ್ಟವಂತ ನಿರ್ದೇಶಕ ಯಾರು ಎನ್ನುವ ಬಗ್ಗೆಯೂ ಚರ್ಚೆ ಆಗುತ್ತಿತ್ತು.

ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್!
ನಟ ಅಲ್ಲು ಅರ್ಜುನ್‌ಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ ತಮಿಳಿನ ನಿರ್ದೇಶಕ ಅಟ್ಲಿ. ಹೌದು ಹೀಗೊಂದು ಸುದ್ದಿ ತೆಲುಗು ಚಿತ್ರ ರಂಗದಲ್ಲಿ ಹರಿದಾಡುತ್ತಿದೆ. ತಮಿಳಿನ ಹಿಟ್ ನಿರ್ದೇಶಕ ಅಟ್ಲಿ ಅಲ್ಲು ಅರ್ಜುನ್‌ಗಾಗಿ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಇಬ್ಬರ ಹೆಸರುಗಳಿಗೇನೆ ಒಂದು ತೂಕ ಇದೆ. ಯಾಕೆಂದರೆ ಅಟ್ಲಿ ಮತ್ತು ಅಲ್ಲು ಅರ್ಜುನ್ ಇಬ್ಬರೂ ಕೂಡ ಸಾಲು ಸಾಲು ಹಿಟ್ ಕೊಟ್ಟವರು. ಇಬ್ಬರಿಗೂ ಈಗ ಹೆಚ್ಚಿನ ಬೇಡಿಕೆ ಇದೆ. ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿಯೇ ಅವರ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡುವ ವಿಚಾರ.

ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಒಂದಾದ ಅಲ್ಲು ಅರ್ಜುನ್- ಅಟ್ಲಿ!
ಪುಷ್ಪ ಚಿತ್ರದ ಬಳಿಕ ಅಲ್ಲು ಅರ್ಜುನ್ ಪುಷ್ಪ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮೊದಲೇ ಗೊತ್ತಾಗಿರುವ ಸಮಾಚಾರ. ಆದರೆ ಪುಷ್ಪ 2 ಬಳಿಕ ಅಲ್ಲು ಅರ್ಜುನ್ ಚಿತ್ರಕ್ಕೆ ನಿರ್ದೇಶಕ ಬೊಯಪಾಟಿ ಶ್ರೀನು ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅದಕ್ಕೀಗ ಬ್ರೇಕ್ ಬಿಟ್ಟಿದೆ. ಪುಷ್ಪ ಸರಣಿಯ ಬಳಿಕ ಅಲ್ಲು ಅರ್ಜುನ್ ಸಿನಿಮಾವನ್ನು ಅಟ್ಲಿ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ದೊಡ್ಡದಾಗಿ ಹಬ್ಬಿದೆ. ಇನ್ನೂ ಈ ಚಿತ್ರಕ್ಕಾಗಿಯೇ ಅಲ್ಲು ಅರ್ಜುನ್ 100 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಜೊತೆಗೆ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಕನ್ನಡದಲ್ಲೂ ಸಿನಿಮಾ ತೆರೆ ಕಾಣಲಿದೆ.

ಹಿಟ್ ನಿರ್ದೇಶಕ ಅಟ್ಲಿ ತೆಲುಗಿಗೆ!
ನಿರ್ದೇಶಕ ಅಟ್ಲಿ ಒಬ್ಬ ಯಶಸ್ವಿ ನಿರ್ದೇಶಕ. ತಮಿಳಿನಲ್ಲಿ ಇಲ್ಲಿ ತನಕ ನಾಲ್ಕು ಸಿನಿಮಾಗಳನ್ನು ಅಟ್ಲಿ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಆ ನಾಲ್ಕು ಚಿತ್ರಗಳು ಕೂಡ ಹಿಟ್ ಲಿಸ್ಟ್ ಸೇರಿವೆ. ರಾಜಾ-ರಾಣಿ ಚಿತ್ರದ ಮೂಲಕ ನಿರ್ದೇಶಕನಾಗಿ ಅಟ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂತರ ತೆರಿ, ಮೆರ್ಸಲ್, ಬಿಗಿಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಕೊನೆಯ ಮೂರೂ ಚಿತ್ರಗಳನ್ನು ತಮಿಳು ನಟ ವಿಜಯ್‌ಗಾಗಿಯೇ ಮಾಡಿದ್ದಾರೆ. ಈಗ ವಿಜಯ್ ನಿರ್ದೇಶಕ ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿದ್ದಾರೆ.

ಶಾರುಕ್ ಖಾನ್ ಜೊತೆ ಅಟ್ಲಿ, ಪುಷ್ಪ 2ನಲ್ಲಿ ಅಲ್ಲು ಅರ್ಜುನ್!
ನಿರ್ದೇಶಕ ಅಟ್ಲಿ ಸದ್ಯ ಶಾರುಕ್ ಖಾನ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಕೂಡ ಆರಂಭ ಆಗಿವೆ. ತಮಿಳಿನಲ್ಲಿ ಸತತ ಮೂರು ಸಿನಿಮಾಗನ್ನು ವಿಜಯ್‌ಗೆ ನಿರ್ದೇಶನ ಮಾಡಿದ್ದ ಅಟ್ಲಿಗೆ ಬಾಲಿವುಡ್‌ನಿಂದ ಬಂಪರ್ ಆಫರ್ ಬಂದಿದೆ. ಸದ್ಯ ಶಾರುಕ್ ಸಿನಿಮಾ ಮಾಡುತ್ತಿದ್ದಾರೆ ಅಟ್ಲಿ. ಇತ್ತ ಅಲ್ಲು ಅರ್ಜುನ್ ಪುಷ್ಪ ಭಾಗ 2 ಸಿನಿಮಾ ಮಾಡಬೇಕಾಗಿದೆ. ಸದ್ಯದಲ್ಲಿಯೇ ಪುಷ್ಪ 2 ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಈ ಎರಡು ಚಿತ್ರಗಳ ಬಳಿಕ ಅಲ್ಲು ಅರ್ಜುನ್ ಮತ್ತು ಒಂದಾಗಿ ಸಿನಿಮಾ ಮಾಡಲಿದ್ದಾರೆ.