For Quick Alerts
  ALLOW NOTIFICATIONS  
  For Daily Alerts

  'ಮಿಸ್ಸಿಂಗ್ ನಟಿ' ಅಂಜಲಿ ಸುತ್ತ ಮತ್ತೊಂದು ವಿವಾದ

  By ಶಂಕರ್, ಚೆನ್ನೈ
  |

  ಇತ್ತೀಚೆಗೆ ಕಾಣೆಯಾಗಿದ್ದ ಬಹುಭಾಷಾ ತಾರೆ ಅಂಜಲಿ ಬಳಿಕ ಹೈದರಾಬಾದಿನಲ್ಲಿ ಪ್ರತ್ಯಕ್ಷವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದರು. ಈಗ ಮತ್ತೊಮ್ಮೆ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಚಿತ್ರೀಕರಣಕ್ಕೆ ಗೈರುಹಾಜರಾಗುತ್ತಿದ್ದಾರೆ ಎಂದು ಚಿತ್ರದ ನಟ, ನಿರ್ದೇಶಕ ಕಲಾಂಜಿಯಂ ಆರೋಪಿಸಿದ್ದಾರೆ.

  ತಮಿಳು ನಿರ್ದೇಶಕ ಕಲಾಂಜಿಯಂ ನಿರ್ದೇಶಿಸುತ್ತಿರುವ 'ಊರು ಸುಟ್ರಿ ಪುರಾಣಂ' ಎಂಬ ಚಿತ್ರದಲ್ಲಿ ಅಂಜಲಿ ನಾಯಕಿ. ಆದರೆ ಈಕೆ ಚಿತ್ರೀಕರಣಕ್ಕೆ ಹಾಜರಾಗದೆ ಕೈಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಂಜಲಿ ವಿರುದ್ಧ ದಕ್ಷಿಣ ಭಾರತ ಕಲಾವಿದರ ಸಂಘದಲ್ಲಿ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

  "ತಮ್ಮ ಚಿತ್ರದ ಕಥಾವಸ್ತು ನಾಯಕಿ ಪ್ರಧಾನವಾದದ್ದು. ಚಿತ್ರೀಕರಣ ಪ್ರಾರಂಭವಾದಂದಿನಿಂದ ಅಂಜಲಿ 15 ದಿನ ಅಭಿನಯಿಸಿದ್ದಾರೆ. ಇನ್ನೂ ಕೊಂಚ ಭಾಗದ ಶೂಟಿಂಗ್ ಬಾಕಿ ಇದೆ. ಆದರೆ ಅಂಜಲಿ ಕೈಕೊಟ್ಟಿದ್ದಾರೆ. ಅವರಿಲ್ಲದೆ ಚಿತ್ರೀಕರಣ ಪೂರ್ಣವಾಗುವುದಿಲ್ಲ. ಈಗ ಶೂಟಿಂಗ್ ಕ್ಯಾನ್ಸಲ್ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದೆ" ಎಂದಿದ್ದಾರೆ ನಿರ್ದೇಶಕ.

  ಅಂಜಲಿ ಅವರನ್ನು ಫೋನ್ ಮೂಲಕ ಸಂಪರ್ಕಿಸಲಾಯಿತು. ಆದರೆ ಅವರು ನಾಟ್ ರೀಚಬಲ್. ಚಿತ್ರಕ್ಕಾಗಿ ಈಗಾಗಲೆ ರು.40 ಲಕ್ಷ ಖರ್ಚು ಮಾಡಿದ್ದೇವೆ. ಕಲಾವಿದರ ಸಂಘ, ನಿರ್ದೇಶಕರು ಹಾಗೂ ನಿರ್ಮಾಪಕರ ಸಂಘದಲ್ಲೂ ಅಂಜಲಿ ವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದಿದ್ದಾರೆ ಕಲಂಜಿಯಮ್.

  ಇತ್ತೀಚೆಗೆ ತೆರೆಕಂಡ ಕಂಡ ತೆಲುಗಿನ 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಚಿತ್ರದ ಮೂಲಕ ಅಂಜಲಿ ಜನಪ್ರಿಯವಾಗಿದ್ದರು. ತನ್ನ ಮಲತಾಯಿ ಭಾರತಿದೇವಿ ಹಾಗೂ ನಿರ್ದೇಶಕ ಕಲಾಂಜಿಯಂ ಎಂಬುವವರು ತಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಅಂಜಲಿ ಆರೋಪಿಸಿದ್ದರು.

  ತನ್ನ ಮಲತಾಯಿ ಭಾರತಿದೇವಿ ಅವರು ತಮ್ಮನ್ನು ಎಟಿಎಂ ಮೆಷಿನ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ಓವರ್ ಟೈಮ್ ಕೆಲಸ ಮಾಡುವಂತೆ ತನ್ನ ಮೇಲೆ ಒತ್ತಡ ತರುತ್ತಿದ್ದಾರೆ. ತಾನು ಸಂಪಾದಿಸಿದ ದುಡ್ಡಿನಲ್ಲಿ ಆಕೆ ಲಗ್ಜುರಿ ಜೀವನ ಸಾಗಿಸುತ್ತಿದ್ದಾರೆ ಎಂಬ ಆರೋಪಗಳನ್ನು ಅಂಜಲಿ ಮಾಡಿದ್ದರು.

  English summary
  Kalanjiyam, the director of Tamil movie 'Oor Suttri Puranam', has lodged a complaint against film heroine Anjali in Nadagar Association( Actors Guild) as she is not attending the shooting of the film. The director, who was also the producer of this movie has invested Rs.40 lakhs so far and Anjali too attended the shooting of the film for 15 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X