»   » ಧ್ರುವ ಸರ್ಜಾ ಕೈಯಲ್ಲಿದ್ದ ದೊಡ್ಡ ಪ್ರಾಜೆಕ್ಟ್ ನಿಂತೋಯ್ತಾ.!

ಧ್ರುವ ಸರ್ಜಾ ಕೈಯಲ್ಲಿದ್ದ ದೊಡ್ಡ ಪ್ರಾಜೆಕ್ಟ್ ನಿಂತೋಯ್ತಾ.!

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಬಿಡುಗಡೆಯ ಸನಿಹದಲ್ಲಿದ್ದು, ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸೌಂಡ್ ಮಾಡ್ತಿದೆ. ಈಗಾಗಲೇ ಟೀಸರ್ ರಿಲೀಸ್ ಮಾಡಿರುವ 'ಭರ್ಜರಿ', ಈಗ ಡೈಲಾಗ್ ಟೀಸರ್ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

'ಭರ್ಜರಿ' ಚಿತ್ರದ ನಂತರ ಧ್ರುವ ಸರ್ಜಾ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಈ ಮಧ್ಯೆ 'ಭರ್ಜರಿ' ಹುಡುಗ ಅಭಿನಯಿಸಬೇಕಿದ್ದ ದೊಡ್ಡ ಪ್ರಾಜೆಕ್ಟ್ ವೊಂದು ನಿಂತು ಹೋಗಿದೆ ಎಂಬ ಸುದ್ದಿ ಹೊರಬಿದ್ದಿದೆ.

'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ

ಹಾಗಿದ್ರೆ, ಧ್ರುವ ಸರ್ಜಾ ಅಭಿನಯಿಸಬೇಕಿದ್ದ ಆ ಬಿಗ್ ಸಿನಿಮಾ ಯಾವುದು? ಯಾವ ಕಾರಣಕ್ಕೆ ನಿಂತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

'ಭರ್ಜರಿ' ನಂತರ 'ಹಯಗ್ರೀವ'.!

'ಭರ್ಜರಿ' ಚಿತ್ರದ ನಟ ಧ್ರುವ ಸರ್ಜಾ 'ಹಯಗ್ರೀವ' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಈ ಚಿತ್ರವನ್ನ ನಂದ ಕಿಶೋರ್ ನಿರ್ದೇಶನ ಮಾಡಬೇಕಿತ್ತು. ಆದ್ರೀಗ, ಈ ಸಿನಿಮಾ ನಿಂತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಚಿತ್ರ ನಿಲ್ಲಿಸಲು ಕಾರಣವೇನು?

'ಹಯಗ್ರೀವ' ದೊಡ್ಡ ಪ್ರಾಜೆಕ್ಟ್. ಈ ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ವೈಯಕ್ತಿಕವಾಗಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಆದ್ರೆ, ಇನ್ನು 'ಭರ್ಜರಿ' ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಬೇಕಿದೆ. ಇಷ್ಟೆಲ್ಲಾ ಬಿಜಿಯಾಗಿರುವ ಧ್ರುವ ತಮ್ಮ ಪಾತ್ರಕ್ಕೆ ಸಿದ್ದವಾಗಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಮಯ ಬೇಕಾಗಿದೆ ಎಂಬ ಕಾರಣಕ್ಕೆ ಸ್ಥಗತಿಗೊಳಿಸಲಾಗಿದೆ ಎನ್ನಲಾಗಿದೆ.

ಹಾಗಿದ್ರೆ, ಧ್ರುವ ಮುಂದಿನ ಸಿನಿಮಾ

ಸದ್ಯ 'ಹಯಗ್ರೀವ' ಚಿತ್ರವನ್ನ ಕೈಬಿಟ್ಟಿರುವ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಮತ್ತೊಂದು ಸಿನಿಮಾವನ್ನ ಶುರು ಮಾಡಲಿದ್ದಾರೆ.

'ಪೊಗರು' ಶುರು

ನಂದ ಕಿಶೋರ್ ಮತ್ತು ಧ್ರುವ ಸರ್ಜಾ ಜೋಡಿಯಲ್ಲಿ 'ಪೊಗರು' ಎಂಬ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಸೆಪ್ಟಂಬರ್ 20 ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ

'ಹಯಗ್ರೀವ' ಕಥೆಯೇನು?

ನಿರ್ದೇಶಕ ನಂದ ಕಿಶೋರ್ ಅವರು ಸದ್ಯಕ್ಕೆ 'ಹಯಗ್ರೀವ' ಚಿತ್ರವನ್ನ ನಿಲ್ಲಿಸಿದ್ದಾರೆ. ಆದ್ರೆ, ಬೇರೆ ನಾಯಕ ನಟನ ಜೊತೆ ಈ ಚಿತ್ರವನ್ನ ಮಾಡಲಿದ್ದಾರಂತೆ. ಇದಕ್ಕಾಗಿ ನಾಯಕನ ಹುಡುಕಾಟ ಕೂಡ ಶುರು ಮಾಡಿದ್ದಾರೆ ಎನ್ನಲಾಗಿದೆ.

English summary
Director Nanda Kishore has decided to drop the project Hayagreeva, with Dhruva, altogether and instead focus on a new movie titled Poguru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada