»   » ಚೇತನ್ ಜೊತೆ ಹೊಸ ಸಾಹಸಕ್ಕೆ ಕೈಹಾಕಿದ ಪಿ.ಸಿ.ಶೇಖರ್.!

ಚೇತನ್ ಜೊತೆ ಹೊಸ ಸಾಹಸಕ್ಕೆ ಕೈಹಾಕಿದ ಪಿ.ಸಿ.ಶೇಖರ್.!

Posted By:
Subscribe to Filmibeat Kannada

'ರಾಗ' ಚಿತ್ರದ ನಂತರ ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನ ನೀಡುತ್ತಾ ಬಂದಿರುವ ನಿರ್ದೇಶಕರು ಈಗ ಐತಿಹಾಸಿಕ ಪ್ರಾಜೆಕ್ಟ್ ನ್ನ ಕೈಗೆತ್ತಿಕೊಂಡಿದ್ದಾರಂತೆ.

ಹೌದು, ಬ್ರಿಟಿಷ್ ಕಾಲದ ಕಥೆಯನ್ನ ಆಯ್ಕೆ ಮಾಡಿಕೊಂಡಿರುವ ಪಿ.ಸಿ.ಶೇಖರ್ ಈಗಾಗಲೇ ಸ್ಕ್ರಿಪ್ಟ್ ಸಿದ್ದಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಬಿಗ್ ಬಜೆಟ್ ನಿಂದ ಕೂಡಿದ್ದು, ತಂತ್ರಜ್ಞರು ಮತ್ತು ಕಲಾವಿದರ ಹುಡುಕಾಟ ಮಾಡಲಾಗುತ್ತಿದೆಯಂತೆ.

ವಿಮರ್ಶೆ: ಕಾಲೇಜು ಲೈಫಿನ ಗೆಳೆತನ, ಪ್ರೀತಿ ಮರುಕಳಿಸುವ 'ನೂರೊಂದು ನೆನಪು'

Director PC Shekhar Next Movie on British Era

ಪಿ.ಸಿ.ಶೇಖರ್ ಅವರ ಈ ಚಿತ್ರಕ್ಕೆ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕರಾಗಿದ್ದಾರಂತೆ. ಸದ್ಯ, ಚೇತನ್ ಅಭಿನಯದ 'ನೂರೊಂದು ನೆನಪು' ಚಿತ್ರ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಪ್ರದರ್ಶನವಾಗುತ್ತಿದೆ.

ಮತ್ತೊಂದೆಡೆ ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರದಲ್ಲೂ ಚೇತನ್ ನಾಯಕನಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದರ ಮಧ್ಯೆ ಚೇತನ್ ಜೊತೆಯಲ್ಲಿ ಪಿ.ಸಿ ಶೇಖರ್ ಹೊಸ ಸಾಹಸಕ್ಕೆ ಮುಂದಾಗಿದ್ದು, ಸೆಪ್ಟಂಬರ್ ನಿಂದ ಚಿತ್ರೀಕರಣ ಶುರುಮಾಡುವ ಯೋಚನೆಯಲ್ಲಿದ್ದಾರಂತೆ.

English summary
Director PC Shekhar is Getting Ready with his Next and we hear it is Going to be Another Period drama. he will be exploring a subject set in the British Era.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada