»   » ದುನಿಯಾ ವಿಜಯ್ ಗೆ ಜೀವನಾಂಶ ಬೇಕಂತೆ

ದುನಿಯಾ ವಿಜಯ್ ಗೆ ಜೀವನಾಂಶ ಬೇಕಂತೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದುನಿಯಾ ವಿಜಯ್ ಅವರ ದಾಂಪತ್ಯ ಮುರಿಯುವ ಕಥೆಗೆ ಸೇರ್ಪಡೆಗೊಳ್ಳಲಿರುವ 'ದುಡ್ಡಿದ್ರೆ ದುನಿಯಾ ವಿಜಯ್ ಜುಖ್ತಾ ಹೇ', 'ಗಂಡ ಹೆಂಡಿರ ಜಗಳ ದುಡ್ಡು ಎಣಿಸುವ ತನಕ' ಎಂಬ ಹೊಸ ಮಾತುಗಳು ಸೇರಿಕೊಂಡಿವೆಯಂತೆ.

ನಟ ದುನಿಯಾ ವಿಜಯ್ ಹಾಗೂ ನಾಗರತ್ನ ವಿವಾಹ ವಿಚ್ಛೇದನ ಪ್ರಕರಣ ಈಗ ಟ್ವಿಸ್ಟ್ ಪಡೆದು ಕೊಂಡಿದೆ. ಜಯಮ್ಮನ ಮಗ ಚಿತ್ರದಲ್ಲಿ ಅಂಟಿಕೊಂಡಿದ್ದ ಕುಂಕುಮ ಚಂಚನ ಲೇಪನವನ್ನು ತೊಳೆದುಕೊಂಡು ಕಣ್ ಬಿಟ್ಟಿರುವ ದುನಿಯಾ ವಿಜಯ್ ಅವರು ತಮ್ಮ ಧರ್ಮಪತ್ನಿಯಿಂದಲೇ ಜೀವನಾಂಶ ಕೇಳಿದ್ದಾರೆ. ದುನಿಯಾ ವಿಜಯ್ ಅವರು ನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಬುಧುವಾರ ಭೇಟಿಕೊಟ್ಟು ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ.

ನಾನು ಕಟ್ಟಿರುವ ಮನೆ ಪತ್ನಿ ನಾಗರತ್ನ ಹೆಸರಿನಲ್ಲಿ ಇದೆ. ಅಲ್ಲದೆ ಜಯಮ್ಮನ ಮಗ ಚಿತ್ರವೂ ಪತ್ನಿ ಹೆಸರಿನಲ್ಲಿ ನಿರ್ಮಾಣವಾಗಿದೆ. ಅದರ ಲಾಭವೂ ಪತ್ನಿ ಅಕೌಂಟ್ ಗೆ ಹೋಗುತ್ತಿರುವುದರಿಂದ ನನಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ ಎಂದು ವಿಜಯ ಅರ್ಜಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪತ್ನಿ ಹೆಸರಿನಲ್ಲಿ ಇಟ್ಟಿಗೆ ಕಾರ್ಖಾನೆ ಆರಂಭಿಸಿದ್ದೇನೆ. ಸೀರೆ ವ್ಯಾಪರವೂ ಪತ್ನಿ ಹೆಸರಿನಲ್ಲೇ ನಡೆಯುತ್ತಿದೆ. ಎರಡರಿಂದಲೂ ಐದು ಲಕ್ಷ ರುಪಾಯಿ ಆದಾಯ ಬರುತ್ತಿದೆ. ಹೀಗಾಗಿ ನನಗೆ ಜೀವನಾಂಶ ನೀಡಬೇಕು ಎಂದು ವಿಜಯ್ ಕೋರಿದ್ದಾರೆ.

New Twist in the Duniya Vijay Divorce Case

ಐಡಿಯಾ ಕೊಟ್ಟಿದ್ದು ಯಾರು?: ದುನಿಯಾ ವಿಜಯ್ ಅವರು ಈ ರೀತಿ ಅರ್ಜಿ ಹಾಕಲು ಅವರ ವಕೀಲರಾದ ಶಂಕರಪ್ಪ ಅವರು ಕೊಟ್ಟ ಐಡಿಯಾವೇ ಕಾರಣವಂತೆ. ದುನಿಯಾ ವಿಜಯ್ ಗಳಿಕೆ ಎಲ್ಲವೂ ಧರ್ಮಪತ್ನಿ ನಾಗರತ್ನ ಪಾಲಾಗುತ್ತಿರುವನ್ನು ಗಮಿಸಿದ ಶಂಕರಪ್ಪ ಈ ರೀತಿ ಅರ್ಜಿ ಹಾಕಿಸಿದ್ದಾರೆ.

ಶಂಕರಪ್ಪ ಅವರು ಖ್ಯಾತ ಕ್ರಿಮಿನಲ್ ಲಾಯರ್. ಈ ಹಿಂದೆ ಅವರು ಅಬ್ದುಲ್ ಕರೀಂ ಲಾಲಾ ತೆಲಗಿ ಹಾಗೂ ವಿನಿ ವಿಂಕ್ ಶಾಸ್ತ್ರಿ ಕೇಸ್ ಗಳನ್ನು ಹ್ಯಾಂಡಲ್ ಮಾಡಿದ್ದಾರೆ. ಮತ್ತೊಮ್ಮೆ ಖ್ಯಾತ ವಕೀಲ ಎಂಟಿ ನಾಣಯ್ಯ ಅವರ ಬಳಿ ಜೂನಿಯರ್ ಆಗಿ ಕೆಲಸ ಮಾಡಿದ್ದಾರೆ.

ಗಂಡ ಹೆಂಡತಿ ಪ್ರೀತಿ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ; ಎಲ್ಲರಿಗೂ ಗೊತ್ತಾಗುವುದು ಜಗಳ ಮಾಡಿದರೆ ಮಾತ್ರ ಎಂಬ ಮಾತೊಂದಿದೆ. ನಟ ದುನಿಯಾ ವಿಜಯ್ ಜೀವನದಲ್ಲಿ ಈ ಮಾತು ಅಕ್ಷರಶಃ ನಿಜವಾಯಿತು. ಅವರ ದಾಂಪತ್ಯ ಕಲಹ ಈಗ ಕೋರ್ಟ್ ಮೆಟ್ಟಿಲೇರಿದ್ದು ಗೊತ್ತೇ ಇದೆ.

ದುನಿಯಾ ವಿಜಯ್ ಹಾಗೂ ಅವರ ಪತ್ನಿ ನಾಗರತ್ನ ಅವರಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದ್ದರು. ದುನಿಯಾ ವಿಜಯ್ ಪತ್ನಿ ನಾಗರತ್ನ ಅವರು ಮೂರು ಮಕ್ಕಳನ್ನು ಸಾಕಿ ಸಲುಹಬೇಕಾಗಿದೆ. ತಮಗೆ ಜೀವನಾಂಶ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಇನ್ನೊಂದು ಅರ್ಜಿಯಲ್ಲಿ ವಿವಾಹ ವಿಚ್ಛೇದನ ಕೊಡುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಜಯ್ ಮೇಲ್ಕಂಡ ಕಾರಣ ನೀಡಿ ಹೊಸ ಅರ್ಜಿ ಹಾಕಿದ್ದಾರೆ. ಸಂಧಾನದಲ್ಲಿ ಮುಗಿಯಬೇಕಿದ್ದ ಪ್ರಕರಣ ಇನ್ನೂ ಜಾರಿಯಲ್ಲಿದೆ.

English summary
New Twist in the Duniya Vijay Divorce Case as actor Vijay now seeking alimony from his official wife Nagarathna. Vijay said all the property he owned and earned through working in cinema is in the name of his wife. Now Vijay said in his plea to court that he need monthly payment from wife to lead life. 
Please Wait while comments are loading...