Just In
Don't Miss!
- Sports
ಟೆಸ್ಟ್ ಸರಣಿ ಮುಗಿಯುತ್ತಲೇ ಕೆಜಿಎಫ್ನ "ರಾಕಿ ಭಾಯ್" ಅವತಾರವೆತ್ತಿದ ವಾರ್ನರ್
- Automobiles
ಅಮೆರಿಕಾ ಅಧ್ಯಕ್ಷರು ಪ್ರಯಾಣಿಸುವ ವಿಮಾನದ ಬಗೆಗಿನ ರೋಚಕ ಸಂಗತಿಗಳಿವು
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Lifestyle
ಎಷ್ಟೇ ಪ್ರಯತ್ನಿಸಿದರೂ ಸೊಂಟದ ಬೊಜ್ಜು ಕರಗದಿರಲು ಇದೇ ಕಾರಣ
- News
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು ದೇಣಿಗೆ ನೀಡಿದ ಗೌತಮ್ ಗಂಭೀರ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸಲಗ'ಗೆ ದುನಿಯಾ ವಿಜಯ್ ಅವರೇ ಮಾವುತ.!
ಜಾನಿ ಜಾನಿ ಎಸ್ ಪಪ್ಪಾ ಸಿನಿಮಾದ ಬಳಿಕ 'ಕುಸ್ತಿ' ಆರಂಭಿಸಿದ ದುನಿಯಾ ವಿಜಯ್ ಅದ್ಯಾಕೋ ಕುಸ್ತಿಗೆ ಮಧ್ಯಂತರ ನೀಡಿ ಸಲಗ ಕೈಗೆತ್ತಿಕೊಂಡರು. ಭರ್ಜರಿ ಸಿದ್ಧತೆಗಳೊಂದಿಗೆ ಆರಂಭವಾಗುತ್ತಿರುವ ಸಲಗ ಈಗ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ.
ಸಲಗ ಸಿನಿಮಾಗೆ ದುನಿಯಾ ವಿಜಯ್ ನಾಯಕ. ಟಗರು ಸಿನಿಮಾ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ನಿರ್ಮಾಪಕ. ಒಂದೊಳ್ಳೆ ತಂತ್ರಜ್ಞರ ತಂಡ ಕಟ್ಟಿಕೊಂಡಿರುವ ಸಲಗ ಕಿಕ್ಕೇರಿಸುವಂತಹ ಕಲಾವಿದರನ್ನ ಆಯ್ಕೆ ಮಾಡಿಕೊಂಡಿದೆ.
'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ
ಧನಂಜಯ್, ಕಾಕ್ರೋಚ್ ಖ್ಯಾತಿಯ ಸುಧೀ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ. 'ಟಗರು' ಸಿನಿಮಾಗೆ ಸಂಭಾಷಣೆ ಬರೆದಿದ್ದು ಮಾಸ್ತಿ ಸಲಗ ಚಿತ್ರಕ್ಕೂ ಡೈಲಾಗ್ ಹೊಣೆ ಹೊತ್ತಿದ್ದಾರೆ. ಅದರ ಜೊತೆಗೆ ಇಬ್ಬರು ಸಂಗೀತ ನಿರ್ದೇಶಕರಿದ್ದು, ಚರಣ್ ರಾಜ್ ಮತ್ತು ನವೀನ್ ಸಜ್ಜು ಮ್ಯೂಸಿಕ್ ವಿಭಾಗದ ಸಾರಥಿಗಳಾಗಿದ್ದಾರೆ.
'ಸಲಗ' ದುನಿಯಾ ವಿಜಿ ಜೊತೆ ಸೇರಿದ ಟಗರು ಟೀಂ
ಇಷ್ಟೆಲ್ಲಾ ಹೇಳಿದ್ಮೇಲೆ ನಿರ್ದೇಶಕ ಯಾರು ಎಂಬುದು ಮಾತ್ರ ಕುತೂಹಲವಾಗಿಯೇ ಉಳಿದುಕೊಂಡಿದೆ. ಮೊದಲು ರಘು ಶಿವಮೊಗ್ಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿತ್ತು. ನಂತರ ಅವರ ಬದಲು ಮತ್ತೊಬ್ಬ ಹೊಸ ನಿರ್ದೇಶಕ ಬರಲಿದ್ದಾರೆ ಎನ್ನಲಾಯ್ತು. ಇದೀಗ, ದುನಿಯಾ ವಿಜಯ್ ಅವರೇ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಇದು ನಿಜವಾಗಿದ್ದೇ ಆದ್ರೆ ಪ್ರಪ್ರಥಮ ಬಾರಿಗೆ ದುನಿಯಾ ವಿಜಯ್ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ನಟ, ನಿರ್ಮಾಪಕರಾಗಿದ್ದ ವಿಜಿ ಡೈರೆಕ್ಟರ್ ಆಗಿಯೂ ಪ್ರಮೋಟ್ ಆಗಲಿದ್ದಾರೆ.