»   » ಸಿಂಬು ನಯನತಾರಾ ಕಣ್ಣು ಕಣ್ಣು ಕಲೆತಾಗ

ಸಿಂಬು ನಯನತಾರಾ ಕಣ್ಣು ಕಣ್ಣು ಕಲೆತಾಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಡಾನ್ಸ್ ಮಾಸ್ಟರ್ ಪ್ರಭುದೇವ ಹಾಗೂ ನಟ ಸಿಲಂಬರಸನ್ (ಸಿಂಬು) ಇಬ್ಬರಿಗೂ ಕೈಕೊಟ್ಟ ಮಲ್ಲು ಹುಡುಗಿ ನಯನತಾರಾ ಪ್ರೀತಿ ಪ್ರೇಮದ ಕನಸು ಕಾಣುವುದು ಬಿಟ್ಟಿದ್ದಾಳಂತೆ. ಆದರೆ, ನಯನಿ ಮುಂದೆ ಇತ್ತೀಚೆಗೆ ಹಳೆ ಲವರ್ ಎದುರಾದಾಗ ಸವಿ ಸವಿ ನೆನಪು ಸಾವಿರ ನೆನಪು.. ಎಂದು ಗುನುಗಬೇಕು ಎನಿಸಿತ್ತಂತೆ.

ಸಿಂಬು ಜತೆ ಬ್ರೇಕ್ ನಂತರ ಡ್ಯಾನ್ಸ್ ಮಾಸ್ಟರ್ ಪ್ರಭುದೇವ ಜತೆ ಕುಣಿಯಲು ಕಾಡಿ ಬೇಡಿ ಕಣ್ಣೀರಿಟ್ಟು ನಯನಿ ಬಂದಿದ್ದಳು. ಪ್ರಭುದೇವ ಸಂಸಾರ ತಾಪತ್ರಯಗಳನ್ನು ಮೀರಿ ನಯನಿಯನ್ನು ಒಪ್ಪಿಕೊಂಡಿದ್ದ. ನಯನಿ ಕೂಡಾ ಕ್ರೈಸ್ತಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಪ್ರಭು ಜತೆ ಇನ್ನೇನು ಸಪ್ತಪದಿ ಇಡುತ್ತಾಳೆ ಎನ್ನುವಷ್ಟರಲ್ಲಿ ಮತ್ತೆ ಎಡವಿದಳು.

ನಯನಿ ಎಡವಳು ನಾನು ಕಾರಣಳಲ್ಲ ಎಂದು ಕುಂಬಳಿಕಾಯಿ ಕಳ್ಳಿಯಂತೆ ಹಂಸಿಕಾ ಮೋತ್ವಾನಿ ಹೇಳಿಕೆ ನೀಡಿದಳು. ಅಂದ ಹಾಗೆ, ಭಗ್ನ ಪ್ರೇಮಿ ಸಿಂಬುವಿನ ಹೊಸ ಗರ್ಲ್ ಫ್ರೆಂಡ್ ಭಾವಿ ಪತ್ನಿಯಾಗೋ ಯೋಗ ಈಗ ಹಂಸಿಕಾಗೆ ಸಿಕ್ಕಿದೆಯಂತೆ. ಈ ನಡುವೆ ಪ್ರಭುದೇವ ಕೂಡಾ ನಿರ್ದೇಶನದ ಜತೆಗೆ ಆಸೀನ್ ಜತೆ ಸುತ್ತಾಡುತ್ತಿದ್ದ ಎಂಬ ಸುದ್ದಿಯೂ ಹಬ್ಬಿತು.

ಸಿಂಬು-ನಯನಿ ಯಾಕೆ ದೂರವಾದರು ಎಂಬ ಬಗ್ಗೆ ಇದುವರೆಗೂ ಸೂಕ್ತ ಕಾರಣ ಸಿಕ್ಕಿಲ್ಲ. ಅದೇ ರೀತಿ ಪ್ರಭುದೇವಗೆ ನಯನಿ ಕೈ ಕೊಟ್ಟಿದ್ದು ಏಕೆ ಇನ್ನೂ ತಿಳಿದಿಲ್ಲ. ಇಷ್ಟೆಲ್ಲ ಹಿನ್ನೆಲೆ ಜತೆಗೆ ನಯನಿ ಮುಂದೆ ಸಿಂಬು ನಿಂತು ಮುಗುಳ್ನಗೆ ನೀಡುತ್ತಿದ್ದರೆ ನಯನಿ ಏನು ಮಾಡಳು ಸಾಧ್ಯ. ನಯನಿ-ಸಿಂಬು ಕಣ್ಣು ಕಣ್ಣು ಕಲೆತ್ತಿದ್ದು ಎಲ್ಲಿ? ಹೇಗೆ? ಮುಂದೆ ಓದಿ...

ಸಿಂಬು ಜತೆ ನಯನ್ ತಾರಾ

ನಯನ್ ತಾರಾ ಹಾಗೂ ಆರ್ಯ ಅಭಿನಯದ ಇತ್ತೀಚಿನ ರಾಜ ರಾಣಿ ಚಿತ್ರದ ಯಶಸ್ವಿ ಸಮಾರಂಭದಲ್ಲಿ ಸಿಂಬು ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ. ನಯನ್ ತಾರಾ ಎದುರುಗೊಂಡಾಗ ಇಬ್ಬರು ಎತ್ತೆತ್ತಲೋ ನೋಡುತ್ತಾ ಕಣ್ಣು ಕಣ್ಣು ಕಲೆಯಲು ಬಿಟ್ಟಿರಲಿಲ್ಲವಂತೆ.

ಆದರೆ, ನಂತರ ಇಬ್ಬರು ಪರಸ್ಪರ ವಿಶ್ ಮಾಡಿದ್ದಲ್ಲದೆ ಕೈ ಕುಲುಕಿ ತಮ್ಮ ನಡುವಿನ ವಿರಸಕ್ಕೆ ಮುಕ್ತಾಯ ಹಾಡಿದರಂತೆ. ನಯನ್ ತಾರಾ ಜತೆ ಮತ್ತೆ ಗೆಳೆತನ ಆರಂಭಿಸಲು ಸಿಂಬು ಹಲವು ದಿನಗಳಿಂದ ಯತ್ನಿಸಿದ್ದರು ಎಂಬ ಸುದ್ದಿಯೂ ಇದೆ.

ಕಥೆಯಲ್ಲ ಜೀವನ

ಸಿಂಬು ನಯನತಾರಾ ಇಬ್ಬರ ಮತ್ತೆ ಒಟ್ಟಿಗೆ ಮಾತನಾಡುತ್ತಾ ಹರಟೆ ಹೊಡೆದರೂ ಒಟ್ಟಿಗೆ ಇದ್ದ ಫೋಟೊ ತೆಗೆಯಲು ಬಿಡಲಿಲ್ಲವಂತೆ. ಈ ಹಿಂದೆ ಇಬ್ಬರು ಉದ್ರೇಕಕಾರಿಯಾಗಿ ವರ್ತಿಸುತ್ತಾ ತುಟಿಗೆ ತುಟಿಗೆ ಒತ್ತಿ ಚುಂಬಿಸಿದ ದೃಶ್ಯಾವಳಿಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡಿತ್ತು. ಆದರೆ, ಇಬ್ಬರು ಈ ವಿಡಿಯೋವನ್ನು ಅಲ್ಲಗೆಳೆದಿರಲಿಲ್ಲ.

ಪ್ರಭುದೇವ, ಸಿಂಬು, ನಯನತಾರಾ ಹಾಗೂ ಹಂಸಿಕಾ ಮೋತ್ವಾನಿ ನಡುವಿನ ತಥಾಕಥಿತ ಪ್ರೇಮ ಪ್ರಕರಣವನ್ನು ಇನ್ನೂ ಏಕೆ ಯಾರೂ ಚಿತ್ರಕಥೆಯಾಗಿಸಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಜ್ಯೂ ರಜನಿ ಎಂದೇ ಚಿಕ್ಕಂದಿನಲ್ಲಿ ಖ್ಯಾತಿ ಗಳಿಸಿದ್ದ ಸಿಂಬು ಹಾಗೂ ನಯನಿ ನಡುವೆ ಎಲ್ಲೆ ಮೀರಿದ ಪ್ರೇಮ ಇತ್ತು ಎಂಬುದು ಬೆತ್ತಲಾಗಿರುವ ಸತ್ಯ.

ರಾಜ ರಾಣಿ ಖುಷ್

ರಾಜ ರಾಣಿ ಚಿತ್ರದ ಕಥೆ ಗಮನಿಸಿದರೆ ದಂಪತಿಗಳು ಭಗ್ನ ಪ್ರೇಮಿಗಳಾಗಿರುತ್ತಾರೆ. ತಮ್ಮಮ್ಮ ಕಥೆ ಹೇಳಿಕೊಂಡು ಮತ್ತೆ ಒಂದಾಗುತ್ತಾರೆ. ಇದೇ ಚಿತ್ರದ ಯಶಸ್ವಿಕೂಟಕ್ಕೆ ಹಳೆ ಪ್ರೇಮಿಗಳು ಮತ್ತೆ ಗೆಳೆಯರಾಗಿದ್ದ್ದು ಕಾಕತಾಳೀಯ ಎನ್ನಬಹುದು.

ಆರ್ಯ, ಜೀವ ಸೇರಿದಂತೆ ಉಳಿದ ಚಿತ್ರತಂಡದ ಜತೆ ಸಿಂಬು ಸಂತೋಷದಿಂದ ಕಲೆತು ಬೆರೆತು ನಲಿದಾಡಿದರು ಎಂದು ತಿಳಿದು ಬಂದಿದೆ.

ಯಾರೂ ಸೊಲ್ಲೆತ್ತಿಲ್ಲ

ಹಳೆ ಪ್ರೇಮಿಗಳು ಮತ್ತೆ ಕಲೆತು ಬೆರೆತು ಖುಷಿಯಾಗಿದ್ದನ್ನು ಕಂಡ ಚಿತ್ರ ತಂಡ ಇಬ್ಬರು ಕೆಲ ಕಾಲ ಏಕಾಂತವಾಗಿ ಮಾತನಾಡಲು ಬಿಟ್ಟಿದೆ. ಯಾರೊಬ್ಬರೂ ಇಬ್ಬರ ಹಳೆ ಕಥೆ ಕೆದಕದೆ ಸಂತೋಷ ಕೂಟದಲ್ಲಿ ಸಂತಸ ಭಂಗವಾಗದಂತೆ ನೋಡಿಕೊಂಡರು ಎನ್ನಲಾಗಿದೆ.

ರಾಜ ರಾಣಿ ಚಿತ್ರ ತಂಡ

ಎಆರ್ ಮುರಗದಾಸ್, ಜೀವ, ಜಯಂ ರವಿ, ರವಿ ಪತ್ನಿ ಆರತಿ, ಶ್ಯಾಮ್, ಶಂತನು, ಉದಯನಿಧಿ ಸ್ಟಾಲಿನ್, ಶ್ರೀಕಾಂತ್, ಸಿವಿ ಕುಮಾರ್, ಜ್ಞಾನವೇಲ್ ರಾಜ, ಲಿಸಿ ಪ್ರಿಯದರ್ಶನ್, ಕೃತ್ತಿಕಾ ಉದಯನಿಧಿ, ರಮ್ಯ ಕೃಷ್ಣನ್, ಕಾರ್ತಿಕಾ, ಆಂಡ್ರಿಯಾ, ಸೋನಿಯಾ ಅಗರವಾಲ್, ಜಯ್, ನಾಜ್ರಿಯಾ ನಜೀಂ, ಅಟ್ಲಿ ಕುಮಾರ್, ಜಿವಿ ಪ್ರಕಾಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಸಂತೋಷ ಕೂಟದಲ್ಲಿದ್ದರು.

ಸಿಂಬು ಮುಂದಿನ ನಡೆ

ಸಿಂಬು ಸದ್ಯಕ್ಕೆ ಹಂಸಿಕಾ ಮೋತ್ವಾನಿಗೆ ಮನ ಸೋತಿದ್ದಾನೆ. ಹಾಗಾಗಿ ಹಂಸಿಕಾ ಜತೆ ಮದುವೆಯಾಗುತ್ತಾರೆ ಎನ್ನಲಾಗಿದೆ.

English summary
Simbu and Nayantara recently came face to face at the success bash of Raja Rani, and the ex-couple reportedly buried the hatchet. Silambarasan and Nayantara's love episode was famous at one point of time. But their relationship was broken for unknown reasons which shocked their fans and entire industry as they were one of the hottest couples then in Kollywood.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada