For Quick Alerts
  ALLOW NOTIFICATIONS  
  For Daily Alerts

  ಸೋಲಿನಿಂದ ಕಂಗೆಟ್ಟ ಪೂಜಾ ಹೆಗ್ಡೆಗೆ ನಿರ್ದೇಶಕ ತ್ರಿವಿಕ್ರಮ್ ಕೊಟ್ಟ ಸಲಹೆ ಏನು?

  |

  ದಕ್ಷಿಣ ಭಾರತದ ಫೇಮಸ್ ನಟಿ ಪೂಜಾ ಹೆಗ್ಡೆಗೆ 2022 ಯಾಕೋ ಸರಿಯಿರಲಿಲ್ಲ. ಈಕೆ ನಟಿಸಿದ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದಿಲ್ಲ. ಸತತ ಸೋಲುಗಳನ್ನೇ ಕಂಡಿರೋ ಪೂಜಾ ಹೆಗ್ಡೆ 2023ಯನ್ನು ಪಾಸಿಟಿವ್ ಆಗಿ ಶುರು ಮಾಡಲು ನಿರ್ಧರಿಸಿದ್ದಾರೆ.

  ಒಂದಿಷ್ಟು ದಿನ ಪೂಜಾ ಹೆಗ್ಡೆ ರಣ್‌ವೀರ್ ಸಿಂಗ್ ಜೊತೆ ನಟಿಸಿದ ಬಾಲಿವುಡ್ ಸಿನಿಮಾ 'ಸರ್ಕಸ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಕಳೆದ ವರ್ಷ ಕೊನೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು.

  ಈಗ ಮತ್ತೆ ದಕ್ಷಿಣದ ಕಡೆ ಮುಖ ಮಾಡಿದ್ದು, ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಈ ಮಧ್ಯೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಸೋಲಿನಿಂದ ಪಾರಾಗಲು ಪೂಜಾ ಹೆಗ್ಡೆಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆವೊಂದನ್ನು ಕೊಟ್ಟಿದ್ದಾರಂತೆ. ಅಷ್ಟಕ್ಕೂ ಆ ಸಲಹೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಹೈದರಾಬಾದ್‌ಗೆ ಪೂಜಾ ಹೆಗ್ಡೆ ಎಂಟ್ರಿ

  ಹೈದರಾಬಾದ್‌ಗೆ ಪೂಜಾ ಹೆಗ್ಡೆ ಎಂಟ್ರಿ

  ಪೂಜಾ ಹೆಗ್ಡೆ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿರೋದು ಗೊತ್ತೇ ಇದೆ. ಸತತ ಸೋಲುಗಳನ್ನು ಕಂಡಿರೋ ಪೂಜಾ ಹೆಗ್ಡೆ ಕೈಯಲ್ಲಿ ತೆಲುಗಿನ ಏಕೈಕ ಸಿನಿಮಾವಿದೆ. ಈಗಾಗಲೇ ಮಹೇಶ್ ಬಾಬು ಅಭಿನಯದ 28ನೇ ಸಿನಿಮಾಗೆ ಸಹಿ ಮಾಡಿರೋ ನಟಿ ಸಿನಿಮಾದಲ್ಲಿ ನಟಿಸೋಕೆ ಹೈದರಾಬಾದ್‌ಗೆ ಬಂದಿದ್ದಾರೆ. ಇನ್ನೇನು ಲ್ಯಾಂಡ್ ಆಗುತ್ತಿದ್ದಂತೆ ಜುಬಿಲಿ ಹಿಲ್ಸ್‌ನಲ್ಲಿರುವ ಪೆದ್ದಮ್ಮ ಟೆಂಪಲ್‌ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಹಾಗಂತ ಇಲ್ಲಿಗೆ ಪೂಜಾ ಹೆಗ್ಡೆಯ ಪೂಜಾ ಕಾರ್ಯಗಳು ಇಲ್ಲಿಗೆ ನಿಂತಿಲ್ಲ.

  ತ್ರಿವಿಕ್ರಮ್ ಕೊಟ್ಟ ಸಲಹೆ ಏನು?

  ತ್ರಿವಿಕ್ರಮ್ ಕೊಟ್ಟ ಸಲಹೆ ಏನು?

  ಅಂದ್ಹಾಗೆ ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾಗೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿರೋದು ಗೊತ್ತೇ ಇದೆ.ಇವರಿಗೂ ಸಿನಿಮಾ ಬಗ್ಗೆ ಭಯ ಇರೋದ್ರಿಂದ ಪೂಜಾ ಹೆಗ್ಡೆಗೆ ಟೆಂಪಲ್ ರನ್ ಮಾಡುವಂತ ಸಲಹೆಗಳನ್ನು ನೀಡಿದ್ದಾರಂತೆ. ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುವಂತೆ ನಟಿಗೆ ನಿರ್ದೇಶಕರು ಸಲಹೆ ನೀಡಿದ್ದಾರಂತೆ. ಪೂಜಾ ಹೆಗ್ಡೆ ಕೂಡ ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

  2022ರಲ್ಲಿ ಪೂಜಾ ಹೆಗ್ಡೆಗೆ ಬರೀ ಸೋಲು

  2022ರಲ್ಲಿ ಪೂಜಾ ಹೆಗ್ಡೆಗೆ ಬರೀ ಸೋಲು

  2022 ಪೂಜಾ ಹೆಗ್ಡೆಗೆ ಆಶಾದಾಯಕವಾಗಿ ಇರಲಿಲ್ಲ.ಈ ವರ್ಷ ತೆರೆಕಂಡ ನಾಲ್ಕೂ ಸಿನಿಮಾಗಳು ಹೀನಾಯವಾಗಿ ಸೋತಿವೆ. ಪ್ರಭಾಸ್ ಜೊತೆ ನಟಿಸಿದ್ದ 'ರಾಧೆ ಶ್ಯಾಮ್', ಚಿರಂಜೀವಿ ಹಾಗೂ ರಾಮ್‌ ಚರಣ್‌ ಸಿನಿಮಾ 'ಆಚಾರ್ಯ', ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಹಾಗೇ ರಣ್‌ವೀರ್ ಸಿಂಗ್‌ಗೆ ಜೋಡಿಯಾಗಿದ್ದ 'ಸರ್ಕಸ್' ಪ್ಲಾಪ್ ಆಗಿತ್ತು. ಹೀಗಾಗಿ ಮಹೇಶ್ 28ನೇ ಸಿನಿಮಾ ತೆಲುಗಿನಲ್ಲಿ ಪೂಜಾಗೆ ಕೊನೆಯ ಅವಕಾಶವಿದ್ದಂತೆ. ಈ ಸಿನಿಮಾ ಗೆಲ್ಲಲೇ ಬೇಕಾದ ಅನಿವಾರ್ಯವಿದೆ.

  ಮಹೇಶ್ 28ನೇ ಸಿನಿಮಾ ಯಾವಾಗ?

  ಮಹೇಶ್ 28ನೇ ಸಿನಿಮಾ ಯಾವಾಗ?

  ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 28ನೇ ಸಿನಿಮಾ ಮತ್ತೆ ಆರಂಭ ಆಗಬೇಕಿದೆ. ಮೂಲಗಳ ಪ್ರಕಾರ, ಫೆಬ್ರವರಿ ಮೊದಲ ವಾರದಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಹೀಗಾಗಿ ಪೂಜಾ ಹೆಗ್ಡೆ ಹೈದರಾಬಾದ್‌ಗೆ ಲ್ಯಾಂಡ್ ಆಗಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೆ ಭಾಗಿಯಾಗಲಿದ್ದಾರೆ. ಈ ಮಧ್ಯೆ ಟೆಂಪಲ್‌ ರನ್ ಮ್ಯಾಟರ್ ಓಡಾಡುತ್ತಿದೆ.

  English summary
  Gossip Is That Trivikram Suggested Pooja Hegde To Do Special Poojas,Know More.
  Sunday, January 15, 2023, 21:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X