For Quick Alerts
  ALLOW NOTIFICATIONS  
  For Daily Alerts

  ನಾಯಕ ನಟನ ಜೊತೆ ಜ್ವಾಲಾ ಗುತ್ತಾ ಕುಚ್ ಕುಚ್

  By ಅನಂತರಾಮು, ಹೈದರಾಬಾದ್
  |

  ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುತ್ತಾ ಮತ್ತೆ ಸುದ್ದಿ ಮಾಡಿದ್ದಾರೆ. ಅವರು ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಐಟಂ ಸಾಂಗ್ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಡುತ್ತಿದ್ದಾರೆ ಜ್ವಾಲಾ. ನಿತಿನ್ ಹೀರೋ ಆಗಿರುವ ಚಿತ್ರದ ಹೆಸರು 'ಗುಂಡೆಜಾರಿ ಗಲ್ಲಂತಯ್ಯಿಂದಿ'.

  ಬೆಳ್ಳಿತೆರೆಗೆ ಅಡಿಯಿಡುತ್ತಿರುವ ಜ್ವಾಲಾ ತಮ್ಮ ಹಾಟ್ ಚಿತ್ರಗಳ ಮೂಲಕ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಬ್ಯಾಡ್ಮಿಂಟನ್ ನ ವೃತ್ತಿಜೀವನದಲ್ಲಿ ಕೊನೆಯ ಘಟ್ಟ ತಲುಪಿರುವ ಅವರು ಗುಡ್ ಬೈ ಹೇಳುವ ಸೂಚನೆ ನೀಡಿದ್ದಾರೆ.

  ಟಾಲಿವುಡ್ ಹೀರೋ ಹರ್ಷವರ್ಧನ್ ಜೊತೆ ಇತ್ತಿತ್ತಲಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಜ್ವಾಲಾ. ಈ ಮೂಲಕ ಟಾಲಿವುಡ್ ನಲ್ಲಿ ಹೊಸ ಜ್ವಾಲೆ ಹೊತ್ತಿಕೊಂಡಿದೆ. ಅದನ್ನು ಶಮನ ಮಾಡಲು 101 ಸಂಖ್ಯೆಗೆ ಕರೆಮಾಡಿದರು ನಂದಿಸುವುದು ಕಷ್ಟ.

  ಅದು ಯಾವುದೇ ಕಾರ್ಯಕ್ರಮವಾಗಿರಲಿ ಇಬ್ಬರೂ ಜೊತೆಜೊತೆಯಲ್ಲೇ ದರ್ಶನಭಾಗ್ಯ ನೀಡುತ್ತಿದ್ದಾರಂತೆ. ಇದನ್ನು ಕಂಡವರು ಸುಣ್ಣ ಬಣ್ಣ ಕಟ್ಟಿ ಇಬ್ಬರ ನಡುವೆ ಏನೋ ಸಂಥಿಂಗ್ ಸಂಥಿಂಗ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  ಈಗಾಗಲೆ ಗಂಡನಿಂದ ದೂರ ಸರಿದಿರುವ ಜ್ವಾಲಾಗೆ ಹೊಸ ಜೋಡಿ ಸಿಕ್ಕಿದೆ ಎಂದು ಕೆಲವರಂದರೆ, ಇನ್ನೂ ಕೆಲವರು ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಅಷ್ಟೇ ಎನ್ನುತ್ತಿದ್ದಾರೆ. ಇವರ ನಡುವೆ ಇರುವುದು ಕೇವಲ ಸ್ನೇಹಬಂಧನವೋ ಅಥವಾ ಇನ್ಯಾವ ಬಂಧವೋ ಎಂಬ ಕುಚ್ ಕುಚ್ ಮಾತುಗಳು ಟಾಲಿವುಡ್ ನಲ್ಲಿ ಟಾಂ ಟಾಂ ಆಗಿವೆ.

  English summary
  Tollywood gossip is that Gutta and Harshavardhan Rane are seeing each other from a few days and both seem to be dating. Though, they never acted together their recent public appearances are raising lot of doubts about their relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X