For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!

  By Harshitha
  |

  ''ಬಿಗ್ ಬಾಸ್' ಎಂಬುದೇ ಫಿಕ್ಸಿಂಗ್ ಶೋ...ಅದರಲ್ಲಿ ಯಾವ ರಿಯಾಲಿಟಿ ಕೂಡ ಇಲ್ಲ...ಅಲ್ಲಿ ನಡೆಯೋದೆಲ್ಲಾ ಸ್ಕ್ರಿಪ್ಟೆಡ್'' ಅಂತ ಯಾರು ಎಷ್ಟೇ ಬೈಯ್ಕೊಂಡ್ರೂ, 'ಬಿಗ್ ಬಾಸ್' ಶೋ ನೋಡುವವರ ಸಂಖ್ಯೆ ಖಂಡಿತ ಕಡಿಮೆ ಇಲ್ಲ.

  ಹಿಂದಿಯಲ್ಲಾಗಲಿ, ಕನ್ನಡದಲ್ಲಾಗಲಿ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಅಪಾರ ವೀಕ್ಷಕರ ಬಳಗ ಇದೆ. ಅದಕ್ಕೆ ಕಾರ್ಯಕ್ರಮದ ಟಿ.ಆರ್.ಪಿ ರೇಟಿಂಗ್ ಸಾಕ್ಷಿ. [ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-4'! ಹೌದು ಸ್ವಾಮಿ!]

  ಕನ್ನಡದಲ್ಲಿ 'ಬಿಗ್ ಬಾಸ್' ಮೂರು ಆವೃತ್ತಿಗಳು ಯಶಸ್ವಿ ಆಗಿದೆ. ಮುಂದಿನ ತಿಂಗಳ ಹೊತ್ತಿಗೆ 'ಬಿಗ್ ಬಾಸ್ ಕನ್ನಡ-4' ಶುರುವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

  ಎಲ್ಲರ ಕಣ್ಣು ಸ್ಪರ್ಧಿಗಳ ಮೇಲೆ....

  ಎಲ್ಲರ ಕಣ್ಣು ಸ್ಪರ್ಧಿಗಳ ಮೇಲೆ....

  'ಬಿಗ್ ಬಾಸ್' ಶೋ ಯಶಸ್ಸು ನಿಂತಿರುವುದೇ ಅದರಲ್ಲಿ ಭಾಗಿಯಾಗುವ ಸ್ಪರ್ಧಿಗಳ ಆಯ್ಕೆ ಮೇಲೆ. ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಅಸಲಿ ಮುಖವಾಡ ಬಯಲಿಗೆ ಬಂದರಷ್ಟೇ ವಾಹಿನಿಯವರಿಗೆ ಟಿ.ಆರ್.ಪಿ.! [ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!]

  ಲಿಸ್ಟ್ ರೆಡಿ ಆಗ್ತಿದೆ.!

  ಲಿಸ್ಟ್ ರೆಡಿ ಆಗ್ತಿದೆ.!

  ಹಿಂದಿನ ಮೂರು ಸೀಸನ್ ಗಳಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಖ್ಯಾತಿ ಪಡೆದವರಿಗೆ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಈ ಬಾರಿ ಕೂಡ ಅಂಥವರಿಗೆ ಚಾನ್ಸ್ ಕೂಡುವ ಸಾಧ್ಯತೆ ಹೆಚ್ಚು. ಈಗಾಗಲೇ 'ಬಿಗ್ ಬಾಸ್-4' ಕನ್ಟೆಸ್ಟೆಂಟ್ಸ್ ಲಿಸ್ಟ್ ರೆಡಿಯಾಗುತ್ತಿದ್ದು, ಅದರಲ್ಲಿ 'ಇವರ' ಹೆಸರಿದೆ ಅಂತ ಗುಲ್ಲೆದ್ದಿದೆ.

  ಯಾರಪ್ಪಾ ಅವರು?

  ಯಾರಪ್ಪಾ ಅವರು?

  ಈ ಹಿಂದೆ ಟಿವಿ-9 ಹಾಗೂ ಬಿಟಿವಿ ವಾಹಿನಿಯಲ್ಲಿ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಹೆಸರು 'ಬಿಗ್ ಬಾಸ್-4' ಕನ್ಟೆಸ್ಟೆಂಟ್ಸ್ ಲಿಸ್ಟ್ ನಲ್ಲಿ ಇದ್ಯಂತೆ.

  ಕಳೆದ ಬಾರಿ ಕೂಡ ಶೀತಲ್ ಶೆಟ್ಟಿ ಹೆಸರು ಕೇಳಿಬಂದಿತ್ತು!

  ಕಳೆದ ಬಾರಿ ಕೂಡ ಶೀತಲ್ ಶೆಟ್ಟಿ ಹೆಸರು ಕೇಳಿಬಂದಿತ್ತು!

  ಹಾಗ್ನೋಡಿದ್ರೆ, 'ಬಿಗ್ ಬಾಸ್-3'ನಲ್ಲೂ ಶೀತಲ್ ಶೆಟ್ಟಿ ಹೆಸರು ಕೇಳಿಬಂದಿತ್ತು. ಕಡೆಗೆ 'ಬಿಗ್' ಮನೆಗೆ ಎಂಟ್ರಿಕೊಟ್ಟವರು ಮಾತ್ರ ಟಿವಿ-9 ವಾಹಿನಿಯ ಆಂಕರ್ ರೆಹಮಾನ್.

  ನವೀನ್ ಕೃಷ್ಣ ಹೋಗ್ತಾರಾ?

  ನವೀನ್ ಕೃಷ್ಣ ಹೋಗ್ತಾರಾ?

  ನಟ ನವೀನ್ ಕೃಷ್ಣ ಕೂಡ 'ಬಿಗ್ ಬಾಸ್-4'ನಲ್ಲಿ ಭಾಗವಹಿಸುತ್ತಾರೆ ಎಂಬ ಗುಸು ಗುಸು ಕೇಳಿ ಬಂದಿದೆ.

  ಕೀರ್ತಿ ಶಂಕರಘಟ್ಟ

  ಕೀರ್ತಿ ಶಂಕರಘಟ್ಟ

  'ಕಿರಿಕ್ ಕೀರ್ತಿ' ಹೆಸರಲ್ಲಿ ಫೇಸ್ ಬುಕ್ ನಲ್ಲಿ ಸೆನ್ಸೇಷನ್ ಆಗಿರುವ ಕೀರ್ತಿ ಶಂಕರಘಟ್ಟ ಹೆಸರೂ 'ಬಿಗ್ ಬಾಸ್-4' ಸ್ಪರ್ಧಿಗಳ ಲಿಸ್ಟ್ ನಲ್ಲಿ ಇದ್ಯಂತೆ.

  ಕನ್ ಫರ್ಮ್ ಇಲ್ಲ!

  ಕನ್ ಫರ್ಮ್ ಇಲ್ಲ!

  ಇವರೆಲ್ಲಾ ಈ ಬಾರಿಯ 'ಬಿಗ್ ಬಾಸ್'ನಲ್ಲಿ ಭಾಗವಹಿಸುತ್ತಾರೆ ಅಂತ ಈಗಲೇ ಹೇಳುವುದು ಕಷ್ಟ. ಸದ್ಯಕ್ಕೆ ಇವರೆಲ್ಲರ ಹೆಸರು ಕೇಳಿಬಂದಿದೆ ಅಷ್ಟೆ. ನಾಳೆ ಚೇಂಜ್ ಆದರೂ ಅಚ್ಚರಿ ಪಡಬೇಡಿ.

  ಒಂದಂತೂ ಖಚಿತ

  ಒಂದಂತೂ ಖಚಿತ

  'ಬಿಗ್ ಬಾಸ್-4' ಕಾರ್ಯಕ್ರಮಕ್ಕೆ ಎಂದಿನಂತೆ ಕಿಚ್ಚ ಸುದೀಪ್ ರವರೇ ಹೋಸ್ಟ್.

  ಕಲರ್ಸ್ ವಾಹಿನಿಯಲ್ಲೇ ಪ್ರಸಾರ

  ಕಲರ್ಸ್ ವಾಹಿನಿಯಲ್ಲೇ ಪ್ರಸಾರ

  'ಬಿಗ್ ಬಾಸ್' ಹಕ್ಕುಗಳು 'ಕಲರ್ಸ್ ವಾಹಿನಿ' ಪಾಲಾಗಿರುವ ಕಾರಣ 'ಬಿಗ್ ಬಾಸ್-4' ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ನಿಮ್ಮ ಪ್ರಕಾರ ಯಾರು ಇರಬೇಕು?

  ನಿಮ್ಮ ಪ್ರಕಾರ ಯಾರು ಇರಬೇಕು?

  'ಬಿಗ್ ಬಾಸ್ ಸೀಸನ್ 4'ನಲ್ಲಿ ನಿಮ್ಮ ಪ್ರಕಾರ ಯಾರು ಸ್ಪರ್ಧಿ ಆಗಬೇಕು? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ....ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ....

  English summary
  'Bigg Boss' is back in Kannada. 'Bigg Boss-4' will be aired in 'Colours Kannada Channel' and Sudeep to host the Season. According to the Grapevine, Sheetal Shetty, Keerthi Shankarghatta and Naveen Krishna are considered in the contestant list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X