»   » ಎಚ್.ಡಿ.ಕೆ ಇಚ್ಛಾನುಸಾರ ನಿಖಿಲ್ ಮುಂದಿನ ಚಿತ್ರ 'ನಾಡಪ್ರಭು ಕೆಂಪೇಗೌಡ'.!

ಎಚ್.ಡಿ.ಕೆ ಇಚ್ಛಾನುಸಾರ ನಿಖಿಲ್ ಮುಂದಿನ ಚಿತ್ರ 'ನಾಡಪ್ರಭು ಕೆಂಪೇಗೌಡ'.!

Posted By:
Subscribe to Filmibeat Kannada

'ಜಾಗ್ವಾರ್' ಚಿತ್ರದ ಮೂಲಕ ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ತೆಲುಗು ಸಿನಿ ಅಂಗಳದಲ್ಲಿಯೂ ಹೊಸ ಸಂಚಲನ ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ರವರ ಮುಂದಿನ ಚಿತ್ರದ ಬಗ್ಗೆ ಸಹಜವಾಗಿ ಎಲ್ಲರಲ್ಲಿಯೂ ಕುತೂಹಲ ಇದ್ದೇ ಇದೆ.

ನಿಖಿಲ್ ಕುಮಾರ್ ಮುಂಬರುವ ಚಿತ್ರದ ಬಗ್ಗೆ ಆಗಾಗ ಸದ್ದು-ಸುದ್ದಿ ಆಗುತ್ತಲೇ ಇದೆ. ಈ ಗ್ಯಾಪ್ ನಲ್ಲಿಯೇ ಹೊಸ ನ್ಯೂಸ್ ಒಂದು ಗಾಂಧಿನಗರದಲ್ಲಿ ರೌಂಡ್ ಹೊಡೆಯುತ್ತಿದೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿರಿ....

'ನಾಡಪ್ರಭು ಕೆಂಪೇಗೌಡ' ಕುರಿತ ಸಿನಿಮಾ

ತಮ್ಮ ಪುತ್ರ ನಿಖಿಲ್ ಕುಮಾರ್ ಅಭಿನಯದಲ್ಲಿ 'ನಾಡಪ್ರಭು ಕೆಂಪೇಗೌಡ' ಕುರಿತು ಸಿನಿಮಾ ನಿರ್ಮಿಸಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಹಲವು ವರ್ಷಗಳ ಕನಸು

ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ರವರ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡುವುದು ಎಚ್.ಡಿ.ಕುಮಾರಸ್ವಾಮಿ ರವರ ಹಲವು ದಿನಗಳ ಕನಸಾಗಿದ್ದು, ಈಗ ಅದಕ್ಕೆ ಕಾಲ ಕೂಡಿ ಬಂದಿದೆ.

ಮುಂದಿನ ವರ್ಷ ಸೆಟ್ಟೇರಲಿದೆ

ಮೂಲಗಳ ಪ್ರಕಾರ, 'ನಾಡಪ್ರಭು ಕೆಂಪೇಗೌಡ' ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. ಇತಿಹಾಸಕಾರರು ಹಾಗೂ ವಿದ್ವಾಂಸರನ್ನೊಳಗೊಂಡ ತಂಡವು 'ನಾಡಪ್ರಭು ಕೆಂಪೇಗೌಡ' ಚಿತ್ರದ ಕಥೆ ರೆಡಿ ಮಾಡಲಿದ್ದಾರಂತೆ. ಸ್ಕ್ರಿಪ್ಟ್ ವರ್ಕ್ ಮುಗಿದ ಕೂಡಲೆ ಸಿನಿಮಾ ಸೆಟ್ಟೇರಲಿದ್ಯಂತೆ.

ನಿರ್ದೇಶಕರು ಯಾರು.?

ಸದ್ಯಕ್ಕೆ 'ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೆ ಬಂಡವಾಳ ಹಾಕಲು ಎಚ್.ಡಿ.ಕೆ ರೆಡಿ ಇದ್ದಾರೆ. ಆದ್ರೆ, ನಿರ್ದೇಶಕರ ಆಯ್ಕೆ ಇನ್ನೂ ನಡೆದಿಲ್ಲ.

'ಬಾಹುಬಲಿ' ಗ್ರಾಫಿಕ್ಸ್ ತಂಡ

'ಬಾಹುಬಲಿ' ಚಿತ್ರಕ್ಕೆ ಗ್ರಾಫಿಕ್ಸ್ ಮಾಡಿದ ತಂಡ 'ನಾಡಪ್ರಭು ಕೆಂಪೇಗೌಡ' ಚಿತ್ರಕ್ಕೂ ಗ್ರಾಫಿಕ್ಸ್ ಮಾಡಲಿದ್ಯಂತೆ.

English summary
HD Kumaraswamy to produce a film on 'Nadaprabhu Kempegowda' which features Nikhil Kumar in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada