For Quick Alerts
  ALLOW NOTIFICATIONS  
  For Daily Alerts

  KGF 2 Actors Remuneration: ಅಬ್ಬಾಬ್ಬಾ.. 'ಕೆಜಿಎಫ್ 2' ಯಶ್, ಶ್ರೀನಿಧಿ, ಸಂಜಯ್ ದತ್ ಸಂಭಾವನೆ ಇಷ್ಟೊಂದಾ?

  |

  'ಕೆಜಿಎಫ್ 2' ಸಿನಿಮಾ ರಿಲೀಸ್ ಹತ್ತಿರದಲ್ಲೇ ಇದೆ. ಇಡೀ ದೇಶದಾದ್ಯಂತ 'ಕೆಜಿಎಫ್ 2' ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಸಿನಿಪ್ರಿಯರು ಕಾತುರರಾಗಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

  'ಕೆಜಿಎಫ್ 2' ಹೆಸರು ಕೇಳಿದ್ರೆ ಸಾಕು ಜನರೂ ಪ್ರತಿ ಅಪ್‌ಡೇಟ್‌ಗಾಗಿಯೂ ಕಾದು ಕುಳಿತಿರುತ್ತಾರೆ. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿರುತ್ತೆ. ಅದರಲ್ಲೂ ಸಿನಿಮಾದಲ್ಲಿ ನಟಿಸಲು ಕಲಾವಿದರು ಎಷ್ಟೆಷ್ಟು ಸಂಭಾವನೆ ಪಡೆದಿದ್ದಾರೆ ಅನ್ನುವ ವಿಚಾರ ಚರ್ಚೆ ಆಗುತ್ತಲೆ ಇದೆ.

  Toofan KGF2 Song Records: 'ಕೆಜಿಎಫ್ 2' ಮೊದಲ ಹಾಡು 'ತೂಫಾನ್' 5 ಗಂಟೆಗಳಲ್ಲಿ ಬರೆದ ದಾಖಲೆಗಳು ಏನೇನು? Toofan KGF2 Song Records: 'ಕೆಜಿಎಫ್ 2' ಮೊದಲ ಹಾಡು 'ತೂಫಾನ್' 5 ಗಂಟೆಗಳಲ್ಲಿ ಬರೆದ ದಾಖಲೆಗಳು ಏನೇನು?

  ಇದೀಗ 'ಕೆಜಿಎಫ್ 2' ಸಿನಿಮಾ ನಟರ ಸಂಭಾವಣೆ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತೆ. ಒಂದಷ್ಟು ಗಾಸಿಪ್‌ಗಳು ಈ ವಿಚಾರದಲ್ಲಿ ಕೇಳಿ ಬಂದರೆ ಮತ್ತೊಂದಷ್ಟು ವರದಿಗಳು ಈ ಬಗ್ಗೆ ಪ್ರಸಾರ ಆಗುತ್ತೆ. ಇದನ್ನು ನಿಖರವಾಗಿ ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.

  KGF 2 Gossip: ಆರ್‌ಸಿಬಿ ಪಂದ್ಯದಲ್ಲಿ 'ಕೆಜಿಎಫ್ 2' ಟ್ರೈಲರ್ ಪ್ರದರ್ಶನ ಆಗುತ್ತಾ? KGF 2 Gossip: ಆರ್‌ಸಿಬಿ ಪಂದ್ಯದಲ್ಲಿ 'ಕೆಜಿಎಫ್ 2' ಟ್ರೈಲರ್ ಪ್ರದರ್ಶನ ಆಗುತ್ತಾ?

  ಸಂಭಾವಣೆ ವಿಚಾರ ಕೇಳಿ ಫ್ಯಾನ್ಸ್ ಕಂಗಾಲು

  ಸಂಭಾವಣೆ ವಿಚಾರ ಕೇಳಿ ಫ್ಯಾನ್ಸ್ ಕಂಗಾಲು

  'ಕೆಜಿಎಫ್ 2'ಗಾಗಿ ಯಶ್, ಪ್ರಶಾಂತ್ ನೀಲ್, ಸಂಜಯ್ ದತ್ ಸೇರಿದಂತೆ ಹಲವು ನಟರ ಸಂಭಾವನೆ ಎಷ್ಟೆಷ್ಟು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ರಾಕಿ ಬಾಯ್ ಯಶ್ ಈ ಸಿನಿಮಾಗಾಗಿ ಎಷ್ಟು ಸಂಭಾವಣೆ ಪಡೆದಿರಬಹುದು? ಮೂರು ವರ್ಷದ ಶ್ರಮಕ್ಕಾಗಿ ಯಶ್ ಪಡೆದಿರುವ ಸಂಭಾವಣೆ ಎಷ್ಟು ಎಂದು ಜನರಿಗೆ ಆಗಾಗ ಕಾಡುತ್ತಲೇ ಇದೆ. ಅದಕ್ಕೆ ಈಗ ಉತ್ತರ ಸಿಕ್ಕಿದ್ದು, 'ಕೆಜಿಎಫ್ 2'ಗಾಗಿ ನಟ ಯಶ್ 25 ರಿಂದ 27 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

  ಊಹೆಗೂ ನಿಲುಕದ ಪ್ರಶಾಂತ್ ನೀಲ್ ಸಂಭಾವನೆ

  ಊಹೆಗೂ ನಿಲುಕದ ಪ್ರಶಾಂತ್ ನೀಲ್ ಸಂಭಾವನೆ

  ಇನ್ನು ನಿಮ್ಮ ಊಹೆಯ ಪ್ರಕಾರ 'ಕೆಜಿಎಫ್ 2' ಚಿತ್ರ ನಿರ್ದೇಶನಕ್ಕೆ ಪ್ರಶಾಂತ್ ನೀಲ್ ಸಂಭಾವನೆ ಎಷ್ಟಿರಬಹುದು? ನಿಜಕ್ಕೂ ಊಹೆನೂ ಮೀರಿಸುವಂತಿದೆ ಪ್ರಶಾಂತ್ ನೀಲ್ ಸಂಭಾವನೆ ಎನ್ನುತ್ತಿದೆ ಸ್ಯಾಂಡಲ್‌ವುಡ್. ಪ್ರಶಾಂತ್ ನೀಲ್ 'ಕೆಜಿಎಫ್ 2' ಚಿತ್ರದ ನಿರ್ದೇಶನಕ್ಕಾಗಿ 15 ರಿಂದ 20 ಕೋಟಿ ಸಂಭಾವಣೆ ಪಡೆದಿದ್ದಾರಂತೆ. ಇನ್ನು 'ಕೆಜಿಎಫ್ ಪಾರ್ಟ್ 1' ಮತ್ತು ಪಾರ್ಟ್ 2 ನಲ್ಲಿ ರಾಕಿ ಬಾಯ್‌ ಗ್ಲಾಮರ್ ಗೊಂಬೆಯಾಗಿ ನಟಿಸಿರುವ ಶ್ರೀನಿಧಿ ಶೆಟ್ಟಿ ಕೂಡ ಈ ಸಿನಿಮಾಗಾಗಿ 3 ರಿಂದ 4 ಕೋಟಿ ಪಡೆದಿದ್ದಾರೆ.

  ರವೀನಾ- ಸಂಜಯ್ ಸಂಭಾವನೆ ಎಷ್ಟು ?

  ರವೀನಾ- ಸಂಜಯ್ ಸಂಭಾವನೆ ಎಷ್ಟು ?

  ಈ ಸಿನಿಮಾದ ಪ್ರಮುಖ ಅಟ್ರ್ಯಾಕ್ಷನ್ ಅಂದರೆ ಬಾಲಿವುಡ್ ನಟರಾದ ರವೀನಾ ಟಂಡನ್ ಮತ್ತು ಸಂಜಯ್ ದತ್. ಈ ಇಬ್ಬರು ಸಿನಿಮಾದಲ್ಲಿ ನಟಿಸಿರುವ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇವರಿಬ್ಬರ ಪಾತ್ರ ಈ ಸಿನಿಮಾದಲ್ಲಿ ಹೇಗಿರುತ್ತೆ? ಯಾವ ರೀತಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಜಾಸ್ತಿ ಆಗಿದೆ. ಇನ್ನು ಇವರಿಬ್ಬರ ಸಂಭಾವನೆ ವಿಚಾರಕ್ಕೆ ಬರೋದಾದರೆ ನಟಿ ರವೀನಾ ಟಂಡನ್ 'ಕೆಜಿಎಫ್ 2' ಗಾಗಿ 1 ರಿಂದ 2 ಕೋಟಿ ಪಡೆದಿದ್ದಾರಂತೆ. ಇನ್ನು ಅಧೀರ ಸಂಜಯ್ ದತ್ ಈ ಚಿತ್ರಕ್ಕಾಗಿ 9 ರಿಂದ 10 ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

  ಲಕ್ಷ ಲಕ್ಷ ಪಡೆದ ಈ ಇಬ್ಬರು ಕಲಾವಿದರು !

  ಲಕ್ಷ ಲಕ್ಷ ಪಡೆದ ಈ ಇಬ್ಬರು ಕಲಾವಿದರು !

  ಇನ್ನು ಮಾಳವಿಕ ಮತ್ತು ಪ್ರಕಾಶ್ ರಾಜ್ ಅವರ ಸಂಭಾವನೆ ವಿಚಾರಕ್ಕೆ ಬರೋದಾದ್ರೆ ಮಾಳವಿಕಾ ಅವಿನಾಶ್ ಈ ಚಿತ್ರಕ್ಕಾಗಿ 60 ರಿಂದ 62 ಲಕ್ಷ ಪಡೆದುಕೊಂಡಿದ್ದಾರೆ. ನಟ ಪ್ರಕಾಶ್ ರಾಜ್ 'ಕೆಜಿಎಫ್ 2' ಸಿನಿಮಾದ ನಟನೆಗಾಗಿ 80 ರಿಂದ 82 ಲಕ್ಷ ಪಡೆದಿದ್ದಾರೆ ಅನ್ನುವುದು ತಿಳಿದು ಬಂದಿದೆ. ಇನ್ನು ಮೊದಲ ಭಾಗದಲ್ಲಿ ರಾಕಿ ಬಾಯ್ ಕಥೆಯನ್ನು ಹೇಳಲು ಬಂದಿದ್ದ ಅನಂತ್ ನಾಗ್ ಕೂಡ ಮೊದಲ ಭಾಗಕ್ಕಾಗಿ 50 ಲಕ್ಷ ಪಡೆದಿದ್ದರು ಎಂಬ ಸುದ್ದಿ ಇದೆ. 'ಕೆಜಿಎಫ್ 2' ಚಿತ್ರಕ್ಕಾಗಿ ಸ್ಟಾರ್ ನಟ ನಟಿಯರು ಪಡೆದಿರುವ ಸಂಭಾವನೆ ವಿಚಾರ ಕೇಳಿ ಹಲವರು ಇದೀಗ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

  ಚಿತ್ರ ರಿಲೀಸ್‌ಗೂ ಮೊದಲೇ ಪ್ರಮೋಷನ್

  ಚಿತ್ರ ರಿಲೀಸ್‌ಗೂ ಮೊದಲೇ ಪ್ರಮೋಷನ್

  ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್‌ಗೂ ಮೊದಲೇ ಚಿತ್ರದ ಪ್ರಮೋಷನ್ ದೊಡ್ಡ ಮಟ್ಟದಲ್ಲಿ ಮಾಡಲು ಅಭಿಮಾನಿಗಳು, ಚಿತ್ರತಂಡ ಕಾತುರತೆಯಿಂದ ಕಾಯುತ್ತಿದ್ದಾರೆ. ಇದರ ಅಂಗವಾಗಿಯೇ ಇತ್ತೀಚೆಗೆ ಚಿತ್ರದ ಮೊದಲ ಲಿರಿಕಲ್ ಹಾಡು 'ತೂಫಾನ್' ಅನ್ನು ರಿಲೀಸ್ ಮಾಡಿತ್ತು. ಈ ಹಾಡು ಮಾಡಿದ ದಾಖಲೆ ಅಷ್ಟಿಷ್ಟಲ್ಲ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿ ನಂ 1 ಆಗಿತ್ತು. ಇದೀಗ ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿಕೊಂಡಂತೆ ಇಂದು (ಮಾರ್ಚ್ 27)ಕ್ಕೆ ಕೆಜಿಎಫ್ 2 ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ.

  English summary
  Yash, Sanjay Dutt, Raveena Tandon, and Srinidhi Shetty in main roles. On March 27, the trailer of the film will be released, before that let's take a look at how much the actors of KGF: Chapter 2 have charged for their upcoming film.
  Monday, March 28, 2022, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X