Don't Miss!
- Sports
IPL 2023: ಆರ್ಸಿಬಿ ತಂಡದಲ್ಲಿರುವ ಮೂವರು ದುಬಾರಿ ಆಟಗಾರರು
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- News
ಏಪ್ರಿಲ್ 10-12 ರೊಳಗೆ ವಿಧಾನಸಭಾ ಚುನಾವಣೆ: ಬಿಎಸ್ವೈ ಭವಿಷ್ಯ
- Automobiles
ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ: ಎಂತಹ ಐಷಾರಾಮಿ ಕಾರುಗಳ ಒಡತಿಯರು ಗೋತ್ತಾ?
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದಾಗುತ್ತಿದ್ದಾರೆ ಟಾಲಿವುಡ್-ಬಾಲಿವುಡ್ ಸೂಪರ್ ಸ್ಟಾರ್ಸ್: ಪ್ರಭಾಸ್ ಜೊತೆ ಹೃತಿಕ್ ರೋಷನ್!
ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಶುರುವಾದ ಬಳಿಕ ದಕ್ಷಿಣ ಭಾರತ ಚಿತ್ರರಂಗ, ಬಾಲಿವುಡ್ ಎಂಬ ಪ್ರತ್ಯೇಕತೆ ಅಳಿಸಿ ಹೋಗಿದೆ. ಈಗೇನಿದ್ದರೂ 'ಭಾರತೀಯ ಚಿತ್ರರಂಗ' ಎಂಬ ಏಕಮಂತ್ರ ಚಾಲ್ತಿಯಲ್ಲಿದೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಾಲಿವುಡ್‌ನ ನಟರು, ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣದ ನಟರು ನಟಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸಂಜಯ್ ದತ್, 'ಕೆಜಿಎಫ್ 2' ನಲ್ಲಿ ವಿಲನ್ ಆಗಿ, ಆಲಿಯಾ ಭಟ್ 'RRR' ನಲ್ಲಿ ನಾಯಕಿಯಾಗಿ, ಇಲ್ಲಿನ ರಶ್ಮಿಕಾ ಮಂದಣ್ಣ, ಸಮಂತಾ ಬಾಲಿವುಡ್ ಸಿನಿಮಾಗಳ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಎರಡೂ ಚಿತ್ರರಂಗದ ದೊಡ್ಡ ಸ್ಟಾರ್ ನಟರು ಒಟ್ಟಿಗೆ ಸಮಾನ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿರುವ ಸಿನಿಮಾ ಈವರೆಗೆ ಬಂದಿಲ್ಲ.
ಆದರೆ ಇದೀಗ ಅಂಥಹದ್ದೊಂದು ಸಾಹಸಕ್ಕೆ ಬಾಲಿವುಡ್‌ನ ಸಾಹಸ ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮುಂದಾಗಿದ್ದಾರೆ. ದಕ್ಷಿಣದ ಸ್ಟಾರ್ ನಟ ಹಾಗೂ ಬಾಲಿವುಡ್ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ನೀಲಿ ನಕ್ಷೆ ತಯಾರಿಸಿದ್ದಾರೆ.

ಒಂದಾಗಲಿದ್ದಾರೆ ಹೃತಿಕ್ ರೋಷನ್-ಪ್ರಭಾಸ್
'ವಾರ್', 'ಪಠಾಣ್', 'ಬ್ಯಾಂಗ್ ಬ್ಯಾಂಗ್', 'ಬಚ್ನಾ ಏ ಹಸೀನೋ', 'ಅಂಜಾನಾ ಅಂಜಾನಿ', 'ಸಲಾಂ ನಮಸ್ತೆ', 'ತಾ ರಾ ರಂ ಪಂ' ಇನ್ನಿತರೆ ಸಿನಿಮಾಗಳನ್ನು ನಿರ್ದೇಶಿಸಿರುವ ಸಿದ್ಧಾರ್ಥ್ ಆನಂದ್ ಭರ್ಜರಿ ಆಕ್ಷನ್ ಸಿನಿಮಾ ಒಂದಕ್ಕಾಗಿ ಕತೆಯೊಂದನ್ನು ತಯಾರು ಮಾಡಿಟ್ಟುಕೊಂಡಿದ್ದು ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರನ್ನು ಒಟ್ಟಿಗೆ ತೆರೆ ಮೇಲೆ ತರಲು ಸಕಲ ಸಜ್ಜಾಗಿದ್ದಾರೆ.

ದಕ್ಷಿಣದ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ
ವಿಶೇಷವೆಂದರೆ ಈ ಮೆಗಾ ಪ್ರಾಜೆಕ್ಟ್ ಅನ್ನು ದಕ್ಷಿಣದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ಟಾಕ್ ಶೋ ಒಂದರಲ್ಲಿ ತಾವು ಶಾರುಖ್ ಖಾನ್‌ರ ನಿರ್ದೇಶಕರೊಟ್ಟಿಗೆ ಭರ್ಜರಿ ಆಕ್ಷನ್ ಹಿಂದಿ ಸಿನಿಮಾ ಒಂದಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದೀವಿ ಎಂದು ಹೇಳಿದ್ದಾರೆ. ಇದೇ ಸಿನಿಮಾದಲ್ಲಿ ನಟ ಪ್ರಭಾಸ್ ಸಹ ಇರಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ.

ಆಕ್ಷನ್ ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್
ಭಾರಿ ಬಜೆಟ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡುವಲ್ಲಿ ಸಿದ್ಧಾರ್ಥ್ ಎತ್ತಿದ ಕೈ. ಈಗಾಗಲೇ ಹೃತಿಕ್ ರೋಷನ್ ನಟನೆಯ 'ಬ್ಯಾಂಗ್-ಬ್ಯಾಂಗ್', ಹೃತಿಕ್-ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾಗಳನ್ನು ಸಿದ್ಧಾರ್ಥ್ ನಿರ್ದೇಶಿಸಿದ್ದಾರೆ. ಇದೀಗ ಹೃತಿಕ್ ಗಾಗಿಯೇ 'ಫೈಟರ್' ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಪ್ರಭಾಸ್-ಹೃತಿಕ್‌ರ ಹೊಸ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಬಹಳ ಬ್ಯುಸಿಯಾಗಿರುವ ನಟ ಪ್ರಭಾಸ್
ಇನ್ನು ಪ್ರಭಾಸ್ ಅತ್ಯಂತ ಬ್ಯುಸಿ ನಟರಾಗಿದ್ದು, ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದರ ಬೆನ್ನಲ್ಲೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಸಹ ಬಿಡುಗಡೆ ಆಗಲಿದೆ. ಅದರ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಬಿಡುಗಡೆ ಆಗಲಿದೆ. ಇವುಗಳ ಜೊತೆಗೆ ಮಾರುತಿ ನಿರ್ದೇಶನದ ಸಿನಿಮಾ ಒಂದನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಇವೆಲ್ಲ ಸಿನಿಮಾಗಳ ಬಳಿಕವಷ್ಟೆ ಪ್ರಭಾಸ್ ಹಾಗೂ ಹೃತಿಕ್ ರೋಷನ್ ಸಿನಿಮಾ ಸೆಟ್ಟೇರಲಿದೆ.