»   » 'ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!

'ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಸಂಚಲನವನ್ನು ಉಂಟು ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರದ ಮುಹೂರ್ತ ಕೆಲವೇ ದಿನಗಳಲ್ಲಿ.. ಅಂದ್ರೆ ಮುನಿರತ್ನ ರವರ ಹುಟ್ಟುಹಬ್ಬದಂದು (ಜುಲೈ 23) ನೆರವೇರಲಿದೆ.

'ಕುರುಕ್ಷೇತ್ರ' ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರ 50ನೇ ಚಿತ್ರವಾಗಿದ್ದು, ಇದೇ ಸಿನಿಮಾದಲ್ಲಿ ಸ್ಯಾಂಡಲ್ ವುಡ್ಡಿನ ಅಷ್ಟೂ ಸ್ಟಾರ್ ನಟರು ಒಂದಾಗಲಿದ್ದಾರೆ ಎಂಬ ಪುಕಾರು ಹಬ್ಬಿದೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

ಹೇಳಿ ಕೇಳಿ, 'ಕುರುಕ್ಷೇತ್ರ' ಪೌರಾಣಿಕ ಸಿನಿಮಾ. ಅಂದ್ಮೇಲೆ, ಅದ್ಧೂರಿ ಸೆಟ್ ವರ್ಕ್.. ಗ್ರಾಫಿಕ್ಸ್..ಕಾಸ್ಟ್ಯೂಮ್ಸ್ ಎಲ್ಲವೂ ಮುಖ್ಯ. ಹಾಗಾದ್ರೆ, 'ಕುರುಕ್ಷೇತ್ರ' ಚಿತ್ರಕ್ಕೆ ಬಜೆಟ್ ಎಷ್ಟಾಗಬಹುದು.?

ಬಜೆಟ್ ಮಿತಿ ಇಲ್ಲ.!

'ಕುರುಕ್ಷೇತ್ರ' ಚಿತ್ರಕ್ಕೆ ಬಜೆಟ್ ಎಷ್ಟಾಗಬಹುದು.? ಅಂತ ನಿರ್ಮಾಪಕ ಮುನಿರತ್ನ ರವರನ್ನ ಕೇಳಿದರೆ, ''ಕುರುಕ್ಷೇತ್ರ' ಸಿನಿಮಾಗೆ ಬಜೆಟ್ ನ ಲಿಮಿಟ್ ಹಾಕಿಲ್ಲ. ಮೇಕಿಂಗ್ ಮಾಡುವಾಗ ಎಷ್ಟು ಖರ್ಚಾಗುತ್ತೋ ಆಗಲಿ. ಒಂದೊಳ್ಳೆ ಸಿನಿಮಾ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ'' ಎನ್ನುತ್ತಾರೆ.['ಕುರುಕ್ಷೇತ್ರ'ದಲ್ಲಿ 'ಪಾಂಡವರು-ಕೌರವರ' ಪಟ್ಟಿ ಬಹಿರಂಗ ಮಾಡಿದ ಮುನಿರತ್ನ]

'ಕುರುಕ್ಷೇತ್ರ' ಅಂದ್ರೆ ಸುಮ್ನೆನಾ.?!

'ಬಾಹುಬಲಿ' ಚಿತ್ರಕ್ಕೆ 150 ಕೋಟಿಗೂ ಹೆಚ್ಚು ಖರ್ಚು ಮಾಡಲಾಗಿದ್ಯಂತೆ. ಹೀಗಿರುವಾಗ , 'ಕುರುಕ್ಷೇತ್ರ' ಚಿತ್ರಕ್ಕೆ ಎಷ್ಟು ಖರ್ಚಾಗುತ್ತೋ ದೇವರೇ ಬಲ್ಲ. ಯಾಕಂದ್ರೆ, ಪ್ರತಿ ಪಾತ್ರಕ್ಕೂ ಸ್ಟಾರ್ ಹೀರೋ ಬೇಕು ಅಂತ ಫಿಕ್ಸ್ ಆಗಿದ್ದಾರೆ ಮುನಿರತ್ನ. ಒಬ್ಬೊಬ್ಬ ಸ್ಟಾರ್ ಹೀರೋಗೂ ಕಮ್ಮಿ ಅಂದರೂ ಕೋಟಿ ಕೊಡಲೇಬೇಕು ಅಲ್ಲವೇ.!['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಗ್ರಾಫಿಕ್ಸ್ ವರ್ಕ್

ತೆರೆಮೇಲೆ 'ಕುರುಕ್ಷೇತ್ರ' ಯುದ್ಧ ಎಲ್ಲರ ಕಣ್ಣು ಕುಕ್ಕಬೇಕು ಅಂದ್ರೆ, ಸೆಟ್ ವರ್ಕ್ ಮತ್ತು ಗ್ರಾಫಿಕ್ಸ್ ವರ್ಕ್ ತುಂಬಾ ಮುಖ್ಯ. ಇವೆಲ್ಲದಕ್ಕೂ ಹೇರಳವಾಗಿ ದುಡ್ಡು ಸುರಿಯಲು ನಿರ್ಮಾಪಕ ಮುನಿರತ್ನ ಸಜ್ಜಾಗಿದ್ದಾರೆ.

ಅನುಮಾನ ಬೇಡ.!

ಈಗಾಗಲೇ 'ಕಠಾರಿವೀರ ಸುರಸುಂದರಾಂಗಿ' ಎಂಬ ಚಿತ್ರದಲ್ಲಿ ಸ್ವರ್ಗ, ನರಕ, ಇಂದ್ರಲೋಕವನ್ನ ನಿರ್ಮಾಪಕ ಮುನಿರತ್ನ ನಿಮ್ಮೆಲ್ಲರ ಕಣ್ಣ ಮುಂದೆ ತಂದಿದ್ದರು. ಈಗ 'ಕುರುಕ್ಷೇತ್ರ' ಯುದ್ಧವನ್ನೂ ಅಷ್ಟೇ ಶ್ರೀಮಂತವಾಗಿ ತೆರೆಗೆ ತರುವುದರಲ್ಲಿ ಯಾವುದೇ ಅನುಮಾನ ಬೇಡ.

ಒಂದಂತೂ ಸತ್ಯ

ನಾ ಭೂತೋ.. ನಾ ಭವಿಷ್ಯತಿ ಎನ್ನುವ ಹಾಗೆ 'ಕುರುಕ್ಷೇತ್ರ' ಸ್ಯಾಂಡಲ್ ವುಡ್ ನಲ್ಲಿ ಬಿಗೆಸ್ಟ್ ಬಜೆಟ್ ಚಿತ್ರವಾಗಿ ತಯಾರಾಗುವುದು ಮಾತ್ರ ಸತ್ಯ. ಎಷ್ಟೇ ಖರ್ಚಾದರೂ ಪರ್ವಾಗಿಲ್ಲ, 'ಕುರುಕ್ಷೇತ್ರ' ಚೆನ್ನಾಗಿ ಮೂಡಿಬರಬೇಕು ಅಂತ ನಿರ್ಮಾಪಕ ಮುನಿರತ್ನ ಪಣತೊಟ್ಟಿದ್ದಾರೆ.

ಪಾತ್ರಗಳ ಆಯ್ಕೆ ಮಾತ್ರ ಬಾಕಿ

'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿನಯಿಸಲು ನಟ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿದೆ. ಅಂಬರೀಶ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಯಶ್, ಸುದೀಪ್ ಜೊತೆ ನಿರ್ಮಾಪಕ ಮುನಿರತ್ನ ಇನ್ನೂ ಮಾತುಕತೆ ನಡೆಸಬೇಕು.

ಸಿನಿಪ್ರಿಯರಿಗೆ ಕುತೂಹಲ

'ಕುರುಕ್ಷೇತ್ರ' ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. 'ಕುರುಕ್ಷೇತ್ರ' ಚಿತ್ರದ ಬಗ್ಗೆ ಲಭ್ಯವಾಗುವ ಎಲ್ಲ ಅಪ್ ಡೇಟ್ಸ್ ನ ನಿಮಗೆ ತಿಳಿಸುತ್ತಲಿರುತ್ತೇವೆ... 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
'I have placed no limit on Budget' says Producer Muniratna for the movie 'Kurukshetra'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada