For Quick Alerts
  ALLOW NOTIFICATIONS  
  For Daily Alerts

  ತಾರೆ ತ್ರಿಷಾ ಕೃಷ್ಣನ್ ವರಿಸಲಿರುವ ಹುಡುಗ ಇವರೇನಾ?

  By ರವಿಕಿಶೋರ್
  |

  ಮೋಹಕ ತಾರೆ ತ್ರಿಷಾ ಕೃಷ್ಣನ್ ಅಭಿಮಾನಿಗಳಿಗೊಂದು ಶಾಕಿಂಗ್ ಸುದ್ದಿ ಬಂದಿದೆ. ಎರಡು ದಿನಗಳ ಹಿಂದಷ್ಟೇ ತ್ರಿಷಾ ನಿಶ್ಚಿತಾರ್ಥ ನೆರವೇರಿದೆ ಎಂಬ ಸುದ್ದಿ ಇಡೀ ದಕ್ಷಿಣ ಭಾರತದಲ್ಲಿ ಸುನಾಮಿ ತರಹ ಅಪ್ಪಳಿಸಿತ್ತು. ಆದರೆ ತ್ರಿಷಾ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

  ಸುದ್ದಿ ವೈರಲ್ ಆಗುತ್ತಿರುವುದನ್ನು ಕಂಡ ತ್ರಿಷಾ, ಇನ್ನು ಸುಮ್ಮನಿದ್ದರೆ ಆಗಲ್ಲ ಎಂದು ಈ ಸಂಬಂಧ ಟ್ವೀಟಿಸಿದ್ದಾರೆ. "ನನಗೆ ಎಂಗೇಟ್ ಮೆಂಟ್ ತರಹದ್ದೇನು ನಡೆದಿಲ್ಲ. ಆ ರೀತಿಯದ್ದೇನಾದರೂ ನಡೆದರೆ ಮೊದಲು ನನ್ನ ಬಾಯಿಂದಲೇ ನಿಮ್ಮ ಕಿವಿಗೆ ಹಾಕುತ್ತೇನೆ" ಎಂದಿದ್ದಾರೆ. ಆದರೂ ತ್ರಿಷಾ ಮದುವೆ ಬಗೆಗಿನ ವದಂತಿಗಳಿ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ.

  ತ್ರಿಷಾ ಮಾತ್ರ ತಮ್ಮ ಮದುವೆ ಸಂಗತಿಯನ್ನು ಆದಷ್ಟೂ ನಿರಾಕರಿಸುತ್ತಲೇ ಬಂದಿದ್ದಾರೆ. ಇನ್ನು ತ್ರಿಷಾ ಹೆಸರು ಕೇಳಿಬಂದಿರುವುದು ವರುಣ್ ಮನಿಯನ್ ಎಂಬುವವರೊಂದಿಗೆ. ಇವರು ಚಿತ್ರ ನಿರ್ಮಾಪಕ ಹಾಗೂ ಬಿಜಿನೆಸ್ ಮ್ಯಾನ್ ಎಂಬುದಷ್ಟೇ ಸದ್ಯದ ಮಾಹಿತಿ.

  ಇದರ ಜೊತೆಗೆ ಇನ್ನೊಂದು ಸುದ್ದಿಯೂ ಇದೆ. ಅದೇನೆಂದರೆ ಸುದೀಪ್ ನಾಯಕ ನಟನಾಗಿರುವ 'ರನ್ನ' ಚಿತ್ರದಲ್ಲಿ ತ್ರಿಷಾ ಐಟಂ ಡಾನ್ಸ್ ಮಾಡಲಿದ್ದಾರೆ ಎಂಬುದು. ಈ ಸುದ್ದಿಯನ್ನೂ ತ್ರಿಷಾ ತಳ್ಳಿಹಾಕಿದ್ದಾರೆ. ಇದಕ್ಕೂ ಮುನ್ನ ತ್ರಿಷಾ ಹೆಸರು ತೆಲುಗಿನ ಆಜಾನುಬಾಹು ನಟ ರಾಣ ದಗ್ಗುಬಾಟಿ ಜೊತೆಗೆ ಥಳುಕು ಹಾಕಿಕೊಂಡಿತ್ತು.

  ಇಬ್ಬರೂ ಜೊತೆಯಾಗಿ ಹಿತವಾಗಿ ಅಲೆದಾಡಿದ್ದೂ, ಕೆಫೆ ರೆಸ್ಟೋರೆಂಟ್ ಗಳಲ್ಲಿ ಕಾಣಿಸಿಕೊಂಡು ಇನ್ನೇನು ಮದುವೆ ಆಗಿಯೇ ಹೋಯಿತು ಎಂಬಂತಿತ್ತು ಪರಿಸ್ಥಿತಿ. ಈಗ ವರುಣ್ ಮನಿಯನ್ ಜೊತೆ ತ್ರಿಷಾ ಹೆಸರು ಕೇಳಿಬಂದಿರುವುದು ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೇ ಎಂಬ ಮಾತುಗಳಿಗೂ ದಾರಿ ಮಾಡಿಕೊಟ್ಟಿದೆ.

  English summary
  Actress Trisha Krishnan has denied rumours that she secretly got engaged to producer-businessman Varun Manian in a hush-hush ceremony recently. "Ola people. FYI I am NOT engaged! If n when I do, u will hear it from me first", Trisha tweeted late Monday night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X