For Quick Alerts
  ALLOW NOTIFICATIONS  
  For Daily Alerts

  ನಾಯಕಿಯನ್ನೇ ಕಿಡ್ನಾಪ್ ಮಾಡ್ತವ್ನಂತೆ ಹುಚ್ಚ ವೆಂಕಟ!

  By ಹರಾ
  |

  ಯೂಟ್ಯೂಬ್ ಆಗಲಿ, ಫೇಸ್ ಬುಕ್ ಆಗಲಿ...ಇತ್ತೀಚೆಗೆ ಯಾವುದೇ ವಾಹಿನಿಯನ್ನ ಟ್ಯೂನ್ ಮಾಡಿ, ದಿನಕ್ಕೆ ಒಮ್ಮೆಯಾದರೂ 'ಹುಚ್ಚ ವೆಂಕಟ್' ದರ್ಶನ ಆಗಲೇಬೇಕು. ಅಷ್ಟರಮಟ್ಟಿಗೆ 'ಟಿ.ಆರ್.ಪಿ ಪೀಸ್' ಆಗಿದ್ದಾನೆ ಹುಚ್ಚ ವೆಂಕಟ್.

  ಅಷ್ಟಕ್ಕೂ ಹುಚ್ಚ ವೆಂಕಟನ ಸಂಕಟ ಏನು? ಒಂದು ನಮ್ಮ ಲಕ್ಕಿ ಸ್ಟಾರ್ ರಮ್ಯಾ ಮೇಡಂ ಆತನನ್ನ ಮದುವೆಯಾಗ್ಬೇಕು. ಇನ್ನೊಂದು ಆತನ ಚಿತ್ರಗಳನ್ನ ಕನ್ನಡ ಪ್ರೇಕ್ಷಕರು ಮುಗಿ ಬಿದ್ದು ನೋಡಬೇಕು. ಎರಡೂ 'ಗಗನ ಕುಸುಮ' ಅನ್ನೋದು ಹುಚ್ಚ ವೆಂಕಟನಿಗೂ ಗೊತ್ತು. [ಫೇಸ್ ಬುಕ್ ನಲ್ಲಿ ''ಹುಚ್ಚು'' ವೆಂಕಟನಿಗೆ ಮಹಾ ಮಂಗಳಾರತಿ]

  ಅದಕ್ಕೆ ಸ್ಯಾಟೆಲೈಟು, ಇಲ್ಲಾಂದ್ರೆ ಯೂಟ್ಯೂಬ್ ನಲ್ಲಿ ಸಿನಿಮಾ ರಿಲೀಸ್ ಮಾಡ್ತೀನಿ ಅಂತ ಮೊನ್ನೆಯಷ್ಟೇ ಬೊಬ್ಬೆ ಹೊಡೆದುಕೊಂಡಿದ್ದಾನೆ ಹುಚ್ಚ ವೆಂಕಟ್. ಸಿನಿಮಾ ವಿಷಯ ಬಿಡಿ. ರಮ್ಯಾ ಮ್ಯಾಟರ್ ಗೆ ಬನ್ನಿ. ರಮ್ಯಾ ಸಿಗ್ಲಿಲ್ಲ ಅಂದ್ರೆ ಹುಚ್ಚ ವೆಂಕಟ್ ಏನು ಮಾಡೋಕೆ ಸಾಧ್ಯ?

  ರಮ್ಯಾ ಮೇಡಂ ಅವರ ಫ್ಯಾನ್ ಗಳ ಕೈಗೇ ಸಿಗುತ್ತಿಲ್ಲ. ಕುಟುಂಬದವರ ಫೋನ್ ಕಾಲ್ ಗಳನ್ನೇ ಪಿಕ್ ಮಾಡುತ್ತಿಲ್ಲ. ಇನ್ನು ಹುಚ್ಚ ವೆಂಕಟ್ ನನ್ನ ತಿರುಗಿ ನೋಡೋಕೆ ಸಾಧ್ಯಾನಾ..? ಅದನ್ನ ಊಹಿಸಿಕೊಳ್ಳುವುದಕ್ಕೂ ಚಾನ್ಸ್ ಇಲ್ಲ. ಈ ವಾಸ್ತವ ಹುಚ್ಚ ವೆಂಕಟನಿಗೂ ಮನದಟ್ಟಾಗಿದೆ.

  ಅದಕ್ಕೆ ಆಗಲೇ, ತನ್ನ ಹೀರೋಯಿನ್ ಗೆ ಹುಚ್ಚ ವೆಂಕಟ್ ಆವಾಜ್ ಹಾಕಿದ್ದಾನೆ. ''ರಮ್ಯಾ ಸಿಗ್ಲಿಲ್ಲ ಅಂದ್ರೆ, ನಿನ್ನನ್ನೇ ಎತ್ತಾಕ್ಕೊಂಡು ಹೋಗ್ತೀನಿ'' ಅಂತ 'ಹುಚ್ಚ ವೆಂಕಟ್' ನಾಯಕಿ ಕವಿತಾಗೆ ಶೂಟಿಂಗ್ ಟೈಮ್ ನಲ್ಲಿ ಕಿಡ್ನ್ಯಾಪ್ ಮಾಡುವ ಬೆದರಿಕೆ ಹಾಕಿದ್ದನಂತೆ. [ಜೀ ಕನ್ನಡದಲ್ಲಿ 'ವೆಂಕಟ'ನ ಹುಚ್ಚಾವತಾರ]

  ಸಿನಿಮಾ ಮುಗಿದ್ರೆ ಸಾಕು ಅಂತ ಜೀವವನ್ನ ಕೈಯಲ್ಲಿಟ್ಟುಕೊಂಡು ಚಿತ್ರೀಕರಣ ಕಂಪ್ಲೀಟ್ ಮಾಡಿದ ಕವಿತಾಗೆ ಈಗ 'ಹುಚ್ಚ ವೆಂಕಟ'ನ ದಿನಕ್ಕೊಂದು ಅವತಾರ, ಪ್ರತಾಪಗಳನ್ನ ಟಿವಿಯಲ್ಲಿ ನೋಡಿ ಬೆಚ್ಚಿ ಬೀಳ್ತಿದ್ದಾರಂತೆ. ಯಾಕಾದ್ರೂ, ಇವರ ಸಿನಿಮಾನ ಒಪ್ಪಿಕೊಂಡೆ ಅಂತ ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ. [ವೆಂಕಟನ 'ಹುಚ್ಚಾ'ಟಕ್ಕೆ ದಿಗಿಲು ಬಿದ್ದ ಹರ್ಷಿಕಾ-ರಿಷಿಕಾ]

  ಈ ವಿಷಯ ತಿಳಿದವರು ''ಪಾಪ...ಕವಿತಾ'' ಅಂತ ಹೇಳ್ತಿದ್ದಾರೆ ಹೊರತು ಯಾರೂ ಸಹಾಯಕ್ಕೆ ಹೋಗುತ್ತಿಲ್ಲ. ಮೊದಲೇ ''ಹುಚ್ಚ'' ವೆಂಕಟ್...ಸಹವಾಸ ಯಾಕೆ ಅಂತ.

  English summary
  Huccha Venkat's mad act has become sensation all over Karnataka. According to Gandhinagar sources, Huccha Venkat had threatened his heroine Kavitha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X