For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ: ಎಲ್ಲೆಲ್ಲೂ ಈ ಫೋಟೋದೇ ಸುದ್ದಿ!

  By Sony
  |

  ಕನ್ನಡ ಚಿತ್ರರಂಗದ 'ಬಾಕ್ಸಾಫೀಸ್ ಸುಲ್ತಾನ' ಅಂತಲೇ ಖ್ಯಾತಿ ಗಳಿಸಿರುವ ನಟ ದರ್ಶನ್ ಅವರು ಬರೀ ಸಿನಿಮಾ ವಿಚಾರವಾಗಿ ಮಾತ್ರವಲ್ಲದೇ, ತಮ್ಮ ಖಾಸಗಿ ವಿಚಾರದ ಮೂಲಕ ಕೂಡ ಭಾರಿ ಸುದ್ದಿ ಮಾಡಿದವರು.

  ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಗಲಾಟೆ ಮಾಡಿಕೊಂಡ ವಿಚಾರ ಕೆಲವು ಸಮಯಗಳ ಹಿಂದೆ ಭಯಂಕರ ದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿತ್ತು. ಒಂದು ಬಾರಿ ಅಲ್ಲ ಎರಡು ಬಾರಿ ದರ್ಶನ್ ಅವರು ಪತ್ನಿಯ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಎಲ್ಲಾ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹೈಲೈಟ್ ಆಗಿದ್ದರು.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಹಬ್ಬಿರುವ ಗಾಸಿಪ್ ನಿಜವೇ?]

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ಈ ಹಿಂದೆ ಬೇರೆ-ಬೇರೆಯಾಗಿ ವಾಸವಾಗಿದ್ದರು. ಈ ನಡುವೆ ಒಂದ್ಸಾರಿ ದರ್ಶನ್ ಅವರು ಪತ್ನಿ ಮತ್ತು ಮಗ ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಹೋಗಿ ಗಲಾಟೆ ಮಾಡಿ ಬಂದಿದ್ದರು. ಇದಕ್ಕೆ ಪ್ರತಿಯಾಗಿ ವಿಜಯಲಕ್ಷ್ಮಿ ಗಂಡನ ವಿರುದ್ಧ ದೂರು ಕೂಡ ನೀಡಿದ್ದರು.[ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

  ಇದೆಲ್ಲಾ ಇತ್ಯರ್ಥ ಆದ ಮೇಲೆ ದರ್ಶನ್ ಮತ್ತು ವಿಜಯಲಕ್ಷ್ಮಿ ಕಥೆ ಏನಾಯ್ತು ಅನ್ನೋ ಗೋಜಿಗೆ ಯಾರು ಹೋಗಲಿಲ್ಲ. ಆದ್ರೆ ಇದೀಗ ಪತಿ-ಪತ್ನಿ ಇಬ್ಬರು ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿ ಬಳಗದಲ್ಲಿ ಸಂಚಲನ ಸೃಷ್ಟಿಸಿದೆ. ಮುಂದೆ ಓದಿ...

  ಫೋಟೋ ನೋಡಿ ಅಭಿಮಾನಿಗಳಲ್ಲಿ ಪುಳಕ

  ಫೋಟೋ ನೋಡಿ ಅಭಿಮಾನಿಗಳಲ್ಲಿ ಪುಳಕ

  ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಫೋಟೋ ಒಂದರಲ್ಲಿ ನಟ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮುದ್ದು ಮಗ ವಿನೀಶ್ ಜೊತೆ ನಿಂತಿದ್ದಾರೆ. ಈ ಫೋಟೋ ಇದೀಗ ಸದ್ಯಕ್ಕೆ ಅಭಿಮಾನಿ ಬಳಗದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ನೋಡಿ ಇದೇ ಫೋಟೋ.['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

  ಎಲ್ಲೆಲ್ಲೂ ಫೋಟೋದೇ ಕಾರುಬಾರು

  ಎಲ್ಲೆಲ್ಲೂ ಫೋಟೋದೇ ಕಾರುಬಾರು

  ಸದ್ಯಕ್ಕೆ ಎಲ್ಲಿ ನೋಡಿದರೂ ಆ ಫೋಟೋದೇ ಕಾರುಬಾರು. ಯಾರದೇ ವ್ಯಾಟ್ಯಾಪ್, ಫೇಸ್ ಬುಕ್ ನೋಡಿ ಅಲ್ಲಿ ದರ್ಶನ್ ಫ್ಯಾಮಿಲಿ ಫೋಟೋ ಓಡಾಡುತ್ತಿದೆ. ಈ ಫೋಟೋ ನೋಡುತ್ತಿದ್ದರೆ, ದರ್ಶನ್ ಗೆ ತಮ್ಮ ತಪ್ಪಿನ ಅರಿವಾಗಿ ಮತ್ತೆ ಪತ್ನಿ ಜೊತೆ ಸುಖ ಸಂಸಾರ ನಡೆಸಲು ಸಜ್ಜಾದ್ರಾ ಅಂತ್ಹೆನಿಸುತ್ತೆ.[ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

  ಒಟ್ಟಿಗೆ ಇದ್ದಾರಾ?

  ಒಟ್ಟಿಗೆ ಇದ್ದಾರಾ?

  ಸದ್ಯಕ್ಕೆ ಈ ಫೋಟೋ ನೋಡಿದ ಮೇಲೆ ಎಲ್ಲರೂ ದರ್ಶನ್ ಸಂಸಾರದ ಬಗ್ಗೆ ಭಾರಿ ಚರ್ಚೆ ಮಾಡುತ್ತಿದ್ದಾರೆ. ದಂಪತಿ ಎಲ್ಲಾ ಕಹಿ ಘಟನೆಗಳನ್ನು ಮರೆತು ಮತ್ತೆ ಒಂದಾಗಿ ಸಂಸಾರ ಸಾಗಿಸುತ್ತಿದ್ದಾರಾ?. ಒಂದು ವೇಳೆ ಹಾಗಾದಲ್ಲಿ ಎಲ್ಲರಿಗೂ ಖುಷಿ. ಅಭಿಮಾನಿಗಳಿಗಂತೂ ಡಬಲ್ ಖುಷಿ.

  ಎಲ್ಲೂ ಖಚಿತ ಮಾಹಿತಿ ಇಲ್ಲ

  ಎಲ್ಲೂ ಖಚಿತ ಮಾಹಿತಿ ಇಲ್ಲ

  ಆದ್ರೆ ಇವರಿಬ್ಬರು ಒಟ್ಟಿಗೆ ಇದ್ದಾರಾ?, ಒಂದೇ ಮನೆಯಲ್ಲಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದಾರಾ?, ಅನ್ನೋ ಎಲ್ಲಾ ಪ್ರಶ್ನೆಗೆ ಸದ್ಯಕ್ಕೆ ಯಾವುದೇ ಅಧೀಕೃತ ಉತ್ತರ ಬಂದಿಲ್ಲ. ಆದ್ರೆ ವೈರಲ್ ಆಗಿರೋ ಫೋಟೋ ಮಾತ್ರ ನಕಲಿ ಅಲ್ಲ ಅಸಲಿ.

  'ಚಕ್ರವರ್ತಿ' ಗೆಟಪ್ ನಲ್ಲಿ ದರ್ಶನ್

  'ಚಕ್ರವರ್ತಿ' ಗೆಟಪ್ ನಲ್ಲಿ ದರ್ಶನ್

  ದಂಪತಿ ತಮ್ಮ ಮಗನೊಂದಿಗೆ ಒಟ್ಟಾಗಿ ತೆಗೆಸಿಕೊಂಡಿರೋ ಫೋಟೋ ಮಾತ್ರ ಅಸಲಿ ಅನ್ನೋದಕ್ಕೆ ಮುಖ್ಯ ಸಾಕ್ಷಿ ಅದು ದರ್ಶನ್ ಅವರ ಹೊಸ ಗೆಟಪ್. ದರ್ಶನ್ ತಮ್ಮ 'ಚಕ್ರವರ್ತಿ' ಚಿತ್ರಕ್ಕೆ ತಮ್ಮ ಗೆಟಪ್ ಚೇಂಜ್ ಮಾಡಿಕೊಂಡಿದ್ದರು. ತಲೆಗೆ ಕಲರಿಂಗ್ ಮಾಡಿ ಕೆಂಚು ಕಲರ್ ಮಾಡಿಕೊಂಡಿರುವ ಕೂದಲಿನಲ್ಲಿಯೇ ದರ್ಶನ್ ಅವರ ಫೋಟೋ ಇದೆ. ಆದ್ದರಿಂದ ಇದು ಹಳೇ ಫೋಟೋ ಅಂತ ಮೂಗು ಮುರಿಯೋ ಪ್ರಮೆಯವೇ ಇಲ್ಲ.

  'ಚಕ್ರವರ್ತಿ' ದರ್ಶನ್ ಮನೆ ಉರುಳುತ್ತಾ?

  'ಚಕ್ರವರ್ತಿ' ದರ್ಶನ್ ಮನೆ ಉರುಳುತ್ತಾ?

  ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ, ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ಪ್ರದೇಶದಲ್ಲಿ ದರ್ಶನ್ ಅವರ ಮನೆಯಿದ್ದು, ಅದನ್ನು ತೆರವುಗೊಳಿಸಲು ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಆದರೆ ಇದನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಇದೀಗ ಒತ್ತುವರಿ ಜಾಗದಲ್ಲಿ ಇರುವ ಮನೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೆಸರಲ್ಲಿದೆ ಅನ್ನೋದು ವಿಶೇಷ.[ಒತ್ತುವರಿ ತೆರವು ಪ್ರಶ್ನಿಸಿ ನಟ ದರ್ಶನ್ ರಿಟ್ ಅರ್ಜಿ]

  ನೋಟೀಸ್ ಗೆ ಉತ್ತರಿಸಿದ ವಿಜಯಲಕ್ಷ್ಮಿ

  ನೋಟೀಸ್ ಗೆ ಉತ್ತರಿಸಿದ ವಿಜಯಲಕ್ಷ್ಮಿ

  ಮನೆ ಒತ್ತುವರಿ ವಿಚಾರದ ಬಗ್ಗೆ ಸರ್ಕಾರ ಕಳುಹಿಸಿ ನೋಟೀಸ್ ಗೆ ಕೂಡ ವಿಜಯಲಕ್ಷ್ಮಿ ಅವರು ಉತ್ತರ ನೀಡಿದ್ದಾರಂತೆ. ಯಾಕೆಂದರೆ ಆ ಸಮಯದಲ್ಲಿ ದರ್ಶನ್ ಅವರು 'ಚಕ್ರವರ್ತಿ' ಚಿತ್ರದ ಶೂಟಿಂಗ್ ಗಾಗಿ ಅಂತ ಮಲೇಷ್ಯಾಕ್ಕೆ ಹಾರಿದ್ದರು. ಆವಾಗ ಎಲ್ಲಾ ಕರ್ತವ್ಯವನ್ನು ಖುದ್ದು ವಿಜಯಲಕ್ಷ್ಮಿ ಅವರೇ ನಿರ್ವಹಿಸಿದ್ದಾರೆ ಎನ್ನುತ್ತಿವೆ ಹತ್ತಿರದ ಮೂಲಗಳು.

  English summary
  In Pic: Kannada Actor Darshan with his wife vijayalakshmi and son Vineesh together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X