»   » ಚಿತ್ರಗಳು: ನಟಿ ನಯನತಾರಾ ನ್ಯೂಯಾರ್ಕ್ ಗೆ ಹಾರಿದ ಗುಟ್ಟು ರಟ್ಟು.!

ಚಿತ್ರಗಳು: ನಟಿ ನಯನತಾರಾ ನ್ಯೂಯಾರ್ಕ್ ಗೆ ಹಾರಿದ ಗುಟ್ಟು ರಟ್ಟು.!

Posted By:
Subscribe to Filmibeat Kannada

ನಟ, ನಿರ್ದೇಶಕ ಪ್ರಭುದೇವ ಜೊತೆ ಬ್ರೇಕಪ್ ಆದ್ಮೇಲೆ ನಟಿ ನಯನತಾರಾ ಸಿನಿಮಾಗಳಲ್ಲಿಯೇ ಬಿಜಿಯಾದರು. 'ರಾಜಾ ರಾಣಿ', 'ಆರಂಭಂ', 'ಅನಾಮಿಕ', 'ಮಾಯಾ' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಯನತಾರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ವೈಯುಕ್ತಿಕ ವಿಚಾರಕ್ಕೆ.!

ನಟಿ ನಯನತಾರಾಗೆ ಮತ್ತೆ ಪ್ರೇಮ ಜ್ವರ ಶುರು ಆಗಿದೆ ಎಂಬ ಬಿಸಿ ಬಿಸಿ ಸುದ್ದಿ ಕಾಲಿವುಡ್ ನಿಂದ ಬಂದಿದೆ. ಅಷ್ಟಕ್ಕೂ, ನಟಿ ನಯನತಾರಾ ಇದೀಗ ಲವ್ವಲ್ಲಿ ಬಿದ್ದಿರುವುದು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಯಂತೆ. ಇಬ್ಬರ 'ಲವ್' ಸ್ಟೋರಿಗೆ ಈಗ ರೆಕ್ಕೆ ಪುಕ್ಕ ಹುಟ್ಟಿಕೊಳ್ಳಲು ಕಾರಣ ಈ ಫೋಟೋಗಳು....

ನ್ಯೂಯಾರ್ಕ್ ನಲ್ಲಿ ಬಾಯ್ ಫ್ರೆಂಡ್ ಜೊತೆ ನಯನತಾರಾ.?

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ನ್ಯೂಯಾರ್ಕ್ ಗೆ ಹಾರಿದ್ದರು. ಅಲ್ಲಿ ಇಬ್ಬರೂ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ಬಿಟ್ಟಿದೆ.

ವಿಘ್ನೇಶ್ ಶಿವನ್ ಬರ್ತಡೇ

ಸೆಪ್ಟೆಂಬರ್ 18 ರಂದು ವಿಘ್ನೇಶ್ ಶಿವನ್ ರವರ ಹುಟ್ಟುಹಬ್ಬ. ವಿಘ್ನೇಶ್ ಶಿವನ್ ಬರ್ತಡೇ ಸೆಲೆಬ್ರೇಟ್ ಮಾಡಲು ನಯನತಾರಾ ಕೂಡ ನ್ಯೂಯಾರ್ಕ್ ಗೆ ಫ್ಲೈಟ್ ಹತ್ತಿದ್ದರು.

ಜಾಲಿ ಟ್ರಿಪ್

ನ್ಯೂಯಾರ್ಕ್ ನಲ್ಲಿ... ಸುಂದರ ಪರಿಸರದಲ್ಲಿ ಬರ್ತಡೇ ಸೆಲೆಬ್ರೇಷನ್ ಜೊತೆಗೆ ಜಾಲಿ ಟ್ರಿಪ್ ಕೂಡ ಮುಗಿಸಿ ಬಂದಿದ್ದಾರೆ ಈ ಜೋಡಿ.

'ಪ್ರೇಮ' ಪಕ್ಷಿಗಳು

ಅಷ್ಟಕ್ಕೂ, ಈ ಫೋಟೋಗಳೆಲ್ಲವೂ ಹೊರಬಿದ್ದಿರುವುದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಟ್ವಿಟ್ಟರ್ ಅಕೌಂಟ್ ನಿಂದಲೇ. ತಾವು ಪ್ರೀತಿಯಲ್ಲಿರುವುದನ್ನ ಬಹಿರಂಗವಾಗಿ ಈ ಜೋಡಿ ಹೇಳಿಕೊಳ್ಳದೇ ಇದ್ದರೂ, ಹೀಗೆ ಎಲ್ಲೆಡೆ ಒಟ್ಟಿಗೆ ಓಡಾಡುತ್ತಿರುವುದನ್ನ ನೋಡಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸು ಗುಸು ಗಾಢವಾಗಿ ಹಬ್ಬಿದೆ.

English summary
Nayantara flies to New York to celebrate Vignesh Shivan Birthday. Check out the pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada