For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರೇಮ ಬಣ್ಣ ಹಚ್ತಾರಾ? ಶಿವಣ್ಣ ಜೊತೆ ಮತ್ತೆ ಒಂದಾಗ್ತಾರಾ?

  By Harshitha
  |

  ಕೆಲವೊಂದು ಜೋಡಿಗಳೇ ಹಾಗೆ, ತೆರೆ ಮೇಲೆ ಮೇಡ್ ಫಾರ್ ಈಚ್ ಅದರ್ ತರಹ ಕಾಣಿಸ್ತಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರೇಮ ಜೋಡಿಯನ್ನ ಆನ್ ಸ್ಕ್ರೀನ್ ನಲ್ಲಿ ನೋಡಿದವರು ಕೂಡ ಹೇಳೋದು ಇದೇ ಮಾತು.

  'ಸವ್ಯಸಾಚಿ', ಬ್ಲಾಕ್ ಬಸ್ಟರ್ ಸಿನಿಮಾ 'ಓಂ' ಮತ್ತು 'ನಮ್ಮೂರ ಮಂದಾರ ಹೂವೇ' ಚಿತ್ರಗಳಲ್ಲಿ ಒಂದಾಗಿ ಕಾಣಿಸಿಕೊಂಡಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಟಿ ಪ್ರೇಮ ಈಗ ದಶಕಗಳ ನಂತರ ಮತ್ತೆ ತೆರೆಮೇಲೆ ಒಂದಾಗ್ತಿದ್ದಾರಾ?

  ಈ ಡೌಟ್ ಬರುವುದಕ್ಕೆ ಕಾರಣ ನಿನ್ನೆ (ಅಕ್ಟೋಬರ್ 16) ನಡೆದ 'ಶ್ರೀಕಂಠ' ಮುಹೂರ್ತ ಸಮಾರಂಭ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ 'ಶ್ರೀಕಂಠ' ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮುಹೂರ್ತ ಸಮಾರಂಭಕ್ಕೆ ನಟಿ ಪ್ರೇಮ ಆಗಮಿಸಿ, ಕ್ಯಾಮರಾ ಕಣ್ಣುಗಳಿಗೆ ಬಿದ್ದರು. ಅದು ಬಹಳ ದಿನಗಳ ನಂತರ.! [ಶಿವಣ್ಣನ 'ಶ್ರೀಕಂಠ' ಚಿತ್ರಕ್ಕೆ ಅದ್ದೂರಿ ಮುಹೂರ್ತ ]

  ಇತ್ತೀಚೆಗೆ ನಡೆದ ಫೋಟೋಶೂಟ್ ಒಂದರಲ್ಲಿ ಮಿಂಚಿದ್ದು ಬಿಟ್ಟರೆ, ನಟಿ ಪ್ರೇಮ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಸ್ಯಾಂಡಲ್ ವುಡ್ ವತಿಯಿಂದ ಯಾವುದೇ ಕಾರ್ಯಕ್ರಮ ನಡೆದರೂ, ಪ್ರೇಮ ಹಾಜರಾಗುತ್ತಿರಲಿಲ್ಲ. ಅಂಥದ್ರಲ್ಲಿ ನಟಿ ಪ್ರೇಮ 'ಶ್ರೀಕಂಠ' ಮುಹೂರ್ತಕ್ಕೆ ಬಂದಿದ್ದಾರೆ ಅಂದ್ರೆ, ಚಿತ್ರದಲ್ಲಿ ಅವರು ಆಕ್ಟ್ ಮಾಡ್ತಿದ್ದಾರಾ ಅಂತ ಕೆಲವರು ತಲೆಗೆ ಹುಳಬಿಟ್ಟುಕೊಂಡಿದ್ದಾರೆ.

  ನಿರ್ದೇಶಕ ಮಂಜು ಸ್ವರಾಜ್ 'ಶ್ರೀಕಂಠ' ಚಿತ್ರಕ್ಕೆ ಇನ್ನೂ ನಾಯಕಿಯನ್ನು ಸೆಲೆಕ್ಟ್ ಮಾಡಿಲ್ಲ. ಮುಂಚೆ ಅವರು ಹೇಳಿದ ಮಾತಿನ ಪ್ರಕಾರ, ''ಶ್ರಾವಣಿ-ಸುಬ್ರಮಣ್ಯ' ಚಿತ್ರದಲ್ಲಿ ವರ್ಷಗಳ ನಂತ್ರ ಗಣೇಶ್ ಮತ್ತು ಅಮೂಲ್ಯ ಒಂದಾದ ಹಾಗೆ, 'ಶ್ರೀಕಂಠ' ಚಿತ್ರದಲ್ಲಿ ಶಿವಣ್ಣನ ಜೊತೆ ಅವರ ಬೆಸ್ಟ್ ಪೇರ್ ಇರಲಿದ್ದಾರೆ.''

  ಹಾಗಾದ್ರೆ, ಆ ಬೆಸ್ಟ್ ಪೇರ್ ಶಿವಣ್ಣ-ಪ್ರೇಮ ಆಗಿರಲಿದ್ದಾರಾ ಅಂದ್ರೆ ನಿರ್ದೇಶಕರ ಕಡೆಯಿಂದ ಮೌನವೇ ಉತ್ತರ. ಹಾಗ್ನೋಡಿದ್ರೆ, ಮಂಜು ಸ್ವರಾಜ್ ನಿರ್ದೇಶನದ 'ಶಿಶಿರ' ಚಿತ್ರದಲ್ಲಿ ಪ್ರೇಮ ಅಭಿನಯಿಸಿದ್ದರು. ಈಗ ಅದೇ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳುವುದಕ್ಕೆ ಹೊರಟಿರುವ 'ಶ್ರೀಕಂಠ' ಚಿತ್ರದಲ್ಲಿ ಪ್ರೇಮ ಅಭಿನಯಿಸಬಹುದಲ್ವಾ ಅಂತ ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕ್ತಿದ್ದಾರೆ. ['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

  ಆ ಲೆಕ್ಕಾಚಾರವನ್ನು ಉಲ್ಟಾ ಅಗಿಸುವುದು, ಬಿಡುವುದು ಮಂಜು ಸ್ವರಾಜ್ ಕೈಯಲ್ಲೇ ಇದೆ. ನೋಡೋಣ, 'ಶ್ರೀಕಂಠ' ಚಿತ್ರಕ್ಕೆ ಯಾರು ನಾಯಕಿ ಆಗ್ತಾರೆ ಅಂತ.!

  English summary
  Kannada Actress Prema made her presence in Shivarajkumar starrer New Movie 'Srikanta' muhoorth ceremony. Does it mean Prema is sharing screen space with Shivarajkumar in 'Srikanta'?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X