Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಭಾಸ್ ಜೊತೆ ಬಾಲಿವುಡ್ ನಟ ಟೈಗರ್ ಶ್ರಾಫ್ ಫೈಟ್? ಸೂತ್ರಧಾರ ಯಾರು?
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಮುಂದಿನ ಸಿನಿಮಾಗಾಗಿ ಡಾರ್ಲಿಂಗ್ಸ್ ಕಾಯುತ್ತಿದ್ದಾರೆ. 'ಆದಿಪುರುಷ್' ಇಲ್ಲ 'ಸಲಾರ್' ಎರಡರಲ್ಲಿ ಯಾವ ಸಿನಿಮಾ ಮೊದಲು ರಿಲೀಸ್ ಆಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.
'ಬಾಹುಬಲಿ' ಸಿನಿಮಾ ಬಳಿಕ ಪ್ರಭಾಸ್ ನಟಿಸಿದ ಎರಡು ಸಿನಿಮಾ 'ಸಾಹೋ' ಹಾಗೂ 'ರಾಧೆ ಶ್ಯಾಮ್' ಎರಡೂ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಮುಂದಿನ ಎರಡು ಸಿನಿಮಾಗಳ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.
ಸೋಲಿನ ಸುಳಿಗೆ ಸಿಲುಕಿದ ಬೆನ್ನಲ್ಲೇ ಪ್ರಭಾಸ್ ನಾಲ್ಕು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಪ್ರಭಾಸ್ ಜೊತೆ ಬಾಲಿವುಡ್ ನಟ ಟೈಗರ್ ಶ್ರಾಫ್ ಯುದ್ಧಕ್ಕಿಳಿದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಷ್ಟಕ್ಕೂ ಪ್ರಭಾಸ್ ಹಾಗೂ ಟೈಗರ್ ಶ್ರಾಫ್ ನಡುವಿನ ಯುದ್ಧವೇನು? ಅಸಲಿ ಮ್ಯಾಟರ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಪ್ರಭಾಸ್ ಜೊತೆ ಟೈಗರ್ ಶ್ರಾಫ್ ಫೈಟ್
ಪ್ರಭಾಸ್ ಹಾಗೂ ಟೈಗರ್ ಶ್ರಾಫ್ ನಡುವೆ ದೊಡ್ಡ ಯುದ್ಧವೇ ನಡೆಯುವ ಮುನ್ಸೂಚನೆ ಸಿಕ್ಕಿದೆ. ಆದರೆ, ಇದು ರಿಯಲ್ ಲೈಫ್ ಫೈಟ್ ಅಲ್ಲ. ಸಿನಿಮಾದಲ್ಲಿ ಇಬ್ಬರು ನಟರು ಮುಖಾಮುಖಿಯಾಗುತ್ತಾರಂತೆ. 'ವಾರ್' ಸಿನಿಮಾ ನಿರ್ದೇಶಿಸಿರೋ ಸಿದ್ಧಾರ್ಥ್ ಆನಂದ್ ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಅಸಲಿಗೆ ಈ ಸುದ್ದಿ ಅಧಿಕೃತವಾಗಿ ಇನ್ನಷ್ಟೇ ಹೊರಬೀಳಬೇಕಿದೆ. ಸದ್ಯ ಪ್ರಭಾಸ್ ಆಗಲಿ ಅಥವಾ ಟೈಗರ್ ಶ್ರಾಫ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

'ಟೈಗರ್' ಜೊತೆ ಸಿನಿಮಾ ಯಾವಾಗ?
ಪ್ರಭಾಸ್ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿರುವ 'ಪ್ರಾಜೆಕ್ಟ್ ಕೆ' ಶೂಟಿಂಗ್ ಮುಗಿಯಬೇಕಿದೆ. ಇನ್ನೊಂದು ಕಡೆ ಅರ್ಜುನ್ ರೆಡ್ಡಿ ನಿರ್ದೇಶಕನ 'ಸ್ಪಿರಿಟ್' ಕೂಡ ಮುಗಿಯಬೇಕಿದೆ. ಆ ಬಳಿಕವೇ ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಆಗ ಟೈಗರ್ ಶ್ರಾಫ್ ಈ ಪ್ರಾಜೆಕ್ಟ್ ಜೊತೆ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

'ಆದಿಪುರುಷ್' ಸಿನಿಮಾ ಮೇಲೆ ಗಮನ
ಪ್ರಭಾಸ್ 'ಆದಿಪುರುಷ್' ಸಿನಿಮಾ ಮೇಲೆ ಹೆಚ್ಚು ಗಮನ ಹರಿಸಿದ್ದರು. ಆದರೆ, ಟೀಸರ್ ರಿಲೀಸ್ ಆಗುತ್ತಿದ್ದಂತೆ ಟ್ರೋಲ್ ಆಗಿತ್ತು. ಅಲ್ಲಿಂದ ಸಿನಿಮಾ ರಿಲೀಸ್ ಡೇಟ್ ಅನ್ನು ಪೋಸ್ಟ್ ಪೋನ್ ಮಾಡಲಾಗಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಸಿನಿಮಾ ಹೊಸ ರೂಪ ಪಡೆಯುತ್ತಾ? ಪ್ರಭಾಸ್‌ಗೆ 'ಆದಿಪುರುಷ್' ಸಿನಿಮಾ ಸಕ್ಸಸ್ ಕೊಡುತ್ತಾ? ಇಂತಹದ್ದೇ ಒಂದಿಷ್ಟು ಲೆಕ್ಕಾಚಾರಗಳು ಆರಂಭ ಆಗಿವೆ.

'ಪಠಾಣ್' ಸಿನಿಮಾದಲ್ಲಿ ಸಿದ್ಧಾರ್ಥ್ ಬ್ಯುಸಿ
ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸದ್ಯ 'ಪಠಾಣ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಿಂಗ್ ಖಾನ್ ಶಾರುಖ್ ಅಭಿನಯದ ಈ ಸಿನಿಮಾ ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಹೃತಿಕ್ ಹಾಗೂ ಟೈಗರ್ ಶ್ರಾಫ್ ಅಭಿನಯದ 'ವಾರ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಕಾರಣಕ್ಕೆ ಪ್ರಭಾಸ್ ಹಾಗೂ ಟೈಗರ್ ಜೊತೆಯಾದರೆ, ಸಿನಿಮಾ ಹೇಗಿರಬಹುದು ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.