Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ D56 ಚಿತ್ರದ ರಹಸ್ಯ: ತಮಿಳು ಚಿತ್ರದ ರಿಮೇಕ್ ಅಂತೆ!
ನಟ ದರ್ಶನ್ ಹುಟ್ಟುಹಬ್ಬ ಇತ್ತೀಚೆಗೆ ನೆರವೇರಿದೆ. ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅವರ ಸಿನಿಮಾದ ಒಂದಷ್ಟು ಸರ್ಪ್ರೈಸಿಂಗ್ ಎಲಿಮೆಂಟ್‌ಗಳ ರಿಲೀಸ್ ಆಗಿವೆ. ಅದರಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ದರ್ಶನ್ ಅವರ ಮುಂದಿನ ಚಿತ್ರದ ಸುದ್ದಿ. ದರ್ಶನ್ ಅವರು 56ನೇ ಚಿತ್ರ ಅವರ ಹುಟ್ಟುಹಬ್ಬದಂದು ಪ್ರಕಟವಾಗಿದೆ.
D56 ಚಿತ್ರದವನ್ನು ಅನೌನ್ಸ್ ಮಾಡುವುದರ ಜೊತೆಗೆ ಚಿತ್ರದ ಪೊಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಪೋಸ್ಟರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ಪೋಸ್ಟರನ್ನು ಕಥೆಯ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ವಿಭಿನ್ನವಾಗಿ ಮೂಡಿ ಬಂದ ಈ ಚಿತ್ರದ ಪೋಸ್ಟರ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ.
ಅಭಿಮಾನಿಗಳ
ಕ್ಷಮೆ
ಕೇಳಿದ
ದಾಸ
ದರ್ಶನ್!
ಈ ಚಿತ್ರದ ಬಗ್ಗೆ ಈ ಗಾಂಧಿನಗರದಲ್ಲಿ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಈ ಚಿತ್ರ ತಮಿಳಿನ ರಿಮೇಕ್ ಎನ್ನಲಾಗುತ್ತಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರವನ್ನು ದರ್ಶನ್ ಅವರು ಈಗ ಕನ್ನಡದಲ್ಲಿ ರಿಮೇಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ದರೆ ಅ ಚಿತ್ರ ಯಾವುದು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಮುಂದೆ ಓದಿ....

'D56' ತಮಿಳಿನ 'ಅಸುರನ್' ರಿಮೇಕ್?
ದರ್ಶನ್ ಅವರ D56 ಚಿತ್ರ ತಮಿಳಿನ 'ಅಸುರನ್' ಚಿತ್ರದ ರಿಮೇಕ್ ಎನ್ನಲಾಗುತ್ತಿದೆ. 'ಅಸುರನ್' ಸಿನಿಮಾ ತಮಿಳಿನಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ. ಈ ಚಿತ್ರವನ್ನು ಈಗ ದರ್ಶನ್ ಅವರು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು D56 ಚಿತ್ರ ಅಸುರನ್ ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಚಿತ್ರದ ಪೋಸ್ಟರ್‌ನಲ್ಲಿ 'ಹಿಂದೆ ಇರೋರದ್ದು ದಾರಿ, ಮುಂದೆ ಇರೋರದ್ದು ಜವಾಬ್ದಾರಿ' ಎನ್ನುವ ಟ್ಯಾಗ್ ಲೈನ್ ಇದೆ. ಅಸುರನ್ ಚಿತ್ರದಲ್ಲೂ ಕೂಡ ನಟ ಧನುಷ್ ಒಬ್ಬ ತಂದೆಯಾಗಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಹಾಗಾಗಿ ಈ ಪೋಸ್ಟರ್ ಅಸುರನ್ ಚಿತ್ರಕ್ಕೆ ಕನೆಕ್ಟ್ ಆಗುತ್ತಿದೆ.
ಚಾಲೆಂಜಿಂಗ್
ಸ್ಟಾರ್
ದರ್ಶನ್
ಕರ್ನಾಟಕ
ಮೃಗಾಲಯಗಳ
ಪ್ರಾಧಿಕಾರದ
ರಾಯಭಾರಿ

ತೆಲುಗಿಗೂ ರಿಮೇಕ್ ಆದ 'ಅಸುರನ್'!
ಇನ್ನು ಅಸುರನ್ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ವೆಟ್ರಿ ಮಾರನ್ ನಿರ್ದೇಶನದಲ್ಲಿ ಈ ಚಿತ್ರ ಅದ್ಭುತವಾದ ಸಂದೇಶ ಸಾರುವ ಚಿತ್ರವಾಗಿ ಮೂಡಿ ಬಂತು. ಹಾಗಾಗಿ ಈ ಚಿತ್ರವನ್ನು ನಟ ವೆಂಕಟೇಶ್ ತೆಲುಗಿಗೆ ರಿಮೇಕ್ ಮಾಡಿದರು. 'ನಾರಪ್ಪ' ಎನ್ನುವ ಹೆಸರಿನಲ್ಲಿ ಸಿನಿಮಾ ತೆಲುಗಿಗೆ ರಿಮೇಕ್ ಆಗಿ ತೆಲುಗಿನಲ್ಲೂ ಕೂಡ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

D56 ಬಗ್ಗೆ ಅಧಿಕೃತ ಮಾಹಿತಿ ಬರಬೇಕು!
ಇನ್ನು ದರ್ಶನ್ ಅವರ ಈ ಚಿತ್ರ 'ಅಸುರನ್' ಚಿತ್ರದ ರಿಮೇಕ್ ಎನ್ನುವುದು ಗಾಳಿಸುದ್ದಿ ರೂಪದಲ್ಲಿ ಹರಿದಾಡುತ್ತಿದೆ. ಆದರೆ ಇದು ನಿಜವೊ ಅಥವಾ ಕೇವಲ ಗಾಳಿ ಸುದ್ದಿ ಮಾತ್ರವಾ? ಎನ್ನುವುದನ್ನು ಚಿತ್ರತಂಡವೇ ಬಹಿರಂಗ ಪಡಿಸಬೇಕು. ಜೊತೆಗೆ D56 ಚಿತ್ರದ ಕಥೆ ಏನು? ಮತ್ತು ದರ್ಶನ್ ಅವರ ಪಾತ್ರ ಹೇಗೆ ಇರಲಿದೆ ಎನ್ನುವುದನ್ನೂ ಕೂಡ ಚಿತ್ರತಂಡ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆ. ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ.

ಕ್ರಾಂತಿ ಚಿತ್ರದಲ್ಲಿ ನಟ ದರ್ಶನ್ ಬ್ಯುಸಿ!
ನಟ ದರ್ಶನ್ ಸದ್ಯ 'ಕ್ರಾಂತಿ' ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ಚಿತ್ರದ ಶೂಟಿಂಗ್ ವೇಗವಾಗಿ ಸಾಗಿದೆ. ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ 'ಕ್ರಾಂತಿ' ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ನಾಯಕಿ ಅಗಿ ಅಭಿನಯಿಸುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ಶೈಲಜಾ ನಾಗ್ ಬಂಡವಾಳ ಹೂಡಿದ್ದಾರೆ.