»   » 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲು ಒಪ್ಪಿಕೊಂಡಿರುವ ಬಹುನಿರೀಕ್ಷಿತ 'ಕುರುಕ್ಷೇತ್ರ' ಚಿತ್ರಕ್ಕೆ ಕನ್ನಡದ ನಟಿ ಹರಿಪ್ರಿಯಾ ಎಂಟ್ರಿಕೊಟ್ಟಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೀವು ಓದಿರಬಹುದು.

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ನಟಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೇ, ನಟಿ ಹರಿಪ್ರಿಯಾ ರವರು ನಿರ್ವಹಿಸಲು ಒಪ್ಪಿಕೊಂಡಿರುವ ಪಾತ್ರ ಕೂಡ ಚಿತ್ರತಂಡ ಗುಟ್ಟಾಗಿ ಇಟ್ಟಿದೆ.

ಹೀಗಿರುವಾಗಲೇ, 'ಕುರುಕ್ಷೇತ್ರ' ಚಿತ್ರದಲ್ಲಿ ನಟಿ ಹರಿಪ್ರಿಯಾ ಯಾವ ಪಾತ್ರ ನಿರ್ವಹಿಸಬಹುದು ಎನ್ನುವ ಕುರಿತು ಊಹಾಪೋಹ ಶುರು ಆಗಿದೆ. ಮುಂದೆ ಓದಿರಿ...

'ದ್ರೌಪದಿ' ಅಲ್ಲವಂತೆ.!

ಕೆಲ ವರದಿಗಳ ಪ್ರಕಾರ, 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ 'ದ್ರೌಪದಿ' ಅಲ್ಲವಂತೆ.

ದರ್ಶನ್ 'ಕುರುಕ್ಷೇತ್ರ'ಕ್ಕೆ ಬಲಗಾಲಿಟ್ಟು ಬಂದ ಮೊದಲ ನಟಿ!

ಮತ್ತೆ ಯಾವ ಪಾತ್ರ.?

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ನರ್ತಕಿ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಹಾಗಂತ ಕೆಲ ಪತ್ರಿಕೆಗಳು ವರದಿ ಮಾಡಿವೆ.

ಅಧಿಕೃತ ಘೋಷಣೆ ಆಗಿಲ್ಲ.!

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ನಟಿಸುವ ಬಗ್ಗೆ ಹಾಗೂ ಅವರ ಪಾತ್ರದ ಕುರಿತು ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಇಂತಹ ಊಹಾಪೋಹಗಳು ಸರ್ವೇ ಸಾಮಾನ್ಯ.

ಇಲ್ಲಿಯವರೆಗೂ ಪಕ್ಕಾ ಆಗಿರುವವರು...

ದರ್ಶನ್ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್, ಶ್ರೀನಿವಾಸ್ ಮೂರ್ತಿ ಹಾಗೂ ಶ್ರೀನಾಥ್ 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ.

ರೆಜಿನಾ ಹೆಸರೂ ಓಡಾಡುತ್ತಿದೆ.!

ಇನ್ನೂ 'ಕುರುಕ್ಷೇತ್ರ' ಸಿನಿಮಾದ ಪಾತ್ರವೊಂದಕ್ಕೆ ನಟಿ ರೆಜಿನಾ ಕೂಡ ಸೆಲೆಕ್ಟ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕೊನೆಗೂ 'ಕುರುಕ್ಷೇತ್ರ' ಚಿತ್ರಕ್ಕೆ ನಾಯಕಿಯಾದ ಪರಭಾಷಾ ನಟಿ..!

ಇದೇ ತಿಂಗಳು ಮುಹೂರ್ತ

ಇದೇ ತಿಂಗಳ ಅಂತ್ಯದಲ್ಲಿ, ಅಂದ್ರೆ... ನಿರ್ಮಾಪಕ ಮುನಿರತ್ನ ಹುಟ್ಟುಹಬ್ಬದ ಪ್ರಯುಕ್ತ 'ಕುರುಕ್ಷೇತ್ರ' ಚಿತ್ರದ ಮುಹೂರ್ತ ನಡೆಯಲಿದೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಲಿದ್ದಾರೆ.

English summary
Is Kannada Actress Haripriya playing Dancer in 'Kurukshetra'.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada