For Quick Alerts
  ALLOW NOTIFICATIONS  
  For Daily Alerts

  ಇಲಿಯಾನಾ ಮದುವೆ ಶಾಪಿಂಗ್ ? ಗೋವಾ ಬ್ಯೂಟಿ ಕೈಹಿಡಿಯುವ ಹುಡುಗ ಯಾರು?

  |

  ಬಿಂದಾಸ್ ಬ್ಯೂಟಿ ಇಲಿಯಾನಾ ಡಿಕ್ರೂಸ್ ಮದುವೆ ಸುದ್ದಿ ಬಿಟೌನ್ ಗಲ್ಲಿಗಳಲ್ಲಿ ಗುಲ್ಲಾಗಿದೆ. ಇತ್ತೀಚೆಗೆ ಸೆಕ್ಸ್ ಬಗ್ಗೆ ಗೋವಾ ಬ್ಯೂಟಿ ಕಾಮೆಂಟ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇಲಿಯಾನಾ ಆಸ್ಟ್ರೇಲಿಯಾ ಮೂಲದ ಫೋಟೊಗ್ರಾಫರ್ ಆಂಡ್ರೂ ಕಿಬೋನ್ ಜೊತೆ ಡೇಟಿಂಗ್ ನಡೆಸಿದ್ದರು. ಇಬ್ಬರು ಮದುವೆ ಆಗಿದ್ದಾರೆ ಅನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ನಂತರ ಇಬ್ಬರೂ ದೂರಾಗಿದ್ದರು. ಇದೀಗ ಈಕೆಯ ಮದುವೆ ಬಗ್ಗೆ ಚರ್ಚೆ ಶುರುವಾಗಿದೆ.

  ತೆಲುಗು ಸಿನಿಮಾಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಇಲಿಯಾನಾ ಮುಂದೆ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡರು. ಬಿಂದಾಸ್ ರೋಲ್‌ಗಳಲ್ಲಿ ನಟಿಸಿ ಪಡ್ಡೆ ಹೈಕಳ ಹೃದಯಕ್ಕೆ ಲಗ್ಗೆ ಹಾಕಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಇದೀಗ ಮತ್ತೆರಡು ಹಿಂದಿ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಸದಾ ಬಿಕಿನಿ ಫೋಟೊಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಗೋವಾ ಬ್ಯೂಟೊ ಇದೀಗ ಹಸೆಮಣೆ ಏರಲು ಮುಂದಾಗಿದ್ದಾರೆ ಅನ್ನಲಾಗ್ತಿದೆ.

  ನನಗೆ ಸೆಕ್ಸ್‌ ಅಂದರೆ ತುಂಬಾ ಇಷ್ಟ: ರತಿ ವಿಜ್ಞಾನದ ಪಾಠ ಮಾಡಿದ ನಟಿ ಇಲಿಯಾನಾ!ನನಗೆ ಸೆಕ್ಸ್‌ ಅಂದರೆ ತುಂಬಾ ಇಷ್ಟ: ರತಿ ವಿಜ್ಞಾನದ ಪಾಠ ಮಾಡಿದ ನಟಿ ಇಲಿಯಾನಾ!

  ಇಲಿಯಾನಾ ಮದುವೆ ಆಗುತ್ತಿರುವ ಹುಡುಗ ಬೇರೆ ಯಾರು ಅಲ್ಲ, ಬಾಲಿವುಡ್ ನಟಿ ಕತ್ರೀನಾ ಕೈಫ್ ಸಹೋದರ ಅಂತೆ. ಹೌದು ಕತ್ರೀನಾ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚೆಲ್ ಜೊತೆ ಈಕೆ ಡೇಟಿಂಗ್ ಮಾಡ್ತಿದ್ದಾಳೆ ಅನ್ನುವ ಸುದ್ದಿ ಕೇಳಿಬರ್ತಾನೇ ಇತ್ತು. ಸದ್ಯ ಇಬ್ಬರೂ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇವರಿಬ್ಬರ ಮದುವೆ ಬಗ್ಗೆ ಗುಸುಗುಸು ಕೇಳಿಬರಲು ಕಾರಣವಿದೆ. ಇಬ್ಬರೂ ಈಗ ಮದುವೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಂತೆ. ಅದೇ ಕಾರಣಕ್ಕೆ ಇಂತಾದೊಂದು ಚರ್ಚೆ ಶುರುವಾಗಿದೆ. ಆದರೆ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

  'ಕಾಫಿ ವಿತ್ ಕರಣ್ 7' ಶೋನಲ್ಲಿ ಕತ್ರಿನಾ ಕೈಫ್ ಸಿಹಿ ಸುದ್ದಿ: ಬಾಲಿವುಡ್‌ನಲ್ಲೇನಿದು ಟಾಕ್?'ಕಾಫಿ ವಿತ್ ಕರಣ್ 7' ಶೋನಲ್ಲಿ ಕತ್ರಿನಾ ಕೈಫ್ ಸಿಹಿ ಸುದ್ದಿ: ಬಾಲಿವುಡ್‌ನಲ್ಲೇನಿದು ಟಾಕ್?

  ಇತ್ತೀಚೆಗೆ ಕತ್ರಿನಾ ಕೈಫ್ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಶೋನಲ್ಲಿ ಇಲಿಯಾನಾ ಜೊತೆ ನಿಮ್ಮ ಸಹೋದರ ಸೆಬಾಸ್ಟಿಯನ್ ರಿಲೇಶನ್‌ಶಿಪ್‌ನಲ್ಲಿದ್ದಾರಾ ಎಂದು ಕೇಳಿದಾಗ ಕತ್ರೀನಾ ನಿರಾಕರಿಸಿರಲಿಲ್ಲ. ಹಾಗಂತ ಒಪ್ಪಿಕೊಳ್ಳಲು ಇಲ್ಲ. ಇದರಿಂದ ಇಲಿಯಾನಾ ಹಾಗೂ ಸೆಬಾಸ್ಟಿಯನ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಬಗ್ಗೆ ಸುಳಿವು ಸಿಕ್ಕಿತ್ತು. ಕೆಲ ದಿನಗಳ ಹಿಂದೆ ಕತ್ರಿನಾ ಕೈಫ್ ಹಾಗೂ ಪತಿ ವಿಕ್ಕಿ ಕೌಶಲ್ ಮಾಲ್ಡೀವ್ಸ್‌ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಕತ್ರಿನಾ ಹುಟ್ಟುಹಬ್ಬವನ್ನೂ ಆಚರಿಸಲಾಯಿತು. ಕತ್ರಿನಾ ಕುಟುಂಬ ಸದಸ್ಯರ ಜೊತೆಗೆ ಇಲಿಯಾನಾ ಕೂಡ ಭಾಗಿ ಆಗಿದ್ದರು. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಇಲಿಯಾನಾ ಮತ್ತು ಸೆಬಾಸ್ಟಿಯನ್ ಬಾಂದ್ರಾದ ಅಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಇಲಿಯಾನಾ ಮದುವೆ ಸುದ್ದಿ ಕೇಳಿ ಪಡ್ಡೆ ಹುಡುಗರು ಬೇಸರಗೊಂಡಿದ್ದಾರೆ. ಇನ್ನು ಟಾಲಿವುಡ್ ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಕೊಂಡಿದ್ದ ಇಲಿಯಾನಾ 'ಅನ್‌ಫೇರ್ ಅಂಡ್ ಲವ್ಲಿ' ಸಿನಿಮಾ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ಗರ್ಭಪಾತ ಮಾಡಿಸಿಕೊಂಡಿದ್ರಾ ಇಲಿಯಾನಾ; ಈ ಬಗ್ಗೆ ನಟಿ ಹೇಳಿದ್ದೇನು?ಗರ್ಭಪಾತ ಮಾಡಿಸಿಕೊಂಡಿದ್ರಾ ಇಲಿಯಾನಾ; ಈ ಬಗ್ಗೆ ನಟಿ ಹೇಳಿದ್ದೇನು?

  English summary
  Is Ileana D'Cruz getting married soon? Here's what we know. Know More. ಬಿಟೌನ್‌ನಲ್ಲಿ ಇಲಿಯಾನಾ ಡಿಕ್ರೂಸ್ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X