For Quick Alerts
  ALLOW NOTIFICATIONS  
  For Daily Alerts

  ಸೀರೆ ಉಡುವುದು ತಪ್ಪಾ, ಪ್ರಿಯಾಮಣಿ ಗರಂ

  By ರವಿಕಿಶೋರ್
  |

  ಬೆಂಗಳೂರು ಬ್ಯೂಟಿ ಪ್ರಿಯಾಮಣಿ ಗುಡುಗಿದ್ದಾರೆ. ಸೀರೆ ವಿಚಾರದಲ್ಲಿ ನೀರೆ ಗರಂ ಆಗಿದ್ದಾರೆ. ಅಸಭ್ಯವಾಗಿ ಸೀರೆ ಉಟ್ಟಿದ್ದಾರೆ ಎಂದು ತಮ್ಮ ವಿರುದ್ಧ ಕೇಳಿಬಂದ ಆರೋಪಗಳ ವಿರುದ್ಧ ಸಿಡಿದೆದ್ದಿದ್ದಾರೆ. "ನನ್ನ ಉಡುಗೆ ತೊಡುಗೆಯಲ್ಲಿ ಎಲ್ಲಿ ಅಸಭ್ಯತೆ ಕಾಣಿಸಿದೆ" ತೋರಿಸಿ ಎಂದು ಸವಾಲೆಸೆದಿದ್ದಾರೆ.

  "ಚಾಂಡಿ ಚಿತ್ರೀಕರಣದಲ್ಲಿ ನಾನೇನು ಬಿಕಿನಿ ತೊಟ್ಟು ಅಭಿನಯಿಸಿಲ್ಲ. ಮೈತುಂಬ ಸೀರೆ ಉಟ್ಟು ಅಭಿನಯಿಸಿದ್ದೇನೆ. ಸೀರೆ ಉಡುವುದು ತಪ್ಪಾ? 'ಚಾಂಡಿ' ಚಿತ್ರದಲ್ಲಿ ನಾನೆಲ್ಲೂ ಅಸಭ್ಯವಾಗಿ ಕಾಣಿಸಿಕೊಂಡಿಲ್ಲ. ಸುಖಾ ಸುಮ್ಮನೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬಿಟ್ಟಿ ಪ್ರಚಾರ ಪಡೆಯುವುದನ್ನು ಬಿಡಿ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ಬಹಳ ವರ್ಷಗಳಿಂದ ತೆಲುಗು ಚಿತ್ರರಂದಲ್ಲಿ ತೊಡಗಿಕೊಂಡಿದ್ದೇನೆ. ಇದುವರೆಗೂ ಯಾರೂ ತಮ್ಮ ವಿರುದ್ಧ ಈ ರೀತಿ ಆರೋಪ ಮಾಡಿಲ್ಲ. ಈಗ ಇದ್ದಕ್ಕಿದ್ದಂತೆ ನನ್ನ ಮೇಲೆ ಈ ರೀತಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದಿದ್ದಾರೆ. ಕೆಲವೊಂದು ಕಡೆ ಹಾಡುಗಳಲ್ಲಿ ಒಂಚೂರು ಮಸಾಲೆ ಸೇರಿಸಬೇಕಾಗುತ್ತದೆ. ಅದರಲ್ಲೇನು ತಪ್ಪು ಎಂದಿದ್ದಾರೆ.

  ಪ್ರಿಯಾಮಣಿ ಅವರು ಅಸಭ್ಯವಾಗಿ ವಸ್ತ್ರಧಾರಣೆ ಮಾಡಿಕೊಂಡು ಭಾರತೀಯ ಸಂಸ್ಕೃತಿ ಸಂಪ್ರದಾಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಸುಬುದ್ಧಿ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಅವರ ಆರೋಪಕ್ಕೆ ಪ್ರಿಯಾಮಣಿ ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.

  English summary
  I was in a sari for 'Chandi' shooting. If I would have weared a bikini, then his objection was right. Is it offensive to wear a sari?, Priyamani has reacted violently questioning the petitioner on where and did he find her costumes objectionable.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X