For Quick Alerts
  ALLOW NOTIFICATIONS  
  For Daily Alerts

  'ಪವರ್ ಸ್ಟಾರ್' ಅಭಿಮಾನಿಗಳಿಗೆ ಇದೋ ಇಲ್ಲಿದೆ ಬ್ರೇಕಿಂಗ್ ನ್ಯೂಸ್.!

  By Harshitha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ 'ದೊಡ್ಮನೆ ಹುಡುಗ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶಿಸುತ್ತಿರುವ 'ದೊಡ್ಮನೆ ಹುಡುಗ' ಜೊತೆ ಜೊತೆಗೆ ತಮ್ಮ ಸಿಲ್ವರ್ ಜ್ಯುಬಿಲಿ ಸಿನಿಮಾ 'ಚಕ್ರವ್ಯೂಹ' ಶೂಟಿಂಗ್ ನಲ್ಲೂ ಅಪ್ಪು ತೊಡಗಿಸಿಕೊಂಡಿದ್ದಾರೆ.

  ಹೀಗಿರುವಾಗಲೇ, ಗಾಂಧಿನಗರದ ಅಂಗಳದಿಂದ ಒಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಅದು ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಮುಂದಿನ ಚಿತ್ರದ ಬಗ್ಗೆ. [ಶಿವಣ್ಣನ ಮಗಳ ರಿಸೆಪ್ಷನ್ ನಲ್ಲಿ 'ಬಾಹುಬಲಿ' ರಾಜಮೌಳಿ]

  ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್, 'ಬಾಹುಬಲಿ' ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.! ಸ್ಯಾಂಡಲ್ ವುಡ್ ನಿಂದ ಬಂದಿರುವ ಖಾಸ್ ಖಬರ್ ಅಂದ್ರೆ ಇದೆ. ಮುಂದೆ ಓದಿ.....

  ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ನಲ್ಲಿ ಪುನೀತ್ ರಾಜ್ ಕುಮಾರ್

  ಎಸ್.ಎಸ್.ರಾಜಮೌಳಿ ಆಕ್ಷನ್ ಕಟ್ ನಲ್ಲಿ ಪುನೀತ್ ರಾಜ್ ಕುಮಾರ್

  ಗಾಂಧಿನಗರದ ಪಂಡಿತರ ಪ್ರಕಾರ, ಟಾಲಿವುಡ್ ನ ನಿರ್ದೇಶಕ, 'ಬಾಹುಬಲಿ', 'ಮಗಧೀರ' ಖ್ಯಾತಿಯ ಎಸ್.ಎಸ್.ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಲಿದ್ದಾರೆ.

  ಕನ್ನಡಕ್ಕೆ ಬರ್ತಾರಾ ಎಸ್.ಎಸ್.ರಾಜಮೌಳಿ?

  ಕನ್ನಡಕ್ಕೆ ಬರ್ತಾರಾ ಎಸ್.ಎಸ್.ರಾಜಮೌಳಿ?

  ಈಗಾಗಲೇ ಬ್ರೇಕ್ ಆಗಿರುವ ಸುದ್ದಿ ಪ್ರಕಾರ, ತಮ್ಮ ಮುಂದಿನ ಚಿತ್ರಕ್ಕೆ 'ಗರುಡ' ಅಂತ ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ ಎಸ್.ಎಸ್.ರಾಜಮೌಳಿ. ಮೂಲಗಳ ಪ್ರಕಾರ 'ಗರುಡ' ದ್ವಿಭಾಷೆಯಲ್ಲಿ ಏಕಕಾಲಕ್ಕೆ ರೆಡಿಯಾಗಲಿದೆ. ಹಾಗಾದ್ರೆ, 'ಗರುಡ' ಸಿನಿಮಾ ಕನ್ನಡದಲ್ಲಿ ರೆಡಿಯಾಗುವುದು ಪಕ್ಕಾನಾ? ಈ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ.

  ತೆಲುಗಿನಲ್ಲಿ ಪವರ್ ಸ್ಟಾರ್ ಪುನೀತ್ ಮಿಂಚಿಂಗ್.?

  ತೆಲುಗಿನಲ್ಲಿ ಪವರ್ ಸ್ಟಾರ್ ಪುನೀತ್ ಮಿಂಚಿಂಗ್.?

  ಒಂದ್ವೇಳೆ ಎಲ್ಲವೂ ಅಂದುಕೊಂಡಂತೆ ಆದ್ರೆ, ದ್ವಿಭಾಷೆಯಲ್ಲಿ ರೆಡಿಯಾಗುವ 'ಗರುಡ' ಚಿತ್ರದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟಾಲಿವುಡ್ ನಲ್ಲೂ ಧೂಳೆಬ್ಬಿಸಬಹುದು.

  1000 ಕೋಟಿ ಬಜೆಟ್ ನಲ್ಲಿ 'ಗರುಡ'?

  1000 ಕೋಟಿ ಬಜೆಟ್ ನಲ್ಲಿ 'ಗರುಡ'?

  ಕೆಲ ವರದಿಗಳ ಪ್ರಕಾರ 'ಗರುಡ' ಚಿತ್ರ ಬರೋಬ್ಬರಿ 1000 ಕೋಟಿ ರೂಪಾಯಿಯಲ್ಲಿ ರೆಡಿಯಾಗಲಿದೆ. ಆದ್ರೆ, ಇಂತಹ ವರದಿಗಳನ್ನ ಎಸ್.ಎಸ್.ರಾಜಮೌಳಿ ತಳ್ಳಿಹಾಕಿದ್ದಾರೆ.

  ಪುನೀತ್ ಮನೆಗೆ ಭೇಟಿ ನೀಡಿದ್ದ ಎಸ್.ಎಸ್.ರಾಜಮೌಳಿ

  ಪುನೀತ್ ಮನೆಗೆ ಭೇಟಿ ನೀಡಿದ್ದ ಎಸ್.ಎಸ್.ರಾಜಮೌಳಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗಳು ಡಾ.ನಿರುಪಮ ಮದುವೆ ಸಂದರ್ಭದಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಎಸ್.ಎಸ್.ರಾಜಮೌಳಿ, ಪುನೀತ್ ರಾಜ್ ಕುಮಾರ್ ಮನೆಗೆ ತೆರಳಿ, ಕೆಲ ಕಾಲ ಮಾತುಕತೆ ನಡೆಸಿದ್ದರು.

  ರಿಸೆಪ್ಷನ್ ಗೆ ಆಗಮಿಸಿದ ಎಸ್.ಎಸ್.ರಾಜಮೌಳಿ

  ರಿಸೆಪ್ಷನ್ ಗೆ ಆಗಮಿಸಿದ ಎಸ್.ಎಸ್.ರಾಜಮೌಳಿ

  ಮಧ್ಯಾಹ್ನ ಅಪ್ಪು ಮನೆಯಲ್ಲಿದ್ದ ಎಸ್.ಎಸ್.ರಾಜಮೌಳಿ, ಸಂಜೆ ಶಿವಣ್ಣ ಮಗಳ ಆರತಕ್ಷತೆಗೆ ಆಗಮಿಸಿದರು.

  ಇನ್ನು ಅಧಿಕೃತ ಆಗಿಲ್ಲ

  ಇನ್ನು ಅಧಿಕೃತ ಆಗಿಲ್ಲ

  ಮೂಲಗಳ ಪ್ರಕಾರ, ಪುನೀತ್ ರಾಜ್ ಕುಮಾರ್ ಮತ್ತು ಎಸ್.ಎಸ್.ರಾಜಮೌಳಿ ಮಾತುಕತೆ ಹಂತದಲ್ಲಿದ್ದಾರೆ. ಎಲ್ಲವೂ ಇನ್ನು ಫೈನಲ್ ಆಗಬೇಕಿದೆ. ಸದ್ಯ ಎಸ್.ಎಸ್.ರಾಜಮೌಳಿ ಕೂಡ 'ಬಾಹುಬಲಿ-2' ಚಿತ್ರದಲ್ಲಿ ಬಿಜಿಯಿದ್ದಾರೆ. ಅದು ಮುಗಿದ ಬಳಿಕ ಮುಂದಿನ ಚಿತ್ರದ ಮಾತು.

  English summary
  According to the Grapevine, Kannada Actor Puneeth Rajkumar and Tollywood Director SS Rajamouli have teamed up for an upcoming bi-lingual movie titled 'Garuda'. But there is no official confirmation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X