For Quick Alerts
  ALLOW NOTIFICATIONS  
  For Daily Alerts

  ಸಾರೋಗಸಿ ವಿಧಾನದಲ್ಲಿ ಚರಣ್- ಉಪಾಸನಾ ಮಗು ಪಡೆಯುತ್ತಿದ್ದಾರಾ? ಉಪಾಸನಾ ಪೋಸ್ಟ್ ವೈರಲ್!

  By ಫಿಲ್ಮಿಬೀಟ್ ಡೆಸ್ಕ್
  |

  ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ತಮ್ಮ ಮನಗೆ ಹೊಸ ಅತಿಥಿ ಬರುವ ವಿಚಾರವನ್ನು ಘೋಷಿಸಿದ್ದರು. ಚರಣ್- ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಈ ಸುದ್ದಿ ಕೇಳಿ ಖುಷಿಯಾಗಿದ್ದಾರೆ.

  ಮದುವೆಯಾಗಿ 10 ವರ್ಷಗಳ ನಂತರ ಚರಣ್- ಉಪಾಸನಾ ತಂದೆ ತಾಯಿ ಆಗುತ್ತಿರುವ ವಿಚಾರ ಮೆಗಾ ಫ್ಯಾಮಿಲಿಯಲ್ಲಿ ಹಬ್ಬದ ಸಂಭ್ರಮ ಮನೆಮಾಡುವಂತೆ ಮಾಡಿದೆ. ಆದರೆ ಇದೆಲ್ಲದರ ನಡುವೆ ಹೊಸ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚರಣ್- ಉಪಾಸನಾ ಸಾರೋಗಸಿ ವಿಧಾನದ ಮೂಲಕ ಮಗು ಪಡೆಯುತ್ತಾರಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಮ್ಮದೇ ಕೆಲ ಊಹಾಪೋಹದ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.

  "ಮಕ್ಕಳು ಮಾಡಿಕೊಳ್ಳುವುದು ಅಂದ್ರೆ 20 ವರ್ಷಗಳ ಪ್ರಾಜೆಕ್ಟ್": ಉಪಾಸನಾ ಹೇಳಿಕೆ ವೈರಲ್

  ಭಾರತದಲ್ಲಿ ಸಾಕಷ್ಟು ಜನ ಸೆಲೆಬ್ರೆಟಿಗಳು ಸಾರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಇತ್ತೀಚೆಗೆ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಕೂಡ ಇದೇ ರೀತಿ ಅವಳಿ ಮಕ್ಕಳಿಗೆ ಪೋಷಕರಾಗಿದ್ದರು. ಉಪಾಸನಾ ಮೊದಲಿನಿಂದಲೂ ಈ ವಿಧಾನದಲ್ಲಿ ಮಗು ಪಡೆಯಲು ಆಸಕ್ತಿ ತೋರುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆಮೇಲೆ ಅದೆಲ್ಲಾ ಸುಳ್ಳು ಎನ್ನಲಾಗಿತ್ತು.

  ಚಿತ್ರ ವಿಚಿತ್ರ ಲೆಕ್ಕಾಚಾರ

  ಚಿತ್ರ ವಿಚಿತ್ರ ಲೆಕ್ಕಾಚಾರ

  ಚಿರು ಸಿಹಿಸುದ್ದಿಯನ್ನು ಹಂಚಿಕೊಳ್ಳುವ ಒಂದು ದಿನ ಮೊದಲು ಉಪಾಸನಾ ಇಂಡಿಯನ್ ರೇಸಿಂಗ್ ಲೀಗ್ ನೋಡಲು ಹೋಗಿದ್ದರು. ಮತ್ತೊಂದ್ಕಡೆ ಚಿರಂಜೀವಿ 'ವಾಲ್ತೇರು ವೀರಯ್ಯ' ಸಿನಿಮಾ ಸಾಂಗ್‌ ಶೂಟಿಂಗ್‌ಗಾಗಿ ಫ್ಯಾಮಿಲಿ ಸಮೇತ ವಿದೇಶಕ್ಕೆ ಹೋಗಿದ್ದರು. 3 ತಿಂಗಳ ಗರ್ಭಿಣಿ ಹೀಗೆ ಎಲ್ಲೆಲ್ಲೋ ಓಡಾಡುತ್ತಾರಾ? ಅತ್ತೆ ಮಾವ ಸೊಸೆಯನ್ನು ನೋಡಿಕೊಳ್ಳುವುದು ಬಿಟ್ಟು ಫಾರಿನ್‌ಗೆ ಹೋಗ್ತಾರಾ? ಇದನ್ನೆಲ್ಲಾ ನೋಡುತ್ತಿದ್ದರೆ ಅನುಮಾನ ಬರ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ.

  ಸೆಲೆಬ್ರೆಟಿಗಳ ಸರೋಗಸಿ ಪ್ರೀತಿ

  ಸೆಲೆಬ್ರೆಟಿಗಳ ಸರೋಗಸಿ ಪ್ರೀತಿ

  ಕೆಲ ಸೆಲೆಬ್ರೆಟಿಗಳು ಸಹಜವಾಗಿ ಗರ್ಭ ಧರಿಸಿ ಮಕ್ಕಳನ್ನು ಹೆರಲು ಇಷ್ಟಪಡುತ್ತಿದ್ದಾರೆ. ಕಾಜಲ್ ಅಗರ್‌ವಾಲ್, ಆಲಿಯಾ ಭಟ್, ಪ್ರಣಿತಾ ಸೇರಿದಂತೆ ಸಾಕಷ್ಟು ನಟಿಯರು ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆದರೆ ಕೆಲವರು ಮಾತ್ರ ಸರೋಗಸಿ ವಿಧಾನದ ಮೊರೆ ಹೋಗುತ್ತಿದ್ದಾರೆ. ಪ್ರೀತಿ ಜಿಂಟಾ, ಶಿಲ್ಪಾ ಶೆಟ್ಟಿ, ಶಾರೂಕ್ ಖಾನ್, ಕರಣ್ ಜೋಹರ್, ಪ್ರಿಯಾಂಕ ಚೋಪ್ರಾ, ಮಂಚು ಲಕ್ಷ್ಮಿ, ನಯನತಾರ ಸೇರಿದಂತೆ ಕೆಲ ತಾರೆಯರು ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರೆ.

  ತವರು ಮನೆಗೆ ಹೊರಟ ಉಪಾಸನಾ

  ತವರು ಮನೆಗೆ ಹೊರಟ ಉಪಾಸನಾ

  ಇನ್ನು ಮೆಗಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನದ ಬಗ್ಗೆ ಷ್ಟೆಲ್ಲಾ ಚರ್ಚೆ ಆಗುತ್ತಿರುವಾಗ ಉಪಾಸನಾ ತವರು ಮನೆಗೆ ಹೋಗಿದ್ದಾರೆ. ಈ ಬಗ್ಗೆ ಅವರು ಮಾಡಿರುವ ಇನ್‌ಸ್ಟಾ ಪೋಸ್ಟ್ ವೈರಲ್ ಆಗಿದೆ. ತನ್ನ ತಾಯಿ, ಅಜ್ಜಿ ಸೇರಿದಂತೆ ಕುಟುಂಬದ ಮಹಿಳಾ ಸದಸ್ಯರ ಆಶೀರ್ವಾದ ಪಡೆದಿದ್ದಾರೆ. ಮಾತೃತ್ವ ಅನುಭವಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ. ಜೊತೆಗೆ ಅತ್ತೆ(ಚಿರಂಜೀವಿ ಪತ್ನಿ ಸುರೇಖಾ)ಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಾರೋಗಸಿ ವಿಧಾನದಲ್ಲಿ ಮಗು ಪಡೆಯುತ್ತಾರೆ ಎನ್ನುವುದೆಲ್ಲಾ ಸುಳ್ಳು, ಉಪಾಸನಾ ಅವರ ಈ ಪೋಸ್ಟ್‌ನಲ್ಲಿ ಅದು ಅರ್ಥವಾಗುತ್ತೆ ಎಂದು ಹೇಳುತ್ತಿದ್ದಾರೆ.

  ಏನಿದು ಸರೋಗಸಿ ವಿಧಾನ?

  ಏನಿದು ಸರೋಗಸಿ ವಿಧಾನ?

  ಬಾಡಿಗೆ ಗರ್ಭದ ಮೂಲಕ ಮಕ್ಕಳನ್ನು ಪಡೆಯುವ ವಿಧಾನಕ್ಕೆ ಸರೋಗಸಿ ವಿಧಾನ ಎನ್ನುತ್ತಾರೆ. ಅಂದರೆ ಬೇರೆ ಮಹಿಳೆ ಹಾಗೂ ಪುರುಷನಿಗೆ ಸೇರಿದ ಮಗುವನ್ನು ಮತ್ತೊಬ್ಬ ಮಹಿಳೆ ತನ್ನ ಗರ್ಭದಲ್ಲಿ ಹೊತ್ತು ಹೆರುವ ವಿಧಾನ. ಪ್ರಸವದ ನಂತರ ಮಗುವನ್ನು ಹೊತ್ತು ಹೆತ್ತ ಮಹಿಳೆಗೆ ಆ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಂಡಾಣು, ವೀರ್ಯ ಕೊಟ್ಟವರೇ ಆ ಮಗುವಿಗೆ ಪೋಷಕರಾಗುತ್ತಾರೆ. ಸದ್ಯಕ್ಕೆ ಈ ರೀತಿ ಮಗು ಪಡೆಯಲು ಭಾರತದಲ್ಲಿ ಅವಕಾಶ ಇಲ್ಲ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ನಯನತಾರಾ- ವಿಘ್ನೇಶ್ ಸಾರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದು, ದೊಡ್ಡ ವಿವಾದ ಸೃಷ್ಟಿಸುವ ಸುಳಿವು ಸಿಕ್ಕಿತ್ತು. ಆದರೆ ಎಲ್ಲಾ ಕಾನೂನು ನಿಯಮ ಪಾಲಿಸಿ ಅವರು ಮಕ್ಕಳು ಪಡೆದಿರುವುದಾಗಿ ಸಾಬೀತು ಮಾಡಿದ್ದರು.

  English summary
  Is Ram Charan and his wife Upasana will be welcoming their first child through surrogacy?. but Upasana wrote that she's entering motherhood with the blessings of the women in her life. this Post Goes Viral. know more.
  Friday, December 16, 2022, 19:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X