For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಚಾಪ್ಟರ್ 2 ವಿಳಂಬವಾಗಲು ಕಾರಣ ಇದೇನಾ?

  |

  ಕೆಜಿಎಫ್ ಚಾಪ್ಟರ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಯಶ್ ಜೊತೆ ಚಾಪ್ಟರ್ 2ರಲ್ಲಿ ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ಅಂತಹ ಕಲಾವಿದರು ಸೇರಿದ್ದು, ಚಿತ್ರದ ಮೇಲಿದ್ದ ನಿರೀಕ್ಷೆ ಹೆಚ್ಚಾಗಿದೆ.

  ಲಾಕ್‌ಡೌನ್ ಎಲ್ಲಾ ಕಡೆಯೂ ತೆರವಾಗಿದ್ದು, ಚಿತ್ರಮಂದಿರಗಳು ಸಹ ಕಾರ್ಯಾರಂಭ ಮಾಡಿದೆ. ಇದೀಗ, ಕೆಜಿಎಫ್ ರಿಲೀಸ್ ದಿನಾಂಕ ಪ್ರಕಟಿಸುವುದನ್ನು ಚಿತ್ರಪ್ರೇಮಿಗಳು ನಿರೀಕ್ಷೆ ಮಾಡ್ತಿದ್ದಾರೆ. ಆದರೆ, ಬಿಡುಗಡೆ ದಿನಾಂಕ ಘೋಷಣೆ ಮಾಡುವುದಕ್ಕೆ ಸಂಜಯ್ ದತ್ ಪಾತ್ರ ಅಡ್ಡಿಯಾಗುತ್ತಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈ ಕುರಿತು ಬಾಲಿವುಡ್ ವೆಬ್‌ಸೈಟ್‌ 'Koimoi.Com' ವರದಿ ಮಾಡಿದ್ದು, ಕೆಜಿಎಫ್ ವಿಳಂಬವಾಗಲು ಸಂಜಯ್ ದತ್ ಕಾರಣ ಎಂದು ಹೇಳಿದೆ. ಮುಂದೆ ಓದಿ....

  ಕೆಜಿಎಫ್ 2 ಬಗ್ಗೆ ತೆಲುಗು ಡಬ್ಬಿಂಗ್ ಕಲಾವಿದೆ ಬಿಚ್ಚಿಟ್ಟ ಥ್ರಿಲ್ಲಿಂಗ್ ವಿಷಯ ಕೆಜಿಎಫ್ 2 ಬಗ್ಗೆ ತೆಲುಗು ಡಬ್ಬಿಂಗ್ ಕಲಾವಿದೆ ಬಿಚ್ಚಿಟ್ಟ ಥ್ರಿಲ್ಲಿಂಗ್ ವಿಷಯ

  ಅಧೀರನ ಪಾತ್ರಕ್ಕೆ ಡಬ್ ಆಗಿಲ್ಲ

  ಅಧೀರನ ಪಾತ್ರಕ್ಕೆ ಡಬ್ ಆಗಿಲ್ಲ

  ಕೆಜಿಎಫ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ಹಿಂದಿಯಲ್ಲಿ ಸ್ವತಃ ಸಂಜಯ್ ದತ್ ಡಬ್ ಮಾಡಲಿದ್ದಾರೆ. ಉಳಿದ ಭಾಷೆಗಳಲ್ಲಿ ಡಬ್ಬಿಂಗ್ ಕಲಾವಿದರ ಸಹಾಯದಿಂದ ಪೋಸ್ಟ್ ಪ್ರೊಡಕ್ಷನ್ ಮುಗಿಸುವ ಲೆಕ್ಕಾಚಾರ ಚಿತ್ರತಂಡದ್ದು. ಹೀಗಾಗಿ, ಸಂಜಯ್ ದತ್ ಪಾತ್ರಕ್ಕೆ ಎಲ್ಲಾ ಭಾಷೆಗಳಲ್ಲಿ ಡಬ್ಬಿಂಗ್ ಇನ್ನು ಮುಗಿದಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

  ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್ಕೆಜಿಎಫ್ ರಿಲೀಸ್ ಬಗ್ಗೆ ನಿರಾಸೆ ಮೂಡಿಸಿದ ತರಣ್ ಆದರ್ಶ್ ಟ್ವೀಟ್

  ಕನ್ನಡದಲ್ಲಿ ಯಾರು ಡಬ್ ಮಾಡಲಿದ್ದಾರೆ?

  ಕನ್ನಡದಲ್ಲಿ ಯಾರು ಡಬ್ ಮಾಡಲಿದ್ದಾರೆ?

  ಹಿಂದಿಯಲ್ಲಿ ಸ್ವತಃ ಸಂಜಯ್ ದತ್ ಡಬ್ ಮಾಡಲಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಅದಾಗಲೇ ಡಬ್ಬಿಂಗ್ ಕಲಾವಿದರು ಸಿಕ್ಕಿದ್ದಾರೆ. ಆದರೆ, ಕನ್ನಡದಲ್ಲಿ ಅಧೀರನ ಪಾತ್ರಕ್ಕೆ ಸೂಕ್ತ ಧ್ವನಿ ಸಿಕ್ಕಿಲ್ಲ. ಹಾಗಾಗಿ, ಹುಡುಕಾಟ ಮುಂದುವರಿದಿದೆ ಎಂದು ಹೇಳಲಾಗಿದೆ.

  ಅಧೀರನ ಎಂಟ್ರಿಗೆ ಹಾಡು

  ಅಧೀರನ ಎಂಟ್ರಿಗೆ ಹಾಡು

  ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 2ರಲ್ಲಿ ಸಂಜಯ್ ದತ್ ಎಂಟ್ರಿ ಬಹಳ ಪ್ರಮುಖವಾಗಿರಲಿದೆ. ಈ ಹಿನ್ನೆಲೆ ಅಧೀರನ ಪಾತ್ರಕ್ಕಾಗಿ ವಿಶೇಷ ಹಾಡು ಇಡಲಾಗಿದೆಯಂತೆ. ಇನ್ನು ಜುಲೈ 29 ರಂದು ಸಂಜಯ್ ದತ್ ಹುಟ್ಟುಹಬ್ಬವಿದ್ದು, ಆ ದಿನದ ವಿಶೇಷವಾಗಿ ಅಧೀರನ ಟೀಸರ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

  100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದ್ದೇವೆ

  100 ಪರ್ಸೆಂಟ್ ಅವಕಾಶಕ್ಕಾಗಿ ಕಾಯುತ್ತಿದ್ದೇವೆ

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಈ ಚಿತ್ರವನ್ನು ಹಿಂದಿಯಲ್ಲಿ ಎಕ್ಸೆಲ್ ಎಂಟರ್‌ಟೈನ್ ಸಂಸ್ಥೆಯಡಿ ರಿತೇಶ್ ಸಿದ್ವಾನಿ ಮತ್ತು ಫರಾನ್ ಅಖ್ತರ್ ರಿಲೀಸ್ ಮಾಡಲಿದ್ದಾರೆ. ಇತ್ತೀಚಿಗಷ್ಟೆ ಕೆಜಿಎಫ್ ಬಿಡುಗಡೆ ಬಗ್ಗೆ ಮಾತನಾಡಿದ್ದ ರಿತೇಶ್, '' ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅವಕಾಶ ಕೊಡ್ತಿದ್ದಂತೆ ರಿಲೀಸ್ ದಿನಾಂಕ ಪ್ರಕಟಿಸುವ ಯೋಜನೆ ಇದೆ'' ಎಂದಿದ್ದಾರೆ.

  English summary
  Is Sanjay Dutt's Adheera Character The Reason Behind Delay in KGF Chapter 2 Release?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X