For Quick Alerts
  ALLOW NOTIFICATIONS  
  For Daily Alerts

  ಈ ನಟಿಯೇನಾ ವಿಜಯ್ ದೇವರಕೊಂಡ ಹೊಸ ಗರ್ಲ್‌ಫ್ರೆಂಡ್?

  By ಫಿಲ್ಮೀಬೀಟ್ ಡೆಸ್ಕ್‌
  |

  ದಕ್ಷಿಣ ಭಾರತ ಸಿನಿಮಾ ಉದ್ಯಮದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ಒಬ್ಬರು ನಟ ವಿಜಯ್ ದೇವರಕೊಂಡ.

  ಸಿನಿಮಾಗಳಲ್ಲಿ ತಮ್ಮ ಪ್ಲೇಬಾಯ್ ಲುಕ್‌ನಿಂದ ಯುವತಿಯರನ್ನು ಸೆಳೆಯುವ ವಿಜಯ್ ದೇವರಕೊಂಡ ಲಕ್ಷಾಂತರ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಿಪ್ಪ ವಿಜಯ್ ದೇವರಕೊಂಡ ಜೊತೆಗೆ ಹಲವು ನಟಿಯರ ಹೆಸರುಗಳು ಸಹ ಆಗಾಗ್ಗೆ ಥಳಕು ಹಾಕಿಕೊಳ್ಳುತ್ತಿರುತ್ತದೆ.

  ಇದೀಗ ವಿಜಯ್ ದೇವರಕೊಂಡ ಜೊತೆಗೆ ಬಾಲಿವುಡ್ ನಟಿಯ ಹೆಸರು ಸೇರಿಕೊಂಡಿದೆ. ಅದೂ ಈ ಯುವ ನಟಿ ಸಾಮಾನ್ಯದ ನಟಿಯಲ್ಲ. ದೊಡ್ಡ ನವಾಬ ಕುಟುಂಬಕ್ಕೆ ಸೇರಿದ ಯುವತಿ. ಅದುವೇ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್.

  ವಿಜಯ್ ದೇವರಕೊಂಡ-ಸಾರಾ ಅಲಿ ಖಾನ್ ಡೇಟಿಂಗ್?

  ವಿಜಯ್ ದೇವರಕೊಂಡ-ಸಾರಾ ಅಲಿ ಖಾನ್ ಡೇಟಿಂಗ್?

  ನಟ ವಿಜಯ್ ದೇವರಕೊಂಡ ಹಾಗೂ ಸಾರಾ ಅಲಿ ಖಾಣ್ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಹೀಗೆ ಸುದ್ದಿ ಹರಿದಾಡಲು ಕಾರಣವೂ ಇದೆ. ಇಬ್ಬರೂ ಇತ್ತೀಚೆಗೆ ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾರಾ, ವಿಜಯ್ ದೇವರಕೊಂಡ ಜೊತೆಗೆ ಆಪ್ತವಾಗಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಸಹ.

  ಮನಿಷ್ ಮಲ್ಹೋತ್ರಾ ಮನೆಯಲ್ಲಿ ಪಾರ್ಟಿ

  ಮನಿಷ್ ಮಲ್ಹೋತ್ರಾ ಮನೆಯಲ್ಲಿ ಪಾರ್ಟಿ

  ಖ್ಯಾತ ಡಿಸೈನರ್ ಮನಿಷ್ ಮಲ್ಹೋತ್ರಾ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಇದೇ ಪಾರ್ಟಿಯಲ್ಲಿ ಕರಣ್ ಜೋಹರ್, ಸಾರಾ ಅಲಿ ಖಾನ್, ಪುರಿ ಜಗನ್ನಾಥ್, ಚಾರ್ಮಿ, ಅನನ್ಯಾ ಪಾಂಡೆ ಇನ್ನೂ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಇದ್ದರು. ವಿಜಯ್ ದೇವರಕೊಂಡ ಜೊತೆ ಚಿತ್ರ ಪ್ರಕಟಿಸಿರುವ ಸಾರಾ ಅಲಿ ಖಾನ್, 'ಫ್ಯಾನ್ ಮೂಮೆಂಟ್' ಎಂಬ ಕ್ಯಾಪ್ಷನ್ ಹಾಕಿದ್ದಾರೆ.

  ರಶ್ಮಿಕಾ ಮಂದಣ್ಣ ಜೊತೆಗೆ ಹೆಸರು ಕೇಳಿಬಂದಿತ್ತು

  ರಶ್ಮಿಕಾ ಮಂದಣ್ಣ ಜೊತೆಗೆ ಹೆಸರು ಕೇಳಿಬಂದಿತ್ತು

  ವಿಜಯ್ ದೇವರಕೊಂಡ ಹೆಸರು ಈ ಮೊದಲು ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಜೊತೆಗೂ ಕೇಳಿ ಬಂದಿತ್ತು. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರೂ ಆಪ್ತ ಗೆಳೆಯರಾಗಿಯೂ ಇದ್ದರು, ಹಾಗಾಗಿ ಇಬ್ಬರ ಹೆಸರನ್ನು ಥಳುಕು ಹಾಕಲಾಗಿತ್ತು.

  ಬೆಲ್ಜಿಯಂ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಜಯ್

  ಬೆಲ್ಜಿಯಂ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಜಯ್

  ವಿಜಯ್ ದೇವರಕೊಂಡ ತಮ್ಮ ಗರ್ಲ್‌ಫ್ರೆಂಡ್‌ನ ಪರಿಚಯವನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು. ವಿಜಯ್ ದೇವರಕೊಂಡ ಬೆಲ್ಜಿಯಂ ಹುಡುಗಿ ವಿರ್ಜಿನಿಯಾ ಎಂಬಾಕೆಯೊಂದಿಗೆ ಪ್ರೇಮದಲ್ಲಿರುವುದಾಗಿ ಮೂರು ವರ್ಷಗಳ ಹಿಂದೆ ಹೇಳಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿರ್ಜೀನಿಯಾ ಜೊತೆಗೆ ಯಾವುದೇ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿಲ್ಲ ವಿಜಯ್.

  English summary
  Is Vijay Devarakonda dating Bollywood star actress Sara Ali Khan? Recently both were seen together in Mumbai.
  Wednesday, February 24, 2021, 20:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X