For Quick Alerts
  ALLOW NOTIFICATIONS  
  For Daily Alerts

  ಜಾಕಿ ಚಾನ್‌ ಗೆ ಕೊರೊನಾ ವೈರಸ್? ಏನಿದು ಸುದ್ದಿ?

  |

  ಚೀನಾದಲ್ಲಿ ಕೊರೊನಾವೈರಸ್ ಮಿತಿ ಮೀರಿದೆ. 3000 ಕ್ಕೂ ಹೆಚ್ಚು ಮಂದಿ ಈಗಾಗಲೇ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಈ ನಡುವೆ ಚೀನಾದ ಸ್ಟಾರ್ ನಟ ಜಾಕಿ ಚಾನ್ ಅವರಿಗೂ ಕೊರೊನಾ ವೈರಸ್ ತಗುಲಿರುವ ಸುದ್ದಿಯೊಂದು ಹರಿದಾಡುತ್ತಿದೆ.

  ಖ್ಯಾತ ನಟ ಜಾಕಿ ಚಾನ್‌ ಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮಲಗಿರುವ ಚಿತ್ರಗಳೂ ಇದರ ಜೊತೆಗೆ ಹರಿದಾಡುತ್ತಿದೆ.

  ಆದರೆ ಇದು ಸುಳ್ಳು ಸುದ್ದಿ ಆಗಿದ್ದು, ಈ ಬಗ್ಗೆ ಸ್ವತಃ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಜಾಕಿ ಚಾನ್ 'ನಾನು ಕ್ಷೇಮವಾಗಿದ್ದೇನೆ' ಎಂದು ಹೇಳಿದ್ದಾರೆ. ಆ ಮೂಲಕ ವಿಶ್ವದಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ನೆಮ್ಮದಿ ನೀಡಿದ್ದಾರೆ.

  ''ಎಲ್ಲರ ಕಾಳಜಿಗೆ ಧನ್ಯವಾದಗಳು! ನಾನು ಸುರಕ್ಷಿತವಾಗಿದ್ದೇನೆ ಮತ್ತು ತುಂಬಾ ಆರೋಗ್ಯವಾಗಿದ್ದೇನೆ. ನಾನು ಸೋಂಕಿಗೆ ಗುರಿಯಾಗಿಲ್ಲ. ಪ್ರತಿಯೊಬ್ಬರೂ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲಿ ಎಂದು ಹಾರೈಸುತ್ತೇನೆ'' ಎಂದು ಜಾಕಿ ಚಾನ್ ಹೇಳಿದ್ದಾರೆ.

  English summary
  A news got viral that world famous acter Jackie Chan affected. He gave clarification in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X