For Quick Alerts
  ALLOW NOTIFICATIONS  
  For Daily Alerts

  ಅಂದು ಶ್ರೀದೇವಿ ಮಾಡಿದ ತಪ್ಪನ್ನೇ ಈಗ ಮಗಳು ಮಾಡಿದ್ಲು.!

  |

  ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅಂದು ಮಾಡಿದ ತಪ್ಪನ್ನೇ ಈಗ ಅವರ ಮಗಳು ಜಾಹ್ನವಿ ಕಪೂರ್ ಕೂಡ ಮಾಡಿಕೊಂಡಿದ್ದಾರೆ ಎಂದು ಬಿಟೌನ್ ಮಂದಿ ಗುಸುಗುಸು ಎನ್ನುತ್ತಿದ್ದಾರೆ.

  ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಲು ಶ್ರೀದೇವಿಗೆ ಆಫರ್ ಮಾಡಲಾಗಿತ್ತು. ಆದರೆ ಈ ಸಿನಿಮಾವನ್ನ ಒಪ್ಪದ ಶ್ರೀದೇವಿ ಒಲಿದು ಬಂದಿದ್ದ ಅದೃಷ್ಟವನ್ನ ದೂರ ತಳ್ಳಿದ್ದರು. ನಂತರ ಶಿವಗಾಮಿಯಾಗಿ ರಮ್ಯಾಕೃಷ್ಣನ್ ನಟಿಸಿದ್ದರು.

  ಸಿನಿಮಾ ಸೂಪರ್ ಹಿಟ್ ಆಯ್ತು. ಶಿವಗಾಮಿ ಪಾತ್ರವೂ ಅಷ್ಟೇ ಫೇಮಸ್ ಆಯ್ತು. ಆದರೆ ಈ ಪಾತ್ರವನ್ನ ಶ್ರೀದೇವಿ ಮಿಸ್ ಮಾಡಿಕೊಂಡರು ಎಂದು ಅನೇಕರು ಬೇಸರ ಮಾಡಿಕೊಂಡಿದ್ದಂತೂ ಸುಳ್ಳಲ್ಲ.

  ಪದೇ ಪದೇ ಸುದ್ದಿಯಾಗುತ್ತಿರುವ ಶ್ರೀದೇವಿ ಮಗಳು: ಯಾಕೆ?

  ಇದೀಗ, ಅಂತಹದ್ದೇ ಅವಕಾಶವನ್ನ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮಿಸ್ ಮಾಡಿಕೊಂಡಿದ್ದಾರೆ ಎನ್ನುವುದು ಬಾಲಿವುಡ್ ನಲ್ಲಿ ಚರ್ಚೆಯಾಗ್ತಿದೆ. ಈ ಹಿಂದೆ ಸುದ್ದಿಯಾದಂತೆ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾಗೆ ನಾಯಕಿಯಾಗುವ ಅವಕಾಶ ಜಾಹ್ನವಿಗೆ ಬಂದಿತ್ತಂತೆ. ಬಟ್, ಈ ಚಿತ್ರವನ್ನ ರಿಜೆಕ್ಟ್ ಮಾಡಿದ್ದರಂತೆ ಜಾಹ್ನವಿ.

  ಜಾಹ್ನವಿ ರಿಜೆಕ್ಟ್ ಮಾಡಿದ ಸಿನಿಮಾವನ್ನ ಮತ್ತೊರ್ವ ಬಾಲಿವುಡ್ ನಟಿ ಆಲಿಯಾ ಭಟ್ ಒಪ್ಪಿಕೊಂಡಿದ್ದಾರೆ. ಬಹುಶಃ ಈ ಸಿನಿಮಾ ಹಿಟ್ ಆದರೆ, ಅದನ್ನ ಕಂಡು ಜಾಹ್ನವಿ ಹೊಟ್ಟೆ ಉರಿದುಕೊಳ್ಳುವುದಂತೂ ಪಕ್ಕಾ.

  ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

  ರಾಜಮೌಳಿ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅನೇಕ ಕಲಾವಿದರ ಆಸೆ. ಅದರಲ್ಲು ಬಾಹುಬಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಬಂದ್ಮೇಲಂತೂ ಪ್ರತಿಯೊಬ್ಬರಿಗೂ ಒಂದು ಅವಕಾಶ ಸಿಗಬಾರದೇ ಎಂದು ಕಾಯುತ್ತಿದ್ದಾರೆ. ಆದರೆ, ಶ್ರೀದೇವಿ ಮಾತ್ರ ಇದ್ಯಾವುದರ ಅರಿವಿಲ್ಲದೇ ಸಿನಿಮಾ ಕೈಬಿಟ್ಟರು. ಅಂದು ತಾಯಿ ಮಾಡಿದ ತಪ್ಪನ್ನೇ ಈಗ ಮಗಳು ಮಾಡಿಕೊಂಡರು ಎನ್ನುವುದು ಟಾಕ್.

  English summary
  Sridevi rejects ss rajamouli's baahubali movie in last time. now, sridevi daughter janhavi kapoor rejects rajamouli's rrr movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X