For Quick Alerts
  ALLOW NOTIFICATIONS  
  For Daily Alerts

  ಪುಟ್ಟ ತಪ್ಪು ಮಾಡಿ ಟ್ರೋಲ್ ಆದ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ

  |

  ಏಕ್ ಲವ್ ಯಾ ಚಿತ್ರದ ನಂತರ ಜೋಗಿ ಪ್ರೇಮ್ ತನ್ನ ಮುಂದಿನ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರು ಚಿತ್ರದ ಮಿಶ್ರ ಪ್ರತಿಕ್ರಿಯೆಯ ನಂತರ ಮತ್ತೊಮ್ಮೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಕಡೆ ಮುಖ ಮಾಡಿರುವ ಧ್ರುವ ಸರ್ಜಾ ಈ ಬಾರಿ ಪ್ರೇಮ್ ನಿರ್ದೇಶನದಲ್ಲಿ ಮ್ಯಾಜಿಕ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.

  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಾಲ್ಕನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಯಾವಾಗಲೂ ವಿಭಿನ್ನವಾದ ಶೀರ್ಷಿಕೆ ಇಡುವ ಮೂಲಕ ಸದ್ದು ಮಾಡುವ ಜೋಗಿ ಪ್ರೇಮ್ ಧ್ರುವ ಸರ್ಜಾ ಅಭಿನಯದ ಈ ಚಿತ್ರಕ್ಕೂ ವಿಭಿನ್ನವಾದ ಶೀರ್ಷಿಕೆ ಇಡುವ ನಿರೀಕ್ಷೆ ಇದೆ. ಇಲ್ಲಿಯವರೆಗೂ ಚಿತ್ರಕ್ಕೆ ಯಾವ ರೀತಿಯ ಶೀರ್ಷಿಕೆ ಇಡಬಹುದು ಎಂಬ ಸಣ್ಣ ಸುಳಿವನ್ನೂ ನೀಡದ ಜೋಗಿ ಪ್ರೇಮ್ ಯಾವ ಟೈಟಲ್ ಇಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

  ಇನ್ನು ಕಳೆದೆರಡು ದಿನಗಳಿಂದ ಚಿತ್ರದ ಟೈಟಲ್ ಟೀಸರ್ ಅನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ನಿರ್ದೇಶಕ ಜೋಗಿ ಪ್ರೇಮ್ ಟೀಸರ್ ಗಾಗಿ ಧ್ರುವ ಸರ್ಜಾ ಎಲ್ಲಾ ಭಾಷೆಯಲ್ಲಿಯೂ ಡಬ್ ಮಾಡಿರುವ ವಿಷಯವನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಈ ವೇಳೆ ಫೋಟೊ ಹಿಂದೆ ಟಿವಿ ಡಿಸ್ ಪ್ಲೇನಲ್ಲಿ 'War Begins' ಎನ್ನುವುದರ ಬದಲಾಗಿ 'War Bigins' ಎಂದು ಸ್ಪೆಲಿಂಗ್ ಮಿಸ್ಟೇಕ್ ಮಾಡಲಾಗಿದ್ದು, ಈ ಕುರಿತಾಗಿ ನೆಟ್ಟಿಗರು ಸದ್ಯ ಟ್ರೋಲ್ ಮಾಡುತ್ತಿದ್ದಾರೆ. ಹೀಗೆ ಸಣ್ಣ ಸ್ಪೆಲಿಂಗ್ ಮಿಸ್ಟೇಕ್ ಮೂಲಕ ಟ್ರೋಲ್ ಆಗುತ್ತಿರುವ ಚಿತ್ರತಂಡ ತನ್ನ ತಪ್ಪನ್ನು ತಿದ್ದಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

  ಪೋಸ್ಟ್ ಮಾಡುವ ಮೂಲಕ ಸುದ್ದಿ ತಿಳಿಸಿದ ಪ್ರೇಮ್

  ಪೋಸ್ಟ್ ಮಾಡುವ ಮೂಲಕ ಸುದ್ದಿ ತಿಳಿಸಿದ ಪ್ರೇಮ್

  ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಧ್ರುವ ಸರ್ಜಾ ಜತೆಗಿನ ಚಿತ್ರವನ್ನು ಹಂಚಿಕೊಂಡಿರುವ ಪ್ರೇಮ್ ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಎಲ್ಲಾ ಭಾಷೆಗೂ ತಮ್ಮ ದನಿಯಲ್ಲಿ ಡಬ್ಬಿಂಗ್ ಮಾಡಿದ್ದಾರೆ, ವಾರ್ ಬೆಗಿನ್ಸ್ ಸೂನ್, ಟೈಟಲ್ ಟೀಸರ್ ಹಿಟ್ಟಿಂಗ್ ಸೂನ್ ಎಂದು ಬರೆದುಕೊಂಡಿದ್ದಾರೆ.

  ದಸರಾಗೆ ಬಿಡುಗಡೆಯಾಗುತ್ತಾ ಟೈಟಲ್ ಟೀಸರ್?

  ದಸರಾಗೆ ಬಿಡುಗಡೆಯಾಗುತ್ತಾ ಟೈಟಲ್ ಟೀಸರ್?

  ಪ್ರೇಮ್ ವೇಗವಾಗಿ ಟೈಟಲ್ ಟೀಸರ್ ಕೆಲಸಗಳನ್ನು ಮಾಡುತ್ತಿದ್ದು, ಮೊನ್ನೆಯಷ್ಟೇ ಟೀಸರ್ ಹಿನ್ನೆಲೆ ಸಂಗೀತದ ಕೆಲಸವನ್ನು ಅರ್ಜುನ್ ಜನ್ಯ ಜೊತೆ ಸೇರಿ ಭರದಿಂದ ಮಾಡಿದ್ದ ದೃಶ್ಯಗಳು ಕಂಡು ಬಂದಿದ್ದವು ಹಾಗೂ ಇದೀಗ ಧ್ರುವ ಸರ್ಜಾ ಬಳಿ ಡಬ್ಬಿಂಗ್ ಮಾಡಿಸುತ್ತಿರುವ ಪ್ರೇಮ್ ದಸರಾ ಪ್ರಯುಕ್ತ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

  ತಿರುವನಂತಪುರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರೇಮ್

  ತಿರುವನಂತಪುರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪ್ರೇಮ್

  ಈ ಕೆಲಸಗಳನ್ನು ಆರಂಭಿಸುವುದಕ್ಕೂ ಮುನ್ನ ಪ್ರೇಮ್ ತನ್ನ ಸ್ನೇಹಿತರ ಜತೆ ಕೇರಳದ ತಿರುವನಂತಪುರಂ ದೇವಸ್ಥಾನಕ್ಕೆ ಭೇಟಿ ನೀಡಿ ಚಿತ್ರಗಳನ್ನು ಹಂಚಿಕೊಂಡಿದ್ದರು. ಅಲ್ಲಿಯೂ ಸಹ ಧ್ರುವ ಸರ್ಜಾ ಅಭಿನಯದ ಚಿತ್ರದ ಟೈಟಲ್ ಟೀಸರ್ ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂಬುದನ್ನು ಬರೆದುಕೊಂಡಿದ್ದರು.

  English summary
  Jogi Prem and Dhruva Sarja got trolled for spelling mistake
  Tuesday, September 27, 2022, 7:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X