»   » 'ರಾಜಕುಮಾರ' ಸಿನಿಮಾದ ತೆಲುಗು ರಿಮೇಕ್ ಗೆ ಹೀರೋ ಇವರಾ..?

'ರಾಜಕುಮಾರ' ಸಿನಿಮಾದ ತೆಲುಗು ರಿಮೇಕ್ ಗೆ ಹೀರೋ ಇವರಾ..?

Posted By:
Subscribe to Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಟಾಲಿವುಡ್ ನಲ್ಲಿ ಬರಲಿದೆ ಎಂಬ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾವನ್ನು ತೆಲುಗಿನಲ್ಲಿ ಮಾಡುವ ಚಿಂತನೆ ಅನೇಕ ದಿನಗಳಿಂದ ಇದೆ.

'ರಾಜಕುಮಾರ'ನ ಶತದಿನೋತ್ಸವದಲ್ಲಿ ಹಾಡಿ-ಕುಣಿದು ಸಂಭ್ರಮಿಸಿದ ತಾರೆಯರು

ಟಾಲಿವುಡ್ ನಲ್ಲಿ 'ರಾಜಕುಮಾರ' ಸಿನಿಮಾ ಬರುವುದು ಇನ್ನೂ ಪಕ್ಕಾ ಆಗಿಲ್ಲ. ಆದರೆ ಟಾಲಿವುಡ್ ನಲ್ಲಿ ಬರುವ 'ರಾಜಕುಮಾರ' ಚಿತ್ರದ ನಾಯಕನ ಬಗ್ಗೆ ಸದ್ಯಕ್ಕೆ ಚರ್ಚೆ ಶುರು ಆಗಿದೆ. ಟಾಲಿವುಡ್ ನ ಬಿಗ್ ಸ್ಟಾರ್ ಗಳ ಹೆಸರು ಇಲ್ಲಿ ಕೇಳಿ ಬಂದರೂ ಒಬ್ಬ ನಟನ ಹೆಸರು ಜಾಸ್ತಿ ಗಿರಕಿ ಹೊಡೆಯುತ್ತಿದೆ.

ಗಾಂಧಿನಗರದಲ್ಲಿ ವಿಜಯಯಾತ್ರೆ ಮುಗಿಸಿದ 'ರಾಜಕುಮಾರ'

'ರಾಜಕುಮಾರ' ಚಿತ್ರ ಟಾಲಿವುಡ್ ನಲ್ಲಿ ಬಂದರೆ ಯಾವ ಹೀರೋ ಪುನೀತ್ ಪಾತ್ರವನ್ನು ಮಾಡಬಹುದು.? ಮುಂದೆ ಓದಿ....

ಜೂನಿಯರ್ ಎನ್ ಟಿ ಆರ್

ಟಾಲಿವುಡ್ 'ಯಂಗ್ ಟೈಗರ್' ಜೂನಿಯರ್ ಎನ್.ಟಿ.ಆರ್ 'ರಾಜಕುಮಾರ' ಸಿನಿಮಾದ ರಿಮೇಕ್ ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.

ಸೂಟ್ ಆಗುತ್ತದೆ

ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಮಾಡಿದ ಪಾತ್ರ ತೆಲುಗಿನಲ್ಲಿ ಜೂನಿಯರ್ ಎನ್.ಟಿ.ಆರ್ ಅವರಿಗೆ ತುಂಬ ಚೆನ್ನಾಗಿ ಸೂಟ್ ಆಗುತ್ತದೆ ಎಂಬುದು ಅನೇಕರ ಅಭಿಪ್ರಾಯ.

ಮಾಸ್ - ಕ್ಲಾಸ್

ಪುನೀತ್ ಮತ್ತು ಜೂನಿಯರ್ ಎನ್.ಟಿ.ಆರ್ ಇಬ್ಬರೂ ಮಾಸ್ - ಕ್ಲಾಸ್ ಎರಡು ರೀತಿಯ ಸಿನಿಮಾಗಳಿಗೆ ಹೋಲುವ ನಟರು. ಇನ್ನೂ 'ರಾಜಕುಮಾರ' ಸಿನಿಮಾದ ಕಥೆ ಕೂಡ ಮಾಸ್ ಹಾಗೂ ಫ್ಯಾಮಿಲಿ ಓರಿಯೆಂಟೆಡ್ ಆಗಿದೆ.

ರಾಜ್ ಕುಮಾರ್ - ಎನ್.ಟಿ.ಆರ್

ಕನ್ನಡದ 'ರಾಜಕುಮಾರ' ಸಿನಿಮಾದಲ್ಲಿ ಡಾ.ರಾಜ್ ಅವರ ಶೇಡ್ ಇತ್ತು. ಅದೇ ರೀತಿ ತೆಲುಗಿನಲ್ಲಿ ಈ ಚಿತ್ರ ಬಂದರೆ ಎನ್.ಟಿ. ಆರ್ ಅವರ ಬ್ಯಾಕ್ ಡ್ರಾಪ್ ನಲ್ಲಿ ಚಿತ್ರ ಮಾಡಬಹುದು.

ಸಂತೋಷ್ ಆನಂದ್ ರಾಮ್

ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೂ 'ರಾಜಕುಮಾರ' ಸಿನಿಮಾವನ್ನು ಟಾಲಿವುಡ್ ನಲ್ಲಿ ಮಾಡುವ ಯೋಜನೆ ಇದೆ. ಆದರೆ ಆ ಚಿತ್ರ ಯಾವಾಗ ಶುರು ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.

English summary
The Role Of Puneet Rajkumar in Kannada Movie 'Raajakumara' suits Junior NTR in Telugu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada