»   » ಗಿಮಿಕ್ಕೋ..8ನೇ ಅದ್ಬುತವೋ..ನೀವೇ ನಿರ್ಧರಿಸಿ.!

ಗಿಮಿಕ್ಕೋ..8ನೇ ಅದ್ಬುತವೋ..ನೀವೇ ನಿರ್ಧರಿಸಿ.!

Posted By:
Subscribe to Filmibeat Kannada

ಮೆಗಾ ಸೀರಿಯಲ್ ನಂತೆ ನಿರ್ಮಾಪಕ ಕೆ.ಮಂಜು ಮತ್ತು ನಿರ್ಮಾಪಕ ಮುನಿರತ್ನ ಕಿತ್ತಾಡಿಕೊಂಡಿದ್ದ ಎಪಿಸೋಡ್ ನಿಮಗೆ ನೆನಪಿದ್ಯಾ?

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಮೊದಲು ಬಿಡುಗಡೆ ಆಗ್ಬೇಕು ಅಂತ ನಿರ್ಮಾಪಕ ಮುನಿರತ್ನ ಒಂದ್ಕಡೆ, 'ಗಾಡ್ ಫಾದರ್' ಚಿತ್ರ ಮೊದಲು ಸೆಟ್ಟೇರಿದ್ದು. ಹೀಗಾಗಿ ಅದೇ ಫಸ್ಟ್ ರಿಲೀಸ್ ಆಗ್ಬೇಕು ಅಂತ ನಿರ್ಮಾಪಕ ಕೆ.ಮಂಜು ಇನ್ನೊಂದ್ಕಡೆ.

ಇಬ್ಬರ ಹಗ್ಗ-ಜಗ್ಗಾಟ ಫಿಲ್ಮ್ ಚೇಂಬರ್ ನಲ್ಲಿ ಬಗೆ ಹರಿಯಲಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಫಾರ್ಮುಲಾ ಕೂಡ ವರ್ಕೌಟ್ ಆಗ್ಲಿಲ್ಲ. ಕೊನೆಗೆ 'ಗಾಡ್ ಫಾದರ್' ಸೆನ್ಸಾರ್ ಲೇಟಾಗಿದ್ದಕ್ಕೆ ವಿವಾದ ತಣ್ಣಗಾಗಿತ್ತು. [ಗಾಡ್ ಫಾದರ್, ಕಠಾರಿವೀರ ಕಿತ್ತಾಟ ಪುಕ್ಸಟೆ ಪ್ರಚಾರಕ್ಕೆ?]

K.Manju and Muniratna spotted together during Uppi-2 audio release

ಅಂದು ಹಾವು-ಮುಂಗುಸಿಯಂತೆ ಕಚ್ಚಾಡಿಕೊಂಡಿದ್ದ ನಿರ್ಮಾಪಕ ಮುನಿರತ್ನ ಮತ್ತು ಕೆ.ಮಂಜು ಇಂದು ಫುಲ್ ಗಳಸ್ಯ ಕಂಠಸ್ಯ.! ದುಷ್ಮನಿ ಬಿಟ್ಟು ದೋಸ್ತಿ ಶುರು ಹಚ್ಕೊಂಡಿರುವ ಮುನಿರತ್ನ-ಕೆ.ಮಂಜು ಸ್ನೇಹ ಎಲ್ಲರಿಗೂ ಗೋಚರವಾಗಿದ್ದು 'ಉಪ್ಪಿ-2' ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ. [ಮುನಿರತ್ನಗೆ ಕೊಬ್ರಿ-ಸಕ್ಕರೆ; ಕೊಬ್ರಿಗೆ 'ಮುನಿ'ಸು?]

ರುಪ್ಪೀಸ್ ರೆಸಾರ್ಟ್ ನಲ್ಲಿ ನಡೆದ 'ಉಪ್ಪಿ-2' ಆಡಿಯೋ ರಿಲೀಸ್ ಸಮಾರಂಭದಲ್ಲಿ ಮುನಿರತ್ನ ಮತ್ತು ಕೆ.ಮಂಜು ಭಾಗವಹಿಸಿದ್ದರು. ಕಾರ್ಯಕ್ರಮ ನಡೆಯುವಾಗ ಇಬ್ಬರು ಅಕ್ಕ-ಪಕ್ಕದಲ್ಲೇ ಕುಳಿತಿದ್ದರು. ಸಾಲದಕ್ಕೆ ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ರೆಸಾರ್ಟ್ ಸುತ್ತ ವಾಕಿಂಗ್ ಮಾಡುತ್ತಾ ಜಾಲಿ ಮಾಡ್ತಿದ್ದರು.

ಇದನ್ನ ನೋಡಿದ ಅಲ್ಲಿನ ಪತ್ರಕರ್ತರಿಗೆ ಆದ ಕಾಂಟ್ರವರ್ಸಿ ಗಿಮ್ಮಿಕ್ಕೋ, ಇಲ್ಲ ಈಗ ನೋಡುತ್ತಿರುವುದು ವಿಶ್ವದ 8ನೇ ಅದ್ಭುತವೋ ಅಂತ ಫುಲ್ ಕನ್ಫ್ಯೂಶನ್ ಆಗ್ಬಿಟ್ಟಿದೆ.

English summary
Kannada Rival Producers K.Manju and Muniratna spotted sharing laughter together in 'Ruppies Resort', Bengaluru during 'Uppi-2' audio release.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada