»   » ಕಾಲಿವುಡ್ ಕ್ವೀನ್ ಕಾಜಲ್ ಗೆ ಕೈಕೊಟ್ಟವನಾರು?

ಕಾಲಿವುಡ್ ಕ್ವೀನ್ ಕಾಜಲ್ ಗೆ ಕೈಕೊಟ್ಟವನಾರು?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳುತ್ತಿರುವ ತಮಿಳು, ಹಿಂದಿ ದ್ವಿಭಾಷಾ ಚಿತ್ರ 'ಉತ್ತಮ ವಿಲನ್' ಚಿತ್ರದಲ್ಲಿ ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಜತೆ ನಟಿಸುವ ಖುಷಿಯಲ್ಲಿರುವ ಬಹುಭಾಷಾ ತಾರೆ ಕಾಜಲ್ ಅಗರವಾಲ್ ಗೆ ಸಂಭಾವನೆ ವಿಷಯದಲ್ಲಿ ಗೊಂದಲ ಉಂಟಾಗಿದೆಯಂತೆ. ಹೀಗಾಗಿ ಕಾಲಿವುಡ್ ಬಿಡಲು ಆಗದೆ ಟಾಲಿವುಡ್ ಚಿತ್ರಗಳನ್ನು ಒಪ್ಪಿಕೊಳ್ಳಲು ಆಗದೆ ಒದ್ದಾಡುತ್ತಿದ್ದಾಳಂತೆ ಎಂಬ ಸುದ್ದಿಯಿದೆ ಆದರೆ, ಕಾಜಲ್ ಗೆ ಟಾಲಿವುಡ್ ನಾಯಕನೊಬ್ಬ ಕೈಕೊಟ್ಟಿದ್ದಾನೆ ಹೀಗಾಗಿ ತೆಲುಗು ಚಿತ್ರರಂಗದ ಸಹವಾಸ ಸಾಕು ಎಂದು ಕಾಜಲ್ ದೂರವುಳಿದಿದ್ದಾಳೆ ಎನ್ನುತ್ತದೆ ಗಾಳಿಸುದ್ದಿ

ದಕ್ಷಿಣದ ಬೆಡಗಿ ಕಾಜಲ್ ಅಗರವಾಲ್ ಕಮಲ್ ಜೊತೆಗೆ ತುಟಿಗೆ ತುಟಿ ಬೆರಸಲು ಕಾಜಲ್ ಒಪ್ಪಿಕೊಂಡಿದ್ದಾಳೆ ಎಂಬ ಸುದ್ದಿ ಹಬ್ಬಿದ ಮೇಲೆ ಪ್ರತಿಸ್ಪರ್ಧಿ ನಟಿಯರು ಹೊಟ್ಟೆ ಉರಿದುಕೊಂಡಿದ್ದರು ಎನ್ನಲಾಗಿದೆ. ಆದರೆ, ಕಮಲ್ ಜತೆ ಚಿತ್ರ, ಉದಯನಿಧಿ ಸ್ಟಾಲಿನ್ ಜತೆ, ಧನುಷ್ ಜತೆ ಒಂದೊಂದು ಚಿತ್ರದಲ್ಲಿ ನಟಿಸುತ್ತಿರುವ ಕಾಜಲ್ ಗೆ ತಮಿಳು ಚಿತ್ರಗಳಿಂದ ಸಿಗುತ್ತಿರುವ ಸಂಭಾವನೆ ಸಾಲುತ್ತಿಲ್ಲವಂತೆ.

ಕೃಷ್ಣವಂಶಿ ಅವರ ರಾಮ್ ಚರಣ್ ತೇಜ ಚಿತ್ರದಿಂದಲೂ ಕಾಜಲ್ ಹೊರಬಿದ್ದಿದ್ದಾಳೆ. ತೆಲುಗು ಚಿತ್ರರಂಗದಿಂದ ಬಲವಂತವಾಗಿ ಕಾಜಲ್ ಳನ್ನು ದೂರ ಇಡಲಾಗುತ್ತಿದೆಯೇ? ಅಥವಾ ಕಾಜಲ್ ಗೆ ಒಳ್ಳೆ ಆಫರ್ ಸಿಗುತ್ತಿಲ್ಲವೇ? ಕಡಿಮೆ ಸಂಭಾವನೆ ಸಿಕ್ಕರೂ ಕಾಲಿವುಡ್ ನಲ್ಲೇ ಕುಣಿಯುತ್ತಿರುವುದೇಕೆ ? ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ಹುಡುಕಿ ಹೊರಟ ಗಾಸಿಪ್ ಕಲಂ ವರದಿಗಾರರು ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಹೊರಹಾಕಿದ್ದಾರೆ.

ಟಾಲಿವುಡ್ ನ ದೊಡ್ಡ ಹೀರೋ ಹಿಂದೆ ಕಾಜಲ್ ಬಹುಕಾಲ ಸುತ್ತಾಡಿದ್ದಳು ಆತನ ಮೇಲೆ ಆಕೆಗೆ ಮೋಹ ಉಂಟಾಗಿತ್ತು. ಆದರೆ, ಹಿಂದಿಯಲ್ಲಿ ಸಿಂಗಂ ಚಿತ್ರದಲ್ಲಿ ನಟಿಸಿದ ಕಾಜಲ್ ಅಲ್ಲೇ ಉಳಿಯುವ ಮಾತಾಡಿದಳು. ಜತೆಗೆ ಪುರುಷರ ಮ್ಯಾಗಜೀನ್ ಎಫ್ ಎಚ್ ಎಂನಲ್ಲಿ ಬಟ್ಟೆ ಕಳಚಿ ಫೋಸ್ ನೀಡಿ, ಅಯ್ಯೋ ನಾನು ತುಂಬಾ ಸಂಪ್ರದಾಯಸ್ಥೆ ನಾನು ಆ ರೀತಿ ಫೋಸ್ ನೀಡಿಲ್ಲ ಎಂದಳು. ಅದು ಕಾಜಲ್ ಅವರದ್ದೇ ಚಿತ್ರ ಎಂದು ಮ್ಯಾಗಜೀನ್ ಹೇಳಿಕೆ ನೀಡಿದ ಮೇಲೆ ಕಾಜಲ್ ಮೆಚ್ಚುತ್ತಿದ್ದ ತೆಲುಗು ನಾಯಕನಿಗೂ ಈಕೆ ಮೇಲೆ ನಂಬಿಕೆ ಹೊರಟು ಹೋಯಿತಂತೆ.

ಈ ಬಗ್ಗೆ ತಿಳಿಯದ ಕಾಜಲ್ ಹೀರೋ ಮುಂದೆ ನಿಂತು ಹಲ್ಲು ಕಿಸಿದಳಂತೆ. ಹೀರೋನಿಂದ ಸಿಕ್ಕ (ಅವ)ಮರ್ಯಾದೆಯಿಂದ ಕಾಜಲ್ ಕುಟುಂಬ ಕೂಡಾ ಕೆರಳಿದೆ. ತೆಲುಗು ಬಿಡ್ಡಗಳ ಸಹವಾಸ ಸಾಕು, ತಮಿಳರ ಜತೆ ನಟಿಸುತ್ತಿರು ಸಾಕು. ಇಲ್ಲದಿದ್ದರೆ ಶಾದಿ ಮಾಡ್ಕೋ ಎಂದು ಮನೆಯಲ್ಲಿ ಬುದ್ಧಿವಾದ ಹೇಳಿದ್ದಾರಂತೆ.

Kajal Agarwal out of Tollywood because of remuneration or love failure

ಕಾಜಲ್ ಗೆ ಕೈಕೊಟ್ಟ ನಾಯಕ ಯಾರು? ಅದು ನಿಜವಾಗಲೂ ಅಸಲಿ ಪ್ರೇಮವಾ? ಅಥವಾ ಹುಚ್ಚು ಮನಸ್ಸಿನ ಭಾವನೆಗಳಾ? ಎಂಬುದರ ಬಗ್ಗೆ ಕಾಜಲ್ ಮುಂದೊಂದು ದಿನ ಹೇಳುವ ನಿರೀಕ್ಷೆ ಟಾಲಿವುಡ್ ಮಂದಿಗೆ ಇದೆ. ಕಾಜಲ್ ಬಗ್ಗೆ ಗೊತ್ತಿರುವ ಚಿತ್ರ ತಂಡದವರು ಆಕೆ ಖಾಸಗಿ ಬದುಕಿನ ಬಗ್ಗೆ ಪ್ರಶ್ನಿಸದೆ ಸಹಕರಿಸುತ್ತಿದ್ದಾರೆ. ಸದ್ಯಕ್ಕಂತೂ ಕಾಜಲ್ ಕಾಲ್ ಶೀಟ್ ಕಾಲಿವುಡ್ ಗೆ ಮಾತ್ರ.

English summary
Kajal Agarwal out of Tollywood beacause of remuneration chaos or lovefailure. There is a strong grapevine that Kajal is feeling cheated by a big hero in Tollywood with whom she has fallen in love says gossip report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada