For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಜತೆ ಕಾಜಲ್ ವಿಹಾರ ಚಿತ್ರ ಸೋರಿಕೆ

  By ಜೇಮ್ಸ್ ಮಾರ್ಟಿನ್
  |

  ಕಾಲಿವುಡ್, ಟಾಲಿವುಡ್ ನಂತರ ಬಾಲಿವುಡ್ ಗೂ ಕಾಲಿಟ್ಟು ಬಂದಿರುವ ಕಾಜಲ್ ಅಗರವಾಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಡಜನ್ ಗಟ್ಟಲೆ ನಟರ ಜತೆ ಆಕೆ ಹೆಸರು ತಗುಲಿ ಹಾಕಿಕೊಂಡರೂ ಕೊಡವಿಕೊಂಡು ನಡೆದಿದ್ದ ಸುಂದರಿ ಕಾಜಲ್ ಈಗ ತಗಲಾಕ್ಕೊಂಡೆ ನಾನು ಎಂದು ಹಾಡುತ್ತಾ ತನ್ನ ಹೊಸ ಬಾಯ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದಾಳಂತೆ.

  ನಟಿ ಬಾಯ್ ಫ್ರೆಂಡ್ ತನ್ನ ಮುಂಬೈ ಉದ್ಯಮಿ ಗೆಳೆಯನ ಜತೆ ಸುತ್ತಾಡುವ ಚಿತ್ರಗಳು ಈಗ ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದೆ. ಕಾಜಲ್ ತನ್ನ ಗೆಳೆಯನ ಜತೆ ವಿಹಾರ ಹೋಗುವ ಚಿತ್ರಗಳನ್ನು ಆಕೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ್ದಾರೆ.

  ತಮಿಳಿನಲ್ಲಿ 'ತುಪಾಕಿ' ಹುಡುಗಿ ಎಂದೆ ಕರೆಯಲ್ಪಡುವ ಕಾಜಲ್ ಸದ್ಯಕ್ಕೆ ದುಬೈನಲಿ ತನ್ನ ಬಾಯ್ ಫ್ರೆಂಡ್ ಜತೆ ಓಡಾಡಿಕೊಂಡಿದ್ದಾಳಂತೆ. ಕಾಜಲ್ ಕಳೆದ ಡಿಸೆಂಬರ್ ನಲ್ಲಿ ತನ್ನ ತಂಗಿ ನಿಶಾ ಅಗರವಾಲ್ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಂಡಿರುವ ಖುಷಿಯಲ್ಲಿದ್ದಾಳೆ. ಅಣೇಕ ದಿನಗಳ ನಂತರ ಈ ರೀತಿ ಟೂರ್ ಹೊಡೆಯುತ್ತಿದ್ದಾಳಂತೆ. ಈಗ ಒಳ್ಳೆ ಸಿನಿಮಾಗಳ ಆಫರ್ ಬರದಿದ್ದರೆ ಮದುವೆಯಾಗು ಎಂದು ಅಪ್ಪ, ಅಮ್ಮ ಸಲಹೆ ನೀಡಿದ್ದಾರಂತೆ.

  ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀಕಾಳಹಸ್ತಿ ದೇಗುಲಕ್ಕೆ ಸಂಸಾರ ಸಮೇತ ಭೇಟಿ ನೀಡಿದ್ದ ಕಾಜಲ್ ಅವರು ರಾಹು ಕೇತು ಶಾಂತಿ ಪೂಜೆ ನಡೆಸಿ 'ಕಲ್ಯಾಣಮಸ್ತು' ಎಂಬ ಆಶೀರ್ವಾದ ಪಡೆದುಕೊಂಡು ಬಂದಿದ್ದರು. [ವರದಿ ಇಲ್ಲಿದೆ ಓದಿ]

  ಆದರೆ, ಅಕ್ಕನ ಮದುವೆ ಸದ್ಯಕ್ಕಿಲ್ಲ ಎಂದು ನಿಶಾ ಹೇಳಿದ್ದಾಳೆ. ಕಾಜಲ್ ಗೆ ಬಾಯ್ ಫ್ರೆಂಡ್ ಇರಬಹುದು ನಿಜ ಆದರೆ, ವಿವಾಹದ ಬಗ್ಗೆ ಇನ್ನೂ ಯೋಚಿಸಿಲ್ಲ. ಆಕೆ ಅನೇಕ ಅಭಿಮಾನಿಗಳ ಜತೆ ಫೋಟೋಗೆ ಪೋಸ್ ನೀಡಿದ್ದಾಳೆ. ಯಾರನ್ನಾದರೂ ಡೇಟಿಂಗ್ ಮಾಡುತ್ತಿದ್ದಾರೆ ನಿಮ್ಮ ಮುಂದೆ ಬಂದು ಅವಳೇ ಮೊದಲಿಗೆ ಹೇಳುತ್ತಾಳೆ ಎಂದು ನಿಶಾ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿದ್ದಾಳೆ.

  English summary
  Kajal Aggarwal seems to have finally found her love. The actress, who was linked up with a few of her co-stars, is reportedly dating a Mumbai-based industrialist. Her photos with him have been leaked on internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X