»   » ನಟ ಹೃತಿಕ್ ರೋಷನ್ ಬಾಳಲ್ಲಿ ಹೊಸ ನಟಿ ಎಂಟ್ರಿ

ನಟ ಹೃತಿಕ್ ರೋಷನ್ ಬಾಳಲ್ಲಿ ಹೊಸ ನಟಿ ಎಂಟ್ರಿ

Posted By:
Subscribe to Filmibeat Kannada

ಹಾಲು-ಜೇನಿನಂತಿರುತ್ತಿದ್ದ ಹೃತಿಕ್ ರೋಷನ್ ಮತ್ತು ಸುಸಾನೆ ದಾಂಪತ್ಯ ಮುರಿದು ಬಿದ್ದಾಯ್ತು. ''ಜೋಡಿ ಅಂದ್ರೆ ಹೀಗಿರಬೇಕು'' ಅನ್ನುವ ಹಾಗಿದ್ದ ಈ ದಂಪತಿ ಬೇರೆಬೇರೆಯಾಗಿ ತಿಂಗಳುಗಳೇ ಕಳೆದಿವೆ. ಅತ್ತ ಸುಸಾನೆ ಜೊತೆ ನಟ ಅರ್ಜುನ್ ರಾಂಪಾಲ್ ಹೆಸರು ತಳುಕು ಹಾಕಿಕೊಂಡಿದ್ರೆ, ಇತ್ತ ಹೃತಿಕ್ ಹಾರ್ಟಿಗೆ ಬಾಣ ಬಿಟ್ಟರುವ ನಟಿಯ ಹೆಸರು ಬಯಲಾಗಿದೆ.

ಹನ್ನೆರಡು ವರ್ಷಗಳ ಸಂಸಾರಕ್ಕೆ ಕೋರ್ಟ್ ನಲ್ಲಿ ತಿಲಾಂಜಲಿ ಬಿಡುವಂತದ್ದು ಈ ಜೋಡಿಗೆ ಏನಾಗಿತ್ತು ಅನ್ನುವುದು ಬಾಲಿವುಡ್ ನಲ್ಲಿ ಈಗಲೂ ಬಹು ಚರ್ಚಿತ ವಿಷಯ. ಇದೀಗ ಅದಕ್ಕೆ ಒಗ್ಗರಣೆ ಅನ್ನುವಂತೆ ಬಂದಿರುವ ಬ್ರೇಕಿಂಗ್ ನ್ಯೂಸ್ ಕೇಳಿ ಇಡೀ ಬಾಲಿವುಡ್ಡೇ ಬಾಯಿ ಮೇಲೆ ಬೆರಳಿಟ್ಟಿದೆ. [ಹೃತಿಕ್-ಸುಸಾನೆ ವಿಚ್ಛೇದನ: ಅಸಲಿ ಕಾರಣ ಏನಿತ್ತು?]

ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಹೃತಿಕ್-ಸುಸಾನೆ ಮಧ್ಯೆ 'ಆಕೆ' ಎಂಟ್ರಿ ಕೊಟ್ಟ ಪರಿಣಾಮವೇ 'ಡಿವೋರ್ಸ್', ಅನ್ನುವ ಖಾಸ್ ಖಬರ್ ಬಾಲಿವುಡ್ ನಿಂದ ಬಂದಿದೆ. 'ಆಕೆ' ಯಾರು ಅನ್ನುವುದು ಬಿಟೌನ್ ನ ಮೂಲೆಮೂಲೆಯಲ್ಲೂ ತಮಟೆ ಸದ್ದಿನೊಂದಿಗೆ ಜಗಜ್ಜಾಹೀರಾಗಿದೆ. 'ಆಕೆ' ಮತ್ಯಾರು ಅಲ್ಲ, ಕ್ರಿಷ್ 3 ಚಿತ್ರದಲ್ಲಿ ಹೃತಿಕ್ ಗೆ ಚಾಲೆಂಜ್ ಹಾಕಿದ್ದ ನಟಿ ಕಂಗನಾ ರನೌತ್. [ಹೃತಿಕ್ ರೋಶನ್ ಹಾಲಿನಂತಹ ಸಂಸಾರ ಒಡೆದಿದ್ದೇಕೆ?]

ಇಲ್ಲಿಯವರೆಗೂ ಎಲ್ಲರೂ ಊಹಿಸಿದ ಹಾಗೆ ಹೃತಿಕ್ ಸಂಸಾರದಲ್ಲಿ ಬಿರುಕು ಮೂಡಿಸಿದ್ದು ಆಂಗ್ಲ ನಟಿ ಬಾರ್ಬರಾ ಮೋರಿ ಅಲ್ಲ. ಬದ್ಲಾಗಿ, ಬಾರ್ಬರಾ ಮೋರಿ ಮತ್ತು ಹೃತಿಕ್ ಜೊತೆಗೆ 'ಕೈಟ್ಸ್' ಚಿತ್ರದಲ್ಲಿ ನಟಿಸಿದ್ದ ನಟಿ ಕಂಗನಾ.

ಎರಡು ತಿಂಗಳ ಹಿಂದೆಯಷ್ಟೇ, ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಂಗನಾ ತಮ್ಮ ಪ್ರೇಮ್ ಕಹಾನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ''ನನ್ನ ಲವ್ ಲೈಫ್ ತುಂಬಾ ಚೆನ್ನಾಗಿದೆ. ಅದನ್ನ ನಾನು ಪಬ್ಲಿಕ್ ಆಗಿ ಹೇಳ್ಬೇಕೆಂದರೆ ಎಲ್ಲವೂ ಪಕ್ಕಾ ಆಗ್ಬೇಕು. ಇನ್ನೂ ಕೆಲವು ವಿಷಯಗಳು ನಿರ್ಧಾರವಾಗಬೇಕು. ಎಲ್ಲವೂ ಸರಿಹೋಗುತ್ತೆ ಅನ್ನುವ ನಂಬಿಕೆ ಇದೆ'', ಅಂತ ಕಂಗನಾ ಹೇಳಿಕೆ ನೀಡಿದ್ದರು. [ಮರಿದು ಬಿತ್ತು ಹೃತಿಕ್ ರೋಷನ್ ಮದುವೆ]

ಸಂದರ್ಶನದಲ್ಲಿ ತಮ್ಮ ಪ್ರಿಯತಮನ ಹೆಸರನ್ನ ಕಂಗನಾ ಬಾಯ್ಬಿಟ್ಟಿರಲಿಲ್ಲ. ''ಎಲ್ಲವೂ ಅಂದುಕೊಂಡಂತೆ ಆದ್ರೆ ಇಡೀ ಜಗತ್ತಿಗೆ ತಿಳಿಸುವೆ'', ಆಂದಿದ್ದ ಕಂಗನಾ ಈಗೇನಾದರೂ ಬಹಿರಂಗಗೊಳಿಸಿಬಿಟ್ರಾ? ಗೊತ್ತಿಲ್ಲ. ಆದ್ರೆ ಕಂಗನಾಗೂ ಹೃತಿಕ್ ಗೂ ಲಿಂಕ್ ಮಾಡಿ ಬರೆದಿರುವ ಸುದ್ದಿಗಳು ಬಾಲಿವುಡ್ ನಲ್ಲಿ ಬಿಸಿದೋಸೆಯಂತೆ ಸೇಲ್ ಆಗುತ್ತಿದೆ.

Hrithik3

ಕಂಗನಾ ತಮ್ಮ ಲವ್ ಸ್ಟೋರಿ ಬಗ್ಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ಹೃತಿಕ್ ವಿಚ್ಛೇಧನಕ್ಕಾಗಿ ಕೋರ್ಟ್ ಗೆ ಅಲೆದಾಡುತ್ತಿದ್ದರು. ಇದ್ರಿಂದ ಅಂದು ಕಂಗನಾ ತಮ್ಮ ಇನಿಯ (ಹೃತಿಕ್ ) ಹೆಸರನ್ನು ಉಲ್ಲೇಖಿಸಲಿಲ್ಲ, ಈಗ ಬಹಿರಂಗವಾಗುವ ಸಾಧ್ಯತೆ ಇದೆ ಅಂತ ಆಂಗ್ಲ ಪತ್ರಿಕೊಂದು ವರದಿ ಮಾಡಿದೆ. [ಸುಸಾನೆ ಜೀವನಾಂಶ ಮೊತ್ತ ಕೇಳಿ ಹೃತಿಕ್ ಸುಸ್ತು]

ಇದರಲ್ಲಿ ಸತ್ಯವಿದೆಯೋ ಇಲ್ಲವೋ, ಆದ್ರೆ, ಹೃತಿಕ್ ಕೊಟ್ಟಿರುವ ಪ್ರತಿಕ್ರಿಯೆ ಮಾತ್ರ ಮಜವಾಗಿದೆ. ಕಂಗನಾ ಜೊತೆಗಿನ ತಮ್ಮ ಲಿಂಕಪ್ ಬಗ್ಗೆ ಟ್ವಿಟ್ಟರ್ ನಲ್ಲಿ ರಿಯಾಕ್ಟ್ ಮಾಡಿರುವ ಹೃತಿಕ್, ''ಈ ಸುದ್ದಿ ಎಷ್ಟು ಅಸಂಬದ್ಧವಾಗಿದೆ ಅಂದ್ರೆ, ನನಗೆ ಕೋಪ ಕೂಡ ಬರುತ್ತಿಲ್ಲ. ಪ್ರತಿಕೆಯವರು ಮತ್ತು ಲೇಖನ ಬರೆದವರು ಭ್ರಮೆಯಲ್ಲಿದ್ದಾರಾ?'', ಅಂತ ಪ್ರಶ್ನಿಸಿದ್ದಾರೆ.

ಇನ್ನೂ ಇದೇ ವರದಿಯ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಹೃತಿಕ್, ತಾವು ಸಿಂಗಲ್ ಆಗಿರುವುದರ ಬಗ್ಗೆ ಪ್ರತಿಕೆಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳ ಕುರಿತು ವ್ಯಂಗ್ಯವಾಡಿದ್ದಾರೆ.

ಹೃತಿಕ್ ಅಭಿಮಾನಿಗಳ ಪ್ರಕಾರ, ಇಂತಹ ಸುದ್ದಿಗಳಿಗೆ ಹೃತಿಕ್ ನೀಡಿರುವ ಪ್ರತಿಕ್ರಿಯೆ ಸರಿಯಾಗಿದೆ. ಹೃತಿಕ್, ಸುಸಾನೆ ರಿಂದ ಬೇರಾಗುವುದಕ್ಕೆ ಹಲ ಕಾರಣಗಳಿರಬಹುದು. ಆದರೆ ಸುಸಾನೆ ಮೇಲೆ ಹೃತಿಕ್ ಗೆ ಈಗಲೂ ಬೆಟ್ಟದಷ್ಟು ಪ್ರೀತಿಯಿದೆ ಅನ್ನುವುದಕ್ಕೆ ಹೃತಿಕ್ ರೋಷನ್ ಟ್ವಿಟ್ಟರ್ ಅಕೌಂಟ್ ನಲ್ಲಿರುವ ವಾಲ್ ಪೇಪರ್ರೇ ಪ್ರತ್ಯಕ್ಷ ಸಾಕ್ಷಿ.

Hrithik4


ಹೃತಿಕ್-ಸುಸಾನೆ ಒಟ್ಟಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಹೃತಿಕ್ ತಮ್ಮ ಟ್ವಿಟ್ಟರ್ ಅಕೌಂಟ್ ವಾಲ್ ಪೇಪರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸುಸಾನೆ-ಅರ್ಜುನ್ ರಾಂಪಾಲ್ ಲಿಂಕಪ್ ಬಗ್ಗೆ ವರದಿಗಳು ಬಂದಾಗಲೂ ಹೃತಿಕ್, ಪತ್ರಿಕೆಗಳ ವಿರುದ್ಧ ಕೆಂಡಕಾರಿದ್ದರು. ಇಬ್ಬರ ನಡುವೆ ದ್ವೇಷವಿದ್ದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ?

ಯಾರು ಏನೇ ಲಿಂಕಪ್ ಮಾಡಿ ಏನೇ ಗುಲ್ಲೆಬ್ಬಿಸದರೂ, ಹೃತಿಕ್ ಗೆ ಸುಸಾನೆ ಮಾತ್ರ ಜಗತ್ತು. ಅದನ್ನ ಈಗಾಗಲೇ ಹೃತಿಕ್ ಒಪ್ಪಿಕೊಂಡಿದ್ದಾರೆ ಕೂಡ. ಒಂಟಿಯಾಗಿರುವ ನೋವಲ್ಲಿರುವ ಹೃತಿಕ್ ಸದ್ಯಕ್ಕೆ ಈ ಗಾಸಿಪ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಆದ್ರೆ ಇದಕ್ಕೆ ಕಂಗನಾ ಏನ್ ಹೇಳ್ತಾರೋ? (ಏಜೆನ್ಸೀಸ್)

English summary
Rumours are surrounding that Hrithik Roshan, who has recently been divorced, has found his love in Actress Kangana. Hrithik is currently maintaining his single-status, has taken his twitter account to react about the fake reports.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada