For Quick Alerts
  ALLOW NOTIFICATIONS  
  For Daily Alerts

  ಕಣ್ಣಾಮುಚ್ಚಾಲೆ ಆಡಿ ಕಡೆಗೆ ಜೂಟಾಟ ಆಡಿದ ತಾರೆ

  By Rajendra
  |

  ಗ್ಯಾಂಗ್‌ಸ್ಟರ್ ಹಾಗೂ ಫ್ಯಾಷನ್ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಬೌಂಡರಿ ಲೌನ್ ಎಳೆದುಕೊಂಡ ಕಂಗನಾ ರನೌತ್ ಈಗೀಗಷ್ಟೇ ಬಾಲಿವುಡ್ ನಲ್ಲಿ ಭದ್ರವಾಗಿ ನೆಲೆನಿಲ್ಲಲು ಹವಣಿಸುತ್ತಿದ್ದಾರೆ. ಒಂದು ವರ್ಷದಿಂದ ತನ್ನ ಬಾಯ್ ಫ್ರೆಂಡ್ ಜೊತೆ ಕಣ್ಣಾಮುಚ್ಚಾಲೆ ಆಡುತ್ತಾ ಬಂದ ಈಕೆ ಈಗ ಇದ್ದಕ್ಕಿದ್ದಂತೆ ಜೂಟಾಟ ಆಡಿ ಆತನಿಗೆ ಕೈಕೊಟ್ಟಿದ್ದಾಳೆ.

  ಇಷ್ಟು ದಿನಗಳ ಕಾಲ ಇವರಿಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದರು. ಯುಕೆ ಮೂಲದ ವೈದ್ಯ ನಿಕೋಲಸ್ ಲಾಫಿರ್ತಿ ಜೊತೆ ಕಂಗನಾ ಡೇಟಿಂಗ್ ಮಾಡುತ್ತಿದ್ದರು. ಆದರೆ ನಿಕೋಲಸ್ ಮಾತ್ರ ಕೊಂಚ ಆತುರ ಪಟ್ಟಿದ್ದಾನೆ. ಬೇಗ ಮದುವೆಯಾಗಿ ಮಕ್ಕಳೂ ಬೇಕು ಎಂದಿದ್ದಾನೆ.

  ಆದರೆ ಇಷ್ಟು ಬೇಗ ಮದುವೆಯಾಗಲು ಕಂಗನಾಗೆ ಸುತಾರಾಂ ಇಷ್ಟವಿರಲಿಲ್ಲವಂತೆ. ಹಾಗಾಗಿ ಆಕೆ ಈಗ ನಿಕೋಲಸ್ ಗೆ ಕೈಕೊಟ್ಟು ತನ್ನ ಕೇರಿಯರ್ ಬಗ್ಗೆ ಗಮನಹರಿಸಿದ್ದಾರಂತೆ. ಈಗೀಗಷ್ಟೇ ತಾನು ಚಿತ್ರರಂಗದಲ್ಲಿ ನೆಲೆನಿಂತುಕೊಳ್ಳುತ್ತಿದ್ದೇನೆ. ಈಗ ಮದುವೆಯಾದರೆ ಪ್ರಾಬ್ಲಂ ಆಗುತ್ತದೆ ಎಂಬುದೇ ಆಕೆ ದೂರ ಸರಿಯಲು ಕಾರಣ ಎನ್ನಲಾಗಿದೆ.

  ಕಂಗನಾಗೆ ವಯಸ್ಸು ಬೇರೆ ಇನ್ನೂ 25ರ ಪ್ರಾಯ. ಇಷ್ಟುಬೇಗ ಮದುವೆಯಾಗಿ ಆಕೆ ಮಾಡುವುದಾದರೂ ಏನು ಬಿಡಿ ಎಂದೂ ಕೆಲವರು ಆಕೆಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಕಂಗನಾ ಮಾತ್ರ ಕೈಗೂ ಸಿಗುತ್ತಿಲ್ಲ Callಗೂ ಸಿಗುತ್ತಿಲ್ಲ. (ಏಜೆನ್ಸೀಸ್)

  English summary
  Bollywood actress Kangana Ranaut parted ways with her British Boyfriend UK-based doctor Nicholas Lafferty. Nick wanted to take the relationship to the next level and Kangana wasn’t ready, professionally and personally, to take that plunge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X