»   » ಹಾಲಿವುಡ್ ನಲ್ಲಿ ಮಿಂಚಲಿದ್ದಾರಂತೆ ಕನ್ನಡಿಗ ಅನೂಪ್ ರೇವಣ್ಣ.!

ಹಾಲಿವುಡ್ ನಲ್ಲಿ ಮಿಂಚಲಿದ್ದಾರಂತೆ ಕನ್ನಡಿಗ ಅನೂಪ್ ರೇವಣ್ಣ.!

Posted By:
Subscribe to Filmibeat Kannada

ಬೆಂಗಳೂರು ಬೆಡಗಿ... ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ಅಂಗಳದಿಂದ ಅನೇಕ ತಾರೆಯರು ಹಾಲಿವುಡ್ ಗೆ ಪದಾರ್ಪಣೆ ಮಾಡಿದ್ದಾರೆ.

ಈಗ ಸ್ಯಾಂಡಲ್ ವುಡ್ ನಿಂದ ಕನ್ನಡಿಗ ಅನೂಪ್ ರೇವಣ್ಣ ಹಾಲಿವುಡ್ ಗೆ ಹಾರುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. 'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಾಜಕಾರಣಿ ರೇವಣ್ಣ ಪುತ್ರ ಅನೂಪ್ ಈಗ ಹಾಲಿವುಡ್ ಮೇಲೆ ಕಣ್ಣಿಟ್ಟಿರುವ ಹಾಗಿದೆ. ಮುಂದೆ ಓದಿ...

ಅಮೇರಿಕಾದಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿರುವ ಅನೂಪ್

'ಲಕ್ಷ್ಮಣ' ಚಿತ್ರದ ಬಳಿಕ 'ಪಂಟ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಅನೂಪ್ ರೇವಣ್ಣ, 'ಪಂಟ' ಚಿತ್ರೀಕರಣದ ನಂತರ ಆಕ್ಟಿಂಗ್ ಕೋರ್ಸ್ ಗಾಗಿ ಅಮೇರಿಕಾಗೆ ಹೋಗಿದ್ದರಂತೆ. ಅಲ್ಲಿ ಹಾಲಿವುಡ್ ನ ಅನೇಕ ನಟರು, ನಿರ್ದೇಶಕರು ಅನೂಪ್ ಗೆ ನಟನೆಯ ಪಾಠ ಹೇಳಿಕೊಟ್ಟಿದ್ದಾರೆ. ಹಾಲಿವುಡ್ ನಟ-ನಿರ್ದೇಶಕರ ಜೊತೆ ಅನೂಪ್ ಒಡನಾಟ ಚೆನ್ನಾಗಿರುವುದರಿಂದ, ಹಾಲಿವುಡ್ ನಲ್ಲಿ ಅನೂಪ್ ಗೆ ಮಿಂಚುವ ಅವಕಾಶ ಸಿಕ್ಕಿದೆ.

'ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ'

ಮೂರು ಹಾಲಿವುಡ್ ಚಿತ್ರಗಳಲ್ಲಿ ಮಿಂಚಲಿದ್ದಾರೆ ಅನೂಪ್

ಮೂರು ಹಾಲಿವುಡ್ ಚಿತ್ರಗಳಲ್ಲಿ ನಟ ಅನೂಪ್ ರೇವಣ್ಣ ಮಿಂಚಲಿದ್ದಾರಂತೆ. ಈ ಚಿತ್ರಗಳು ಈ ವರ್ಷಾಂತ್ಯ ಅಥವಾ ಮುಂದಿನ ವರ್ಷ ಆರಂಭ ಆಗುವ ಸಾಧ್ಯತೆ ಇದೆ.

ಹಾಲಿವುಡ್ ಚಿತ್ರಗಳಲ್ಲಿ ಅನೂಪ್ ಗೆ ಯಾವ ರೋಲ್.?

ಹಾಲಿವುಡ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಲು ಅನೂಪ್ ರೇವಣ್ಣ ರವರಿಗೆ ಅವಕಾಶ ಲಭಿಸಿದೆ. ಅಷ್ಟಕ್ಕೂ, ಹಾಲಿವುಡ್ ನಲ್ಲಿ ಅನೂಪ್ ಗೆ ಅವಕಾಶ ನೀಡಿರುವ ನಿರ್ದೇಶಕ ಯಾರು, ಚಿತ್ರತಂಡ ಯಾವುದು ಎಂಬುದರ ಬಗ್ಗೆ ಅನೂಪ್ ಇನ್ನೂ ತುಟಿಕ್ ಪಿಟಿಕ್ ಎಂದಿಲ್ಲ.

ಕನ್ನಡದಲ್ಲಿಯೂ ಅನೂಪ್ ಬಿಜಿ

ಸದ್ಯ ಅನೂಪ್ ರೇವಣ್ಣ ನಟಿಸಿರುವ 'ಪಂಟ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಹಲವು ಕಥೆಗಳನ್ನು ಕೇಳಿರುವ ಅನೂಪ್ ಎರಡು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಮಾಹಿತಿ ಇದೆ.

English summary
According to the latest Grapevine, Kannada Actor Anup Revanna to make Hollywood Debut

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada