»   » ಮತ್ತೆ 'ಶಿವಾಜಿನಗರದ' ಜೋಡಿ ಮಾಡುತ್ತಾ ಪ್ರೇಕ್ಷಕರಿಗೆ ಮೋಡಿ

ಮತ್ತೆ 'ಶಿವಾಜಿನಗರದ' ಜೋಡಿ ಮಾಡುತ್ತಾ ಪ್ರೇಕ್ಷಕರಿಗೆ ಮೋಡಿ

Posted By:
Subscribe to Filmibeat Kannada

ನಿರ್ದೇಶಕ ಪಿ.ಎನ್ ಸತ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಪಕ್ಕಾ ಮಾಸ್ ಅಂಡ್ ರೋಮ್ಯಾಂಟಿಕ್ ಸಿನಿಮಾ 'ಶಿವಾಜಿನಗರ'ದಲ್ಲಿ ಒಂದಾಗಿದ್ದ ದುನಿಯಾ ವಿಜಯ್ ಮತ್ತು 'ಪ್ಯಾರ್ಗೆ ಆಗ್ಬುಟ್ಟೈತೆ' ನಟಿ ಪಾರುಲ್ ಯಾದವ್ ಅವರು ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಕಮ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಈ ಜೋಡಿಗಳು ಮತ್ತೆ ತೆರೆಯ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರಂತೆ. ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ನಿರ್ಮಾಪಕ ಸುಧೀಂದ್ರ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನುತ್ತವೆ ಮೂಲಗಳು.[ವಿಮರ್ಶೆ: ಶಿವಾಜಿನಗರ ಪಕ್ಕಾ ಗಾಂಧಿನಗರ ಸಿನಿಮಾ]


Kannada Actor Duniya Vijay and Actress Parul Yadav to team up again

ಇನ್ನೂ ಕೂಡ ಯಾವುದೇ ಅಧಿಕೃತವಾಗಿ ಘೋಷಣೆ ಆಗದಿದ್ದರೂ ದುನಿಯಾ ವಿಜಯ್ ಮತ್ತು ನಟಿ ಪಾರುಲ್ ಯಾದವ್ ಅವರು ಓಂ ಪ್ರಕಾಶ್ ರಾವ್ ಅವರ ಜೊತೆ ಇನ್ನೂ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಪಕ್ಕಾ. ಆಗಸ್ಟ್‌ 7 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯದಲ್ಲೇ ಪಾರುಲ್ ಯಾದವ್ ಅವರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.


Kannada Actor Duniya Vijay and Actress Parul Yadav to team up again

'ಜೆಸ್ಸಿ' ನಂತರ ಕೈ ಖಾಲಿ ಮಾಡಿಕೊಂಡು ಕುಳಿತಿದ್ದ ನಟಿ ಪಾರುಲ್ ಅವರು ಇದೀಗ ಈ ಯೋಜನೆಗೆ ಅಸ್ತು ಎಂದಿದ್ದಾರೆ. ಸದ್ಯಕ್ಕೆ ಹಲವಾರು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಹಿಡಿದು ಓಡಾಡುತ್ತಿರುವ ದುನಿಯಾ ವಿಜಯ್ ಅವರು 'ದನ ಕಾಯೋನು' ಬಿಡುಗಡೆಗೆ ಕಾದಿದ್ದು, ನಾಗಶೇಖರ್ ಅವರ 'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.


Kannada Actor Duniya Vijay and Actress Parul Yadav to team up again

ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಮತ್ತು ಪಾರುಲ್ ಯಾದವ್ ಅವರು ಓಂ ಪ್ರಕಾಶ್ ರಾವ್ ಅವರ ಜೊತೆ ಸೇರಿಕೊಂಡು ಮತ್ತೆ ಪ್ರೇಕ್ಷಕರನ್ನು ಕಮಾಲ್ ಮಾಡಲಿದ್ದಾರೆ.

English summary
Kannada Actor Duniya Vijay and Kannada Actress Parul Yadav, who were seen last in Kannada Movie 'Shivajinagara' directed by PN Satya. Now will be working together again for a movie to be directed by Om Prakash Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada