»   » ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?

ರಾಕ್ ಲೈನ್ ಜೊತೆ 'ವಿಐಪಿ'ಗೆ ಕೈ ಜೋಡಿಸುತ್ತಾರಾ ಮನೋರಂಜನ್?

Posted By:
Subscribe to Filmibeat Kannada

'ಕನಸುಗಾರ' ರವಿಚಂದ್ರನ್ ಪುತ್ರ ಮನೋರಂಜನ್ ಅವರ 'ಸಾಹೇಬ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ನಡುವೆ ಮನೋರಂಜನ್ ಅವರ ಮೊದಲ ಸಿನಿಮಾ ತೆರೆ ಕಾಣುವ ಮುನ್ನವೇ ಮತ್ತೊಂದು ಚಿತ್ರದಲ್ಲಿ ನಟಿಸಲು ಆಫರ್ ಗಿಟ್ಟಿಸಿಕೊಂಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಹೌದು ನಟ ಮನೋರಂಜನ್ ಅವರು ನಿರ್ಮಾಪಕ ರಾಕ್ ಲೈನ್ ಅವರ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.['ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ]


Kannada Actor Manoranjan's next movie with Producer Rockline Venkatesh

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತಮಿಳು ನಟ ಧನುಷ್ ಅವರ 25ನೇ ಹಿಟ್ ಸಿನಿಮಾ 'ವಿ.ಐ.ಪಿ' (ವೇಲೈಯಿಲಾ ಪಟ್ಟದಾರಿ)ಯನ್ನು ಕನ್ನಡಕ್ಕೆ ತರುತ್ತಿರುವ ವಿಚಾರವನ್ನು ನಾವು ಈ ಮೊದಲೇ ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.[ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್]


Kannada Actor Manoranjan's next movie with Producer Rockline Venkatesh

ಇದೀಗ ಆ ಚಿತ್ರಕ್ಕೆ ನಾಯಕ ನಟನಾಗಿ ಮನೋರಂಜನ್ ಅವರನ್ನು ಆಯ್ಕೆ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅತೀ ಶೀಘ್ರದಲ್ಲಿ ಮನೋರಂಜನ್ ಅವರು ರಾಕ್ ಲೈನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರೀಮೇಕ್ ಚಿತ್ರಕ್ಕೆ ಸಹಿ ಮಾಡಲಿದ್ದಾರೆ.


ತಮಿಳಿನಲ್ಲಿ ಧನುಷ್ ಅವರು ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಮನೋರಂಜನ್ ಅವರು ನಿರ್ವಹಿಸಲಿದ್ದು, ಈ ಬಗ್ಗೆ ಮನೋರಂಜನ್ ಅವರ ಜೊತೆ ಮಾತುಕತೆ ನಡೆಸಲಾಗಿದೆ.[ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ]


Kannada Actor Manoranjan's next movie with Producer Rockline Venkatesh

ನಟ ಮನೋರಂಜನ್ ತಮ್ಮ ತಂದೆ ರವಿಚಂದ್ರನ್ ಅವರ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮನೋರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಖತ್ ಬ್ಯುಸಿ ನಟ ಆಗಲಿದ್ದಾರೆ.

English summary
Kannada Actor Manoranjan, who will be marking his debut with Kannada Movie 'Saheba', has already been offered his next. A source says his second film will be with Rockline Venkatesh. The producer has approached him to be part of the Tamil remake of Dhanush-starrer Velaiyilla Pattathari (VIP) in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada