»   » ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?

ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?

By: ಸೋನು ಗೌಡ
Subscribe to Filmibeat Kannada

'ದುನಿಯಾ' ಚಿತ್ರದಲ್ಲಿ 'ಲೂಸ್ ಮಾದ' ಅನ್ನೋ ಪಾತ್ರ ವಹಿಸಿ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆದ ನಟ ಯೋಗೇಶ್ ಅವರು 'ನಂದ ಲವ್ಸ್ ನಂದಿತ' ಚಿತ್ರದಲ್ಲಿ ನಟಿ ನಂದಿತಾ ಶ್ವೇತಾ ಅವರ ಜೊತೆ 'ಜಿಂಕೆ ಮರೀನಾ' ಅಂತ ಡ್ಯುಯೆಟ್ ಹಾಡಿ ಗಾಂಧಿನಗರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದರು.

ತದನಂತರ ನಿರ್ದೇಶಕ ಎ.ಪಿ ಅರ್ಜುನ್ ಅವರ 'ಅಂಬಾರಿ' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡು ತಮ್ಮ ಅದ್ಭುತ ಅಭಿನಯವನ್ನು ಇಡೀ ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟರು.['ಭಾಗ್ಯರಾಜ್' ಚಿತ್ರಕ್ಕೆ ಮಹೇಶ್ ಹೀರೋ ಆಗಲು ಕಾರಣ ಯಾರು ಗೊತ್ತಾ?]

ಗ್ಲಾಮರ್ ಇಲ್ಲಾಂದ್ರುನೂ ತಮ್ಮ ನಟನೆಯ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ ಅದೇ ಲೂಸ್ ಮಾದ ಯೋಗಿ ಅವರದು ಸದ್ಯಕ್ಕೆ ಗಾಂಧಿನಗರದಲ್ಲಿ ಪತ್ತೇನೇ ಇಲ್ಲ.

ಇನ್ನು ಯೋಗಿ ಅವರದು ಹಲವಾರು ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆ ಹಂತದಲ್ಲಿದ್ದರೂ ಬಿಡುಗಡೆ ಆಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.[ತಮಿಳು ರಿಮೇಕ್ ನಲ್ಲಿ ದರ್ಶನ್-ಯೋಗೇಶ್ ಜುಗಲ್ ಬಂದಿ?]

ಸುಮಾರು 3 ಚಿತ್ರಗಳು ಸದ್ಯಕ್ಕೆ ರಿಲೀಸ್ ಆಗಲು ರೆಡಿ ಆಗಿದ್ದರೂ ಯಾವುದು ಮೊದಲು ಬಿಡುಗಡೆ ಆಗುತ್ತೆ ಎಂಬುದು ಖುದ್ದು ಯೋಗಿ ಅವರಿಗೂ ಮಾಹಿತಿ ಇಲ್ಲ.[ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'! ]

ಅಷ್ಟಕ್ಕೂ ಇದಕ್ಕೆಲ್ಲಾ ಕಾರಣ ಏನು? ಯೋಗಿ ಮತ್ತೆ ಗಾಂಧಿನಗರದಲ್ಲಿ ಟೇಕಾಫ್ ಆಗಿ ಇಂಡಸ್ಟ್ರಿಯಲ್ಲಿ ಮತ್ತೆ ಹೆಸರು ಮಾಡಬಹುದೇ ಅನ್ನೋದಕ್ಕೆ ಉತ್ತರಗಳಿವೆ ಕೆಳಗಿನ ಸ್ಲೈಡ್ಸ್ ಗಳಲ್ಲಿ ಮುಂದೆ ಓದಿ....

ಯೋಗಿ ಅಭಿನಯದ ಮೂರು ಚಿತ್ರಗಳು

ಸದ್ಯಕ್ಕೆ ಲೂಸ್ ಮಾದ ಯೋಗಿ ಅಭಿನಯದ 'ಕಾಲಭೈರವ', 'ಸ್ನೇಕ್ ನಾಗ', 'ಕೋಲಾರ', ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ಕಾಯುತ್ತಿವೆ. ಇದರಲ್ಲಿ ಯಾವುದು ಮೊದಲು ಬಿಡುಗಡೆ ಆಗುತ್ತೆ ಎಂಬುದು ಸ್ವತಃ ಯೋಗಿ ಅವರಿಗೂ ಗೊತ್ತಿಲ್ಲವಂತೆ.['ಲೂಸ್ ಮಾದ' ಯೋಗಿಗೆ ಸಿಲ್ವರ್ ಜ್ಯೂಬಿಲಿ ಸಂಭ್ರಮ]

ಯೋಗಿ-ದರ್ಶನ್ ಸಿನಿಮಾ

ನಟ ದರ್ಶನ್ ಮತ್ತು ಯೋಗಿ ಅವರು ತಮಿಳಿನ 'ಪೂಜೈ' ರಿಮೇಕ್ ನಲ್ಲಿ ಒಂದಾಗುತ್ತಾರೆ, ಬುಲೆಟ್ ಪ್ರಕಾಶ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ದಿನಕರ್ ತೂಗುದೀಪ್ ಮತ್ತು ಬುಲೆಟ್ ಕಚ್ಚಾಟದಿಂದ ಆ ಸಿನಿಮಾ ಯಾವಾಗ ಸೆಟ್ಟೇರುತ್ತೋ ಗೊತ್ತಿಲ್ಲ. ಅಲ್ಲಿಗೆ ಯೋಗಿ ಅವರ ಕೆರಿಯರ್ ನಲ್ಲಿ ಪವಾಡ ಸಂಭವಿಸಬಹುದು ಎಂದಿದ್ದ ಸಣ್ಣ ಆಸೆಯೂ ಈಗ ಕಮರಿದೆ.

ಇದಕ್ಕೆಲ್ಲಾ ಕಾರಣ 'ಯಕ್ಷ' ಸಿನಿಮಾ

ತಮ್ಮ ಸಿನಿ ಕೆರಿಯರ್ ಹೀಗಾಗಲು ಕಾರಣ ಏನೂ ಅಂದ್ರೆ 'ಯಕ್ಷ' ಸಿನಿಮಾದ ಸೋಲು ಅಂತಾರೇ ಯೋಗಿ. ಹೌದು ಈ ಚಿತ್ರದ ಬಜೆಟ್ ಅಂದುಕೊಂಡಿದ್ದಕ್ಕಿಂತ ಜಾಸ್ತಿ ಆಗುವುದರ ಜೊತೆ ಜೊತೆಗೆ ನಷ್ಟ ಕೂಡ ಸ್ವಲ್ಪ ಜಾಸ್ತೀನೇ ಆಯ್ತಂತೆ. ಅದೇ ಕಾರಣಕ್ಕೆ ಇದ್ದ ಬದ್ದ ಸಿನಿಮಾ ಒಪ್ಪಿಕೊಂಡು ಕೆರಿಯರ್ ಹೀಗಾಯ್ತು ಅಂತಾರೆ.

ನಷ್ಟ ರಿಕವರಿ ಮಾಡಲು ಹೋಗಿ ಏನೋ ಆಯ್ತು

ಇಲ್ಲಿಯವರೆಗೆ ಆದ ನಷ್ಟ ರಿಕವರಿ ಆಗಲಿ ಎಂದು ಯೋಗಿ ಅವರು ಒಂದರ ಹಿಂದೆ ಇನ್ನೊಂದು ಅಂತ ಸಿನಿಮಾ ಒಪ್ಪಿಕೊಂಡರು. ಸದ್ಯಕ್ಕೆ ಯಾವುದೇ ಪರಿಹಾರ ಅಂತು ಕಂಡುಬರುತ್ತಿಲ್ಲ. ಈಗಾಗಲೇ ತಯಾರಾಗಿರುವ ಎಲ್ಲಾ ಸಿನಿಮಾಗಳು ಬಿಡುಗಡೆ ಆಗಬೇಕು ತದನಂತರ ಒಂದಿಷ್ಟು ಸಿನಿಮಾಗಳು ಬ್ರೇಕ್ ನೀಡಿದರೆ, ತಮ್ಮ ಕೆರಿಯರ್ ಸರಿ ಹೋಗಬಹುದು ಎಂಬುದು ಯೋಗಿ ಅವರ ಅಭಿಪ್ರಾಯ. ಆದರೆ ಯೋಗಿ ಅವರಿಗೆ ಯಾವ ಸಿನಿಮಾ ಬ್ರೇಕ್ ನೀಡಬಹುದು ಅನ್ನೋ ವಿಚಾರ ಸದ್ಯಕ್ಕೆ ಯಾರಿಗೂ ಗೊತ್ತಿಲ್ಲದ ಸಂಗತಿ.

ಕಿರುತೆರೆ ಕೂಡ ಆಯ್ತು

ಸಿನಿಮಾದಲ್ಲಿ ಅವಕಾಶ ಕಡಿಮೆ ಆದಾಗ ಯೋಗಿ ಅವರು ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫು ಸೂಪರ್ ಗುರು' ರಿಯಾಲಿಟಿ ಶೋಗೆ ಜಡ್ಜ್ ಆಗಿ ಗುರುಪ್ರಸಾದ್ ಅವರ ಜೊತೆ ಮಿಂಚಿ ಅಲ್ಲೂ ಒಂದು ಕೈ ನೋಡಿ ಬಿಟ್ಟಿದ್ದರು.

'ಕಿರಗೂರಿನ ಗಯ್ಯಾಳಿಗಳು' ಬಿಡುಗಡೆ ಹಂತದಲ್ಲಿದೆ

ಸದ್ಯಕ್ಕೆ ಯೋಗಿ ಅವರು ವಿಶೇಷ ಪಾತ್ರ ವಹಿಸಿರುವ, ನಿರ್ದೇಶಕಿ ಸುಮನಾ ಕಿತ್ತೂರು ಅವರ 'ಕಿರಗೂರಿನ ಗಯ್ಯಾಳಿಗಳು' ರಿಲೀಸ್ ಗೆ ರೆಡಿಯಾಗಿದ್ದು, ಇದೇ ತಿಂಗಳು ಬಿಡುಗಡೆ ಆಗುವ ಸಂಭವವಿದೆ. ಇದರಲ್ಲಿ ಯೋಗಿ ಅವರ ಪಾತ್ರ ನೋಡಿ ಹೊಸ ಅವಕಾಶಗಳು ಸಿಕ್ಕರೂ ಅಚ್ಚರಿ ಇಲ್ಲ. ಆವಾಗಾದ್ರೂ ಯೋಗಿ ಅವರಿಗೆ ಒಂದೊಳ್ಳೆ ಬ್ರೇಕ್ ಸಿಗಬಹುದು ಅನ್ನೋದು ನಮ್ಮ ಅಭಿಪ್ರಾಯ.

English summary
Kannada Actor Yogesh's Career falling in kannada cinema industry. Here is the reason, Check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada